ವೃದ್ಯಾಪ್ಯ,ವಿಧವಾ,ವಿಕಲಚೇತನ ವೇತನ ಸಮರ್ಪಕವಾಗಿ ನೀಡಲು ಒತ್ತಾಯ

ಬಳ್ಳಾರಿ

         ಬಳ್ಳಾರಿಯ ತಾಲುಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ವೃದ್ದರು,ವಿಧವಾ ಮಹಿಳೆಯರು ಹಾಗೂ ವಿಕಲಚೇತನರು ತಮ್ಮ ದೈನಂದಿನ ಜೀವನದ ಬದುಕು ಸಾಗಿಸಲು ದುಸ್ಥಿತಿಯಲ್ಲಿದೆ ಸಾಮಾಜಿಕ ಭದ್ರತೆ ಯಡಿಯಲ್ಲಿ ನೀಡುವ ಹಣವನ್ನು ನಿಯಮಿತವಾಗಿ ಪಾವತಿಸದೇ ಇರುವುದರಿಂದ ಜೀವನದ ಬದುಕು ಅಭದ್ರತೆಯಾಗಿದೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಯ ನೇತ್ರತ್ವದಲ್ಲಿ ತಾಲುಕು ಮತ್ತು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಕೆಲಕಾಲ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು

         ನಂತರ ಮನವಿ ಸಲ್ಲಿಸಿದ ಅವರು ಪ್ರಥಮವಾಗಿ ಇವರಿಗೆ ಅಂಚೆ ಕಛೇರಿಯ ಮೂಲಕ ವೇತನ ಸಂದಾಯ ಮಾಡಲಾಗುತ್ತಿತ್ತು ನಂತರ ಇದನ್ನು ಬ್ಯಾಂಕುಗಳಿಗೆ ವಿಸ್ತರಿಸಲಾಯಿತು,ಈಗ ಏಜೆನ್ಸಿಗಳ ಮುಖಾಂತರ ನೀಡುತ್ತಿರುವ ವಿಧಾನ ಬಂದ ನಂತರ ವೇತನ ಪಡೆಯುವವರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ, ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಮುಖಂಡರುಗಳು ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಹಾಗೂ ಜಿಲ್ಲಾ ಅದ್ಯಕ್ಷಿಣಿ ಎ,ಶಾಂತ ರವರು ಜಿಲ್ಲಾಧಿಕಾರಿ ಡಾ.ವಿ,ರಾಮ್ ಪ್ರಸಾತ್ ಮನೋಹರ್ ಅವರಿಗೆ ಮನವರಿಕೆ ಮಾಡಿಕೊಟ್ಟರು,

         ನಂತರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಬೇಡಿಕೆಗೆ ಸಾಕಾರತ್ಮಕವಾಗಿ ಸ್ಪಂದನೆ ನೀಡಿದ ನಂತರ ಸರಳ ರೀತಿಯಲ್ಲಿ ವಿತರಿಸಲು ಬ್ಯಾಂಕುಗಳ ಮೂಲಕ ವೇತನ ವಿತರಿಸುವ ವ್ಯವಸ್ಥೆಯೊಂದಿಗೆ ರಾಜ್ಯ ಸರ್ಕಾರವು ಘೋಷಣೆ ಮಾಡಿದಂತೆ ಮಾಸಿಕ ವೇತನ 1000 ನವೆಂಬರ್ ತಿಂಗಳಿನಿಂದ ಜಾರಿಗೊಳಿಸಿ ಕೂಡಲೇ ಪಾವತಿಸಲು ಬೇಡಿಕೆಯನ್ನು ಮುಂದಿಟ್ಟರು ಸರ್ಕಾರದ ನಿರ್ದೇಶನದಂತೆ ನಾವು ಮಾಡುತ್ತವೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ ಶ್ರೀಮತಿ ಕೆ,ಎಮ್,ಈಶ್ವರಿ ದೊಡ್ಡ ಬಸಪ್ಪ ನೀಲಮ್ಮ ನೂರಾರು ವೃದ್ದರು ವಿಧಾವ ಮಹಿಳೆಯರು ಬಸವಂತಿ ಲಕ್ಕಪ್ಪ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap