ಪಟ್ಟಣದಲ್ಲಿ ವಿಜೃಂಭಣೆಯ ದಸರಾ ಆಚರಣೆ

ಪಾವಗಡ

        ತಾಲ್ಲೂಕಿನಾದ್ಯಂತ ವಿಜಯದÀಶಮಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ತಾಲ್ಲೂಕಿನಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಲಂಕಾರಗಳು ವಿಶೇಷವಾಗಿದ್ದವು. ನಾಗರಿಕರು ತಮ್ಮ ವಾಹನಗಳ ಪೂಜೆಯನ್ನು ಗುರುವಾರ, ಕೆಲವರು ಶುಕ್ರವಾರ ಮಾಡಿದ್ದಾರೆ.

       ಬನ್ನಿ ಮಂಟಪ ಉಸ್ತುವಾರಿ ಸಮಿತಿ ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಿಂದ ರಾಜಬೀದಿಗಳಲ್ಲಿ ದಸರಾ ಮೆರವಣಿಗೆಯಲ್ಲಿ ನಗರದ ವೇಣುಗೋಪಾಲಸ್ವಾಮಿ, ವಾಸವಿ, ಶನೇಶ್ಚರ, ಪಾಂಡುರಂಗಸ್ವಾಮಿ, ಚೌಡೇಶ್ವರಿ, ದೇವಿ ಉತ್ಸವಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಜಾನಪದ ಕಲಾತಂಡಗಳಿಂದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಗುರುಭವನದ ಬಳಿ ಇರುವ ಶಮಿ ವೃಕ್ಷಕ್ಕೆ ತಹಸೀಲ್ದಾರ್ ವರದರಾಜು ಅವರು ವಿಶೇಷ ಪೂಜೆ ಸಲ್ಲಿಸಿ ಅಂಬು ಹೊಡೆದರು.

        ಈ ಸಂದರ್ಭದಲ್ಲಿ ತಾಲ್ಲೂಕಿಗೆ ಮಳೆ ಬೆಳೆ ಚೆನ್ನಾಗಿ ಆಗಲಿ, ಶಾಂತಿ ನೆಮ್ಮದಿ ನೆಲಸಲಿ ಎಂದು ಪ್ರಾರ್ಥಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖಾ ಸಿಬ್ಬಂದಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

          ಪೂಜೆ ನಂತರ ನೆರದಿದ್ದ ಗಣ್ಯರು ಶಮಿಪತ್ರೆಯನ್ನು ಪರಸ್ಪರ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಶಮಿ ಮಂಟಪದ ಬಳಿ ವಿಶೇಷವಾಗಿ ಶಮಿವೃಕ್ಷ ಸಮಿತಿಯವರು ಆಕರ್ಷಕವಾಗಿ ಅಲಂಕಾರ, ನೈರ್ಮಲ್ಯ ಕಟಕಟೆಗಳನ್ನು ನಿರ್ಮಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಏರ್ಪಾಟು ಮಾಡಿದ್ದು ಅಲ್ಲದೆ ಪ್ರಸಾದವಿನಿಯೋಗ ಮಾಡಲಾಗಿತ್ತು.

ದಸರಾ ಹಬ್ಬದ ಪ್ರಯುಕ್ತ ಕುಸ್ತಿ ಪಂದ್ಯಾವಳಿ

           ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕುಸ್ತಿಪಂದ್ಯದಲ್ಲಿ ಬಾಬಶ್ರೀನಿವಾಸ್ ಪ್ರಥಮ ಸ್ಥಾನಪಡೆದು ಎಲ್ಲರ ಮೆಚ್ಚುಗೆ ಗಳಿಸಿದರು.
ದ್ವಿತೀಯಸ್ಥಾನ ಸಿದ್ದಿಕ್ ಪಡೆದರು. ಪ್ರತಿ ವರ್ಷ ಕೆಎನ್‍ಆರ್ ಬಳಗ ಕುಸ್ತಿ ಪಂದ್ಯವನ್ನು ಆಯೋಜಿಸುತ್ತಿದ್ದು, ಬಳಗದ ಡಿಸಿಸಿ ಬ್ಯಾಂಕ್ ಶೀನಪ್ಪ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

         ಈ ಸಂದರ್ಭದಲ್ಲಿ ಶೀನಪ್ಪ ಮಾತನಾಡಿ, ಸಂಪ್ರದಾಯ ಕಲೆ ನಾಶವಾಗಬಾರದು. ಅವಕಾಶ ಕೊರತೆಯಿಂದ ಕುಸ್ತಿ ಪಂದ್ಯ ಮರೆಯಾಗುತ್ತಿದೆ. ಈ ಕಾರಣದಿಂದಾಗಿ ಕುಸ್ತಿ ಪಂದ್ಯಕ್ಕೆ ಮತ್ತೆ ಮೆರುಗು ನೀಡಲು ಕುಸ್ತಿ ಪಂದ್ಯಗಳನ್ನು ಏರ್ಪಡಿಸಲಾಗುತ್ತಿದೆ. ಯುವಕರು ಕುಸ್ತಿ ಪಟುಗಳಾಗಿ ಹೊರ ಹೊಮ್ಮಬೇಕಿದೆ ಎಂದರು.

         ಈ ಸಂದರ್ಭದಲ್ಲಿ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ್ಣಾರೆಡ್ಡಿ, ಉಪಾಧ್ಯಕ್ಷರಾದ ಲಂಡನ್ ಪ್ರಭಾಕರ್, ರಾಮಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿ ಹೆಚ್.ರಾಮಾಂಜಿನಪ್ಪ, ಸಹ ಕಾರ್ಯದರ್ಶಿ ಮಂಜುನಾಥ್, ಖಂಜಾಂಚಿ ನರಸಿಂಹಯ್ಯ, ಸದಸ್ಯರಾದ ವಸಂತಕುಮಾರ್, ರಾಮಣ್ಣ, ವಕೀಲರಾದ ಹನುಮಂತರಾಯಪ್ಪ, ಅನಂತರಾಮ್‍ಭಟ್, ಅಂಜಪ್ಪ, ಪುಮ್ಯಾನಾಯ್ಕ, ಕೋಮ್ಲಾ, ರೋಟರಿ ಅಧ್ಯಕ್ಷ ಇಮ್ರಾನ್, ಮಾಜಿ ಅಧ್ಯಕ್ಷ ನಾಗರಾಜು, ಭೋಟವೆಂಕಟೇಶ್, ಬಂಗಾರಪ್ಪ, ಪಾತಣ್ಣ, ಶಶಿಕಿರಣ್ ಇನ್ನೂ ಮುಂತಾದ ಮುಖಂಡರು ಹಾಜರಿದ್ದರು. ಕುಸ್ತಿ ಪಂದ್ಯ ವೀಕ್ಷಿಸಲು ಸಹಸ್ರಾರು ಮಂದಿ ಅಭಿಮಾನಿಗಳು ಆಗಮಿಸಿ, ಸಂತೋಷ ವ್ಯಕ್ತಪಡಿಸಿದರು. ವಿವಿಧ ಹಳ್ಳಿಗಳಿಂದ ಸಾವಿರಾರು ಜನ ಭಕ್ತರು ಬಂದು ಶಮಿವೃಕ್ಷ ಪೂಜೆ ಸಂದರ್ಭದಲ್ಲಿ ಭಾಗಿಗಳಾಗಿದ್ದರು.

Recent Articles

spot_img

Related Stories

Share via
Copy link
Powered by Social Snap