ತುರುವೇಕೆರೆ:
ಪಠಾಕಿ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗಲಿ ಬಾಲಕಿವೋರ್ವಳ ತೀವ್ರತರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಡಿ.ಕಲ್ಕರೆಯಲ್ಲಿ ಗುರುವಾರ ಮದ್ಯಾಹ್ನ ನೆಡೆದಿದೆ.
ಗಾಯಗೊಂಡ ಬಾಲಕಿ ವರ್ಷಿಣಿ(8) ದೀಪಾವಳಿ ಹಬ್ಬದ ಹಿನ್ನಲೆ ಮದ್ಯಾಹ್ನ ಸ್ನೇಹಿತ ಜೊತೆಯಲ್ಲಿ ಗ್ರಾಮದ ಶಾಲಾ ಆವರನದಲ್ಲಿ ಸುರುಸುರು ಬತ್ತಿ ಹಚ್ಚುವ ಸಂದರ್ಬದಲ್ಲಿ ಕೈ ಸುಟ್ಟಿದ್ದು ಕೂಡಲೇ ಬಾಲಕಿ ಹೆಂದಕ್ಕೆ ಎಸೆದಿದ್ದಾಳೆ ಸುರುಸು ಬತ್ತಿಯ ಬೆಂಕಿ ಬಾಲಕಿ ದರಿಸಿದ್ದ ದಾವಣಿ ಹತ್ತಿಕೊಂಡು ಬಾಲಕೀಯ ಬೆನ್ನು ,ತೊಡೆ ಬಾಗ ಸುಟ್ಟು ದೊಡ್ಡು ಬೊಬ್ಬೆಗಳಾಗಿವೆ. ಪೋಷಕರು ಹಾಗೂ ಗ್ರಾಮಸ್ಥರು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ಧಾರೆ.