ರೋಟರಿ ಸಂಸ್ಥೆಯಿಂದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಹಿರಿಯೂರು :

        ನಗರದ ರೋಟರಿ ಹಾಗೂ ರೆಡ್‍ಕ್ರಾಸ್‍ನಂತಹ ಸೇವಾಸಂಸ್ಥೆಗಳು ಸಾರ್ವಜನಿಕರ ಆರೋಗ್ಯರಕ್ಷಣೆಗಾಗಿ ಜನÀಪರ ಕಾಳಜಿ ಹೊಂದಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ರೋಟರಿ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ ಹೇಳಿದರು.

       ನಗರದ ಸರ್ವೋದಯ ಥಿಯೋಸೋಫಿಕಲ್ ಸೊಸೈಟಿ ಸಭಾಂಗಣದಲ್ಲಿ ರೋಟರಿ ಹಾಗೂ ರೆಡ್‍ಕ್ರಾಸ್‍ಸಂಸ್ಥೆ, ಭಾರತ್ ಸ್ಕೌಟ್ ಅಂಡ್ ಗೈಡ್ಸ್, ಸಾರ್ವಜನಿಕ ಆಸ್ಪತ್ರೆ ಹಿರಿಯೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂ.ಆರ್.ಟಿ ಕಣ್ಣಿನ ಆಸ್ಪತ್ರೆ ಕೊಂಡ್ಲಳ್ಳಿ, ಇದರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಚಿಕಿತ್ಸಾ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಮ್ಮ ಸಂಸ್ಥೆಗಳ ಪದಾಧಿಕಾರಿಗಳು ನಿಸ್ವಾರ್ಥ ಸೇವೆಯಿಂದ ಪ್ರತಿತಿಂಗಳು ನಡೆಯುವ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಈ ಶಿಬಿರಗಳ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು.

        ರೆಡ್‍ಕ್ರಾಸ್ ಚೇರ್ಮನ್ ಬಿ.ಎಸ್.ನವಾಬ್‍ಸಾಬ್ ಮಾತನಾಡಿ, ಜನರಸೇವೆ ಮಾಡುವುದರಿಂದ ಭಗವಂತನ ಸೇವೆಯನ್ನು ಮಾಡಿದಂತಹ ಪುಣ್ಯ ದೊರೆಯುತ್ತದೆ. ನಮ್ಮ ಶಿಬಿರಗಳು ಹೆಚ್ಚು ಹೆಚ್ಚು ಯಶಸ್ವಯಾಗಲು ನಗರದ ದಾನಿಗಳು ಕಾರಣ ಅವರುಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

        ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್‍ಸಂಸ್ಥೆಯ ಎಂ.ಎಸ್.ಸೌಭಾಗ್ಯವತೀದೇವರು, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್‍ಬಾಬು, ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್ ಪರಮೇಶ್ವರ್‍ಭಟ್, ಸತ್ಯನಾರಾಯಣ, ಹೆಚ್.ಎಸ್.ರಾಧಾಕೃಷ್ಣ, ತ್ರಿಯಂಭಕೇಶ್ವರ್, ರೋಟೇರಿಯನ್‍ಗಳಾದ ಎಸ್.ಜೋಗಪ್ಪ, ಹೆಚ್.ಪಿ.ರವೇಂದ್ರನಾಥ್, ಆರ್.ರಂಗನಾಥಪ್ಪ, ಶಿವಲಿಂಗಪ್ಪ, ಓಂಕಾರಪ್ಪ, ಎಂ.ಆರ್.ಟಿ. ಕಣ್ಣಿನ ಆಸ್ಪತ್ರೆ, ನೇತ್ರ ವೈದ್ಯರಾದ ಡಾ||ಕೆ.ನಾಗರಾಜ್ ಮತ್ತು ಸಿಬ್ಬಂದಿಗಳಾದ ರೋಹಿತ್, ಪಂಚಾಕ್ಷರಯ್ಯ, ಲತಾ, ಸತೀಶ್, ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 65 ಜನರಿಗೆ ತಪಾಸಣೆ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap