ಅಗತ್ಯ ದಾಖಲೆ ನೀಡಿ ಸೌಲಭ್ಯ ಪಡೆಯಿರಿ

ಚೇಳೂರು

        ಸರ್ಕಾರದ ಸೌಲಭ್ಯಗಳು ಅರ್ಹರಿಗೆ ಸಿಗುವುದರಿಂದ ಅವರಿಗೆ ಸೂಕ್ತ ಸಮಯಕ್ಕೆ ಸಹಾಯವಾಗುತ್ತದೆ. ಅದಕ್ಕೆ ಬೇಕಾಗಿರುವ ದಾಖಲೆಗಳನ್ನು ನಮ್ಮ ಇಲಾಖೆಯವರಿಗೆ ನೀಡಿ ಸೌಲಭ್ಯವನ್ನು ಪಡೆಯಿರಿ ಎಂದು ಗುಬ್ಬಿಯ ಆರ್‍ಆರ್‍ಟಿ ಶಿರಸ್ತೇದಾರ್ ಕೀರ್ತಿ ಹೇಳಿದರು.
ಚೇಳೂರಿನ ನಾಡಕಚೇರಿ ಆವರಣದಲ್ಲಿ ಸಂಧ್ಯಾಸುರಕ್ಷಾ, ಮನಸ್ವಿನಿ, ರಾಷ್ಟ್ರೀಯ ಇಂದಿರಾಗಾಂಧಿ, ಅಂಗವೀಕಲ, ವಯೋವೃದ್ಧರಿಗೆ ವಿಧವಾವೇತನ ಯೋಜನೆಯ ಪಿಂಚಣಿಯ ಅದಾಲತ್ ಕಾರ್ಯಕ್ರಮದಲ್ಲಿ ಹೋಬಳಿಯ ಅರ್ಹ 34 ಜನರಿಗೆ ಆದೇಶದ ಪ್ರತಿಗಳನ್ನು ನೀಡಿ ಮಾತನಾಡುತ್ತಾ, ಇಂತಹ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕೆಂದು ಸರ್ಕಾರ ಮಾಡಿದ ಯೋಜನೆಗಳಾಗಿವೆ. ಅದಕ್ಕೆ ಬೇಕಾಗಿರುವ ಸರಿಯಾದ ಎಲ್ಲಾ ದಾಖಲೆಗಳನ್ನು ನೀಡಿ ಇದರ ಪ್ರಯೋಜನವನ್ನು ಪಡೆಯಬಹುದು ಹಾಗೂ ಪಿಂಚಣಿಯ ಹಣ ಬರುವಾಗ ಯಾವುದೋ ಕಾರಣದಿಂದ ಏಕಾಏಕಿ ನಿಂತು ಹೋದರೆ ಆಗ ಸಂಬಂಧಪಟ್ಟವರ ಗಮನಕ್ಕೆ ತನ್ನಿ, ಇಲಾಖೆಯವರು ಸರಿಮಾಡಿಕೊಡುತ್ತಾರೆ ಎಂದರು.

          ಈ ಕಾರ್ಯಕ್ರಮದಲ್ಲಿ ಚೇಳೂರಿನ ನಾಡ ಕಚೇರಿಯ ಉಪತಹಸೀಲ್ದಾರ್ ವೆಂಕಟರಂಗನ್, ಕಂದಾಯಾಧಿಕಾರಿ ನಟರಾಜ್, ಗ್ರಾಮಲೆಕ್ಕಿಗರಾದ ಸುಮತಿ, ಪ್ರಸನ್ನಕುಮಾರ್,ಪುರುಷೋತ್ತಮ, ಶಿವಕುಮಾರ್, ಅನ್ಸರ್, ಅಶ್ವಥ್‍ಕುಮಾರ್, ತಾರಚಂದ್ರ, ಶ್ರೀನಿವಾಸ್ ಹಾಗೂ ಇತರರು ಭಾಗವಹಿಸಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap