ಬರಡು ನಾಡಿನಲ್ಲಿ ಉಕ್ಕಿದ ಗಂಗೆ

0
23

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದ ನಿರಂತರ ಮಳೆ ವೈಪಲ್ಯ ನಗರದ ಸುಮಾರು 60 ಸಾವಿರ ಜನಸಂಖ್ಯೆಗೆ ಪ್ರತಿನಿತ್ಯ ಕುಡಿಯುವ ನೀರನ್ನು ಒದಗಿಸುವ ಮಹತರವಾದ ಜವಾಬ್ದಾರಿ ನಗರಸಭೆಯ ಆಡಳಿತದ ಮೇಲೆ ಇದ್ದು. ಇತ್ತೀಚೆಗೆ ತಾನೇ ಬೇಸಿಗೆ ಹಿನ್ನೆಲೆಯಲ್ಲಿ ಬೋರ್‍ವೆಲ್‍ಗಳಲ್ಲಿ ನೀರಿನ ಪ್ರಮಾಣ ಕುಂಠಿತವಾಗಿ ಕುಡಿಯುವ ನೀರಿನ ಸಮಸ್ಯೆ ಬಿಗುಡಾಯಿಸುವ ಸಂಭವವಿದೆ ಎನ್ನಲಾಗಿದೆ.

       ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೂಚನೆಯಂತೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಬಳ್ಳಾರಿ ರಸ್ತೆಯ ಸುಶೀಲ್ ಮೀಲ್ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಲಿಡ್ಕರ್ ಬಡಾವಣೆಯಲ್ಲಿ ಸುಮಾರು 162 ನಿವೇಶನಗಳನ್ನು ಗುರುತಿಸಿದ್ದು, ಅಲ್ಲಿ ನೀರು ಒದಗಿಸಬೇಕಾಗಿದೆ. ಅದೇ ರೀತಿ ನಗರದ ಕೆಲವು ಕಡೆ ನೀರಿನ ಅಭಾವ ನಿಯಂತ್ರಿಸಲು ನಗರಸಭೆ ಆಡಳಿತ ತುರ್ತು ಆಪದ್ಧನ ನಿಧಿಯಲ್ಲಿ ಈ ಪ್ರದೇಶದಲ್ಲಿ ಒಟ್ಟು 4 ಕಡೆ ಬೋರ್‍ವೆಲ್ ಪಾಯಿಂಟ್ ನಿಗಧಿಗೊಳಿಸಿ ಶನಿವಾರ ಮಧ್ಯಾಹ್ನ ಮೊದಲನೇ ಪಾಯಿಂಟ್‍ನಲ್ಲೇ ಬಂದೂವರೆ ಇಂಚು ನೀರು ದೊರಕಿದ್ದು, ಸಂತಸ ತಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಮೊದಲನೇ ಒಟ್ಟು 450ಕ್ಕೂ ಹೆಚ್ಚು ಬೋರ್ ಕೊರೆಸಿದಾಗ ಒಂದೂವರೆ ಇಂಚು ನೀರು ಸಿಕ್ಕಿದೆ. ಇನ್ನೂ ಮೂರು ಬೋರ್‍ಗಳನ್ನು ಕೊರೆಸಲಾಗುವುದು ಎಂದಿದ್ಧಾರೆ.

        ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಇಲ್ಲಿನ ವೆಂಕಟೇಶ್ವರ ನಗರದ ಕರೇಕಲ್ ಕರೆ ಆವರಣದಲ್ಲಿ ನಿವೇಶನ ರಹಿತರು ಹಾಗೂ ಬೂದಿಹಳ್ಳಿ ಸಂತ್ರಸ್ತರ ನೆರವಿಗಾಗಿ ಸರ್ಕಾರ ಲಿಡ್ಕರ್ ಸಂಸ್ಥೆ ಮೂಲಕ 162 ನಿವೇಶನಗಳನ್ನು ವಿಂಗಡಿಸಲಾಗಿದೆ. ನಿವೇಶನ ವಿಂಗಡಣೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಲಿಡ್ಕರ್ ಅಧ್ಯಕ್ಷ ಓ.ಶಂಕರ್ ಮಾರ್ಗದರ್ಶನದಲ್ಲಿ ನಡೆಯಿತು. ಶೀಘ್ರದಲ್ಲೇ ಎಲ್ಲಾ ಫಲಾನುಭವಿಗಳಿಗೆ ವಿನೇಶನಗಳ ಹಂಚಿಕೆ ಮಾಡಲಾಗುವುದು ಎಂದಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here