ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ; ಶಾಂತಿ ಮಾರ್ಗ ಸ್ತಬ್ದಚಿತ್ರಕ್ಕೆ ಅದ್ದೂರಿ ಸ್ವಾಗತ

ಚಿತ್ರದುರ್ಗ,

         ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಸತ್ಯ ಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಎರಡು ಸ್ತಬ್ದಚಿತ್ರವನ್ನು ಆಯೋಜಿಸಲಾಗಿದ್ದು ಶಾಂತಿ ಮಾರ್ಗ ಸ್ತಬ್ದಚಿತ್ರವು ಅಕ್ಟೋಬರ್ 8 ರಂದು ಜವನಗೊಂಡನಹಳ್ಳಿ ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿತು.

        ಸ್ತಬ್ದಚಿತ್ರದಲ್ಲಿ ಬಾಲಕ ಗಾಂಧಿ, ಬ್ಯಾರಿಸ್ಟರ್ ಗಾಂಧಿ, ಭಾರತೀಯ ಸೈನ್ಯ ಶುಶ್ರೂಷಾ ಪಥದಲ್ಲಿ ಗಾಂಧಿ, ದೇಶಿ ಉಡುಪಿನಲ್ಲಿ ಗಾಂಧಿ, ಸಮಾಜ ಪರಿಶೋಧಕ ಗಾಂಧಿ, ಮಗುವಿನ ಜೊತೆ ಗಾಂಧಿ, ಬರವಣಿಗೆಯಲ್ಲಿ ನಿರತ ಗಾಂಧಿ ಹಾಗೂ ಅನಂತದೆಡೆಗೆ ಗಾಂಧಿ ಕುರಿತ ಭಾವಚಿತ್ರಗಳು ಇದರಲ್ಲಿವೆ. ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಚಿತ್ರಣವನ್ನು ನಿರ್ಮಿಸಲಾಗಿದ್ದು ಗಾಂಧಿಯೊಂದಿಗೆ ಹೋರಾಟದಲ್ಲಿ ಭಾಗವಹಿಸಿದ ಜನರ ಗುಂಪಿನ ಚಿತ್ರಣವು ಇದರಲ್ಲಿ ನಿಜರೂಪದಂತಿರುವುದು ವಿಶೇಷವಾಗಿದೆ.

       ಮತ್ತು ಗಾಂಧಿ ಹೇಳಿದಂತಹ ಅನೇಕ ಘೋಷ ವಾಕ್ಯಗಳ ಎಲ್‍ಇಡಿ ಪ್ರದರ್ಶನವು ಇದರಲ್ಲಿ ಲಭ್ಯವಿದೆ. ಗಾಂಧಿ ಹೇಳಿದ ಘೋಷಣ ವಾಕ್ಯಗಳು ಇಂದಿಗೂ ಸತ್ಯವೆನಿಸಿದ್ದು ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು, ಅಹಿಂಸೆ ಪರಮಶ್ರೇಷ್ಠವಾದದು, ನನ್ನ ಜೀವನವೇ ನನ್ನ ಸಂದೇಶ, ಅಹಿಂಸೆ ಧೈರ್ಯದ ಶಿಖರ, ಮನುಕುಲದ ದೊಡ್ಡ ಆಯುಧ ಶಾಂತಿ, ಸರಳತೆ ಎಂಬುದು ಜಾಗತಿಕ ಚಿಂತನೆಯ ಧಾತು ಎಂಬ ಘೋಷ ವಾಕ್ಯಗಳನ್ನು ಬಿತ್ತರಿಸಲಾಗುತ್ತದೆ. ಮತ್ತು ವಾಹರರ ಮೂಲಕ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾತನಾಡಬಾರದು ಎಂಬ ಘೋಷಣೆಗಳು ಗಾಂಧೀಜಿಯವರು ಅನುಸರಿಸಿಕೊಂಡು ಬಂದಂತಹ ಮಾರ್ಗವಾಗಿದ್ದು ಇದರ ಉಲ್ಲೇಖವನ್ನು ಇಲ್ಲಿ ಕಾಣಬಹುದಾಗಿದೆ.

        ಸ್ತಬ್ದಚಿತ್ರವು ಬೆಳಗ್ಗೆ 9 ಗಂಟೆಗೆ ಶಿರಾದಿಂದ ಜವನಗೊಂಡನಹಳ್ಳಿಗೆ ಆಗಮಿಸಿತು. ಬೆ.10 ಗಂಟೆಗೆ ಹಿರಿಯೂರು ಪಟ್ಟಣದಲ್ಲಿ ಸ್ವಾಗತಿಸಿ ಮೆರವಣಿಗೆ ಮೆರವಣಿಗೆ ನಡೆಸಲಾಯಿತು. ಹಿರಿಯೂರು ಪಟ್ಟಣದಲ್ಲಿ ನಗರಸಭೆ ಅಧ್ಯಕ್ಷೆ ಮಂಜುಳಮ್ಮ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜೇಶ್ವರಿಯವರು, ಸದಸ್ಯರಾದ ಚಂದ್ರಶೇಖರ್, ತಿಪ್ಪಮ್ಮ, ವನಿತ, ಮುಖಂಡರಾದ ದ್ಯಾಮೇಗೌಡರು, ಹಾಲಪ್ಪ, ಕೇಶವಮೂರ್ತಿ, ವಿಶ್ವನಾಥ, ನಿಜಲಿಂಗಪ್ಪ ಹಾಗೂ ಇನ್ನಿತರರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಿದರು.

      ಮಧ್ಯಾಹ್ನ 12 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಿದಾಗ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಗಾಂಧೀಜಿವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ವೇಳೆ ನಗರಸಭೆ ಆಯುಕ್ತರಾದ ಚಂದ್ರಪ್ಪ, ವಾರ್ತಾಧಿಕಾರಿ ಧನಂಜಯರವರು ಉಪಸ್ಥಿತರಿದ್ದರು.

      ಸ್ತಬ್ದಚಿತ್ರವು ಮುಖ್ಯರಸ್ತೆಯಲ್ಲಿ ಸಾಗಿ ಮದಕರಿ ವೃತ್ತ, ಡಾ; ಬಿ.ಆರ್.ಅಂಬೇಡ್ಕರ್ ವೃತ್ತ, ಎಸ್.ಬಿ.ಐ. ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕನಕ ವೃತ್ತದವರೆಗೆ ಸಾಗಿ ಮಾಳಪ್ಪನಹಳ್ಳಿ ರಸ್ತೆ ಮಾರ್ಗವಾಗಿ ಮುರುಘಾ ಮಠದ ಮುಂಭಾಗದ ಮೂಲಕ ಎನ್.ಹೆಚ್.4 ಬೈಪಾಸ್ ಮೂಲಕ ಸಾಗಿ ಜೆ.ಸಿ.ಆರ್. ಮುಖ್ಯ ರಸ್ತೆ, ಗಾಯಿತ್ರಿ ವೃತ್ತದ ಮೂಲಕ ಒನಕೆ ಓಬವ್ವ ವೃತ್ತದವರೆಗೆ ಸಾಗಿತು. ನಾಸಿಕ್ ಡೋಲ್ ವಿಜಾಪುರ ಗೊಲ್ಲರಹಟ್ಟಿ ಗಂಗಾಧರಪ್ಪ ಮತ್ತು ತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap