ಸಂಸ್ಕಾರದಿಂದಾಗಿ ಧರ್ಮ ಮತ್ತು ದೈವದಲ್ಲಿ ನಂಬಿಕೆ

ಹೊನ್ನಾಳಿ:

     ವ್ಯಕ್ತಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಧರ್ಮ ಮತ್ತು ದೈವದಲ್ಲಿ ನಂಬಿಕೆ ಬೆಳೆಯುತ್ತದೆ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್ ಹೇಳಿದರು.

     ತಾಲೂಕಿನ ಕುಂದೂರು ಗ್ರಾಮದಲ್ಲಿ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಕ್ಷೇತ್ರವಾದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ದಸರಾ ಉತ್ಸವ ಸಮಿತಿ ಏರ್ಪಡಿಸಿದ್ದ 46ನೇ ವರ್ಷದ ಅಖಂಡ ದಸರಾ ಮಹೋತ್ಸವದ 9 ದಿನಗಳ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ವಿದೇಶಿ ಸಂಸ್ಕತಿ, ನಗರೀಕರಣ, ಜಾಗತೀಕರಣಗಳ ಭರಾಟೆಯಲ್ಲಿ ಇಂದು ನಮ್ಮ ಸಂಸ್ಕತಿ, ಪರಂಪರೆಗಳಿಗೆ ಮೊದಲು ಆದ್ಯತೆ ನೀಡಿದ್ದು, ನಮ್ಮ ನಾಡಿನಲ್ಲಿ ಧರ್ಮಾಚರಣೆಗಳಿಗೆ ಕೊರತೆಯಿಲ್ಲ ಎಂಬುದನ್ನು ನಿರೂಪಿಸಿದ್ದೇವೆ ಎಂದು ತಿಳಿಸಿದರು.

    ಕುಂದೂರು ಕ್ಷೇತ್ರದ ಜಿಪಂ ಸದಸ್ಯೆ ಯಕ್ಕನಹಳ್ಳಿ ದೀಪಾ ಜಗದೀಶ್, ತಾಪಂ ಸದಸ್ಯ ಎಚ್. ತಿಪ್ಪೇಶ್, ದಸರಾ ಉತ್ಸವ ಸಮಿತಿ ಅಧ್ಯಕ್ಷ ಬಿ. ರಾಜಶೇಖರಪ್ಪ, ಕುಂದೂರು ಗ್ರಾಪಂ ಅಧ್ಯಕ್ಷೆ ಮಂಜಮ್ಮ ಮಂಜಪ್ಪ, ಎಲ್ಲಾ ಸದಸ್ಯರು, ಮಾಜಿ ಅಧ್ಯಕ್ಷರು-ಸದಸ್ಯರು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ, ಗ್ರಾಮದ ಮುಖಂಡರು, ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

       ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮದ ಭಯ ಅಥವಾ ಶಸ್ತ್ರದ ಭಯವಾದರೂ ಇರಬೇಕು. ಯಾವುದೂ ಇಲ್ಲದಿದ್ದರೆ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಈ ಕಾರಣಕ್ಕಾಗಿ ಧಾರ್ಮಿಕ ಸಮಾರಂಭಗಳು ಆಗಾಗ ನಡೆಯುತ್ತಿರಬೇಕು. ಇಂತಹ ಸಮಾರಂಭಗಳಿಂದಾಗಿ ಸಾಮಾಜಿಕ ಸಮಸ್ಯೆಗಳೂ ಕಡಿಮೆಯಾಗಿ ಆರೋಗ್ಯಪೂರ್ಣ ಸ್ವಸ್ಥ ಸಮಾಜ ಸಾಧ್ಯವಾಗುತ್ತದೆ. ಎಂ.ಪಿ. ರೇಣುಕಾಚಾರ್ಯ. ಶಾಸಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap