ಕೋಲಾರ:
ಸ್ಕೂಟರ್ನಲ್ಲಿ ಸುತ್ತಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಂದಗುಡಿ ಪೊಲೀಸರು ಬಂಧಿಸಿ 12 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀನಿವಾಸ ಪುರದ ಹೊಡಗೇನಹಳ್ಳಿಯ ಶಫೀವುಲ್ಲಾ (45) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಐಷಾರಾಮಿ ಜೀವನ ನಡೆಸಲು ಬೇರೆ ಕಡೆಯಿಂದ ಗಾಂಜಾ ತಂದು ನಂದಗುಡಿ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ಆರೋಪಿಯು ಕೋಲಾರ ಹೆಚ್ ಕ್ರಾಸ್ ರಸ್ತೆಯ ಅರೆಹಳ್ಳಿ ಬಳಿ ಹೋಂಡಾ ಆಕ್ಟಿವಾ ಸ್ಕೂಟರ್ನಲ್ಲಿ ಗಾಂಜಾ ತೆಗೆದುಕೊಂಡು ಹೋಗುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ನಂದಗುಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.