ಗೊರವನಹಳ್ಳಿಯಲ್ಲಿ ಬ್ರಹ್ಮರಥೋತ್ಸವ

ಕೊರಟಗೆರೆ

       ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀದೇವಿಯ ಬ್ರಹ್ಮರಥೋತ್ಸವ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಕಾರ್ತಿಕ ಮಾಸದ ಕೊನೆಯ ಶುಕ್ರವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

         ತಾಲ್ಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸನ್ನಿದಾನಕ್ಕೆ ಶುಕ್ರವಾರ ಮುಂಜಾನೆಯಿಂದ ರಾತ್ರಿ 10ಗಂಟೆಯವರೆಗೂ ಸಾವಿರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ತಾಯಿಯದರ್ಶನ ಪಡೆದು ಪುನೀತ ಭಾವದಲ್ಲಿ ಸಾಗುತ್ತಿದ್ದುದು ಕಂಡು ಬಂತು.

         ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ಮುಂಜಾನೆ 8 ಗಂಟೆಯಿಂದ ಪ್ರಾರಂಭವಾದ ವಿಶೇಷ ಪೂಜಾಕಾರ್ಯಕ್ರಮ, ಗಂಗಾಪೂಜೆ, ಗಣಪತಿ ಪೂಜೆ, ಶ್ರೀಮಾತೆ ಮಹಾಲಕ್ಷ್ಮಿಗೆ ಪಂಚಾಮೃತಅಭಿಷೇಕ, ಹೋಮ, ಹವನ ಮುತ್ತಿನ ಪಲ್ಲಕ್ಕಿ ಹಾಗೂ ಭಕ್ತರಿಂದ ದೇವಾಲಯಕ್ಕೆ ಮತ್ತು ದೇವಿಗೆ ಹೂವಿನ ಅಲಂಕಾರ ಮಾಡಲಾಗಿ ತಾಲ್ಲೂಕ್ ಆಡಳಿತದ ವತಿಯಿಂದ ವ್ಯವಸ್ಥಿತವಾಗಿ ಪೂಜಾ ಕೈಂಕರ್ಯಗಳನ್ನು ಕೈಗೊಂಡರು.
ಶುಕ್ರವಾರ ಮಧ್ಯಾಹ್ನ ಬ್ರಹ್ಮರಥೋತ್ಸವ, ಸಂಜೆ ಲಕ್ಷದೀಪೋತ್ಸವ ಕಾರ್ಯಕ್ರಮ ಮತ್ತು ರಾತ್ರಿ 8 ಗಂಟೆಗೆ ಮುತ್ತಿನ ಪಲ್ಲಕ್ಕಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ವೀರಗಾಸೆ, ಭಕ್ತಿಗೀತೆಗಳ ಗಾಯನವನ್ನು ಏರ್ಪಡಿಸಲಾಗಿತ್ತು.

         ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಆರತಿ ಸೇವೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ದೇವಿಯ ದರ್ಶನ ಪಡೆದು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.

         ತಾಲ್ಲೂಕು ಆಡಳಿತದ ಹಿಡಿತದಲ್ಲಿರುವ ಶ್ರೀ ಕ್ಷೇತ್ರ ಮಹಾಲಕ್ಷ್ಮೀ ದೇವಾಲಯ ಸಮೀಪ ಖುದ್ದು ತಾಲ್ಲೂಕು ಆಡಳಿತ ಹಾಗೂ ಮಹಾಲಕ್ಷ್ಮೀ ದೇವಾಲಯ ಸಿಬ್ಬಂದಿ ದಾಸೋಹದ ಮೇಲುಸ್ತುವಾರಿ ತೆಗೆದುಕೊಂಡು ಬೆಳಗ್ಗೆ 10 ಗಂಟೆಯಿಂದ ರಾತ್ರಿಯವರೆಗೂ ಭಕ್ತಾದಿಗಳಿಗೆ ಯಾವುದೇ ರೀತಿ ಕುಂದು ಬಾರದ ರೀತಿಯಲ್ಲಿ ಪ್ರಸಾದ ವಿನಿಯೋಗ ಮಾಡಲಾಯಿತು.

         ಲಕ್ಷದೀಪೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಮಧುಗಿರಿ ಎಸಿ ಚಂದ್ರಶೇಖರ್, ತಹಸೀಲ್ದಾರ್ ನಾಗರಾಜು, ಕೋಳಾಲ ಪಿಎಸೈ ಸಂತೋಷ್, ಉಪ ತಹಸೀಲ್ದಾರ್ ಮಧುಚಂದ್ರ, ದೇವಾಲಯದ ಪ್ರಧಾನ ಅರ್ಚಕರಾದ ಪ್ರಸನ್ನಕುಮಾರ್ ಸಿಬ್ಬಂದಿಗಳಾದ ರಮೇಶ್, ಕೇಶವಮೂರ್ತಿ, ಲಕ್ಷ್ಮಯ್ಯ, ರಂಗಶ್ಯಾಮಯ್ಯ, ಕೃಷ್ಣಮೂರ್ತಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap