ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸುವರ್ಣಾವಕಾಶ….!!!!

ವಾಷಿಂಗ್ಟನ್:
           ಇಂದು ಪ್ರತಿಯೊಬ್ಬರು ಇಂದು ತಮ್ಮ ಅವಿಭಾಜ್ಯ ಅಂಗವಾಗಿರುವಂತಹ ಸ್ಮಾರ್ಟ್ ಫೋನ್ ಬಿಟ್ಟು ಒಂದು ಕ್ಷಣವೂ ಇರಲು ಇಷ್ಟಪಡುವುದಿಲ್ಲಾ  ಆದರೆ ಅಮೇರಿಕಾದ ಒಂದು ಕಂಪೆನಿಯು ಎಲ್ಲಾ ಸ್ಮಾರ್ಟ್ ಫೋನ್ ಬಳಕೆದಾರರಿಗೆ ವಿಶೇಷ ಸವಾಲೆಸೆದಿದೆ.
     ನೀವು ದಿಟ್ಟ ನಿರ್ಧಾರ ಮಾಡಿ  ಒಂದು ವರ್ಷ ಸ್ಮಾರ್ಟ್ ಪೋನ್ ನಿಷೇಧ ಮಾಡಿದೇ ಆದರೆ ನೀವು 72 ಲಕ್ಷ ರು. ಗೆಲ್ಲುವ ಸುವರ್ಣವಕಾಶ ಇಲ್ಲಿದೇ. 
          ಅಮೆರಿಕಾದ ಕೋಕಾ ಕೋಲಾ ಸಂಸ್ಥೆಯು ಈ ಸ್ಪರ್ಧೆಯನ್ನು ಆಯೋಜಿಸಿದ್ದು . ನೀವು ಎಲ್ಲಿಯೇ ಇದ್ದರೂ ಸರಿ ಒಂದು ವರ್ಷ ಕಾಲ ಸ್ಮಾರ್ಟ್ ಫೋನ್ ನಿಂದ ದೂರವಿದ್ದರೆ ನೀವು ಒಂದು ಲಕ್ಷ ಡಾಲರ್ (ಸುಮಾರು 72  ಲಕ್ಷ ರು.) ಗೆಲ್ಲಬಹುದು. 
          ಸ್ಪರ್ಧೆಯ ನಿಯಮಾವಳಿಯ ಪ್ರಕಾರ ಒಂದು ವರ್ಷದ ಕಾಲದ ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಬಳಸಬಾರದುಈ ಸಮಯದಲ್ಲಿ ತುರ್ತು ಸಂದರ್ಭಕ್ಕೆಂದು ಸಂಸ್ಥೆಯೇ 1996ರ ಕಾಲದ ಹಳೆಯ ಫೋನ್ ಒಂದನ್ನು ನೀಡಲಿದೆ.
         ಇನ್ನು ಇದಕ್ಕಾಗಿ ನೀವೇನೂ ಕೆಲಸ ಬಿಡಬೇಕಾಗಿಲ್ಲ.ಕಛೇರಿ ಕೆಲಸದಲ್ಲಿದ್ದೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೀವು ಕಛೇರಿ ಕೆಲಸಕ್ಕಾಗಿ ಲಾಪ್‌ಟಾಪ್, ಡೆಸ್ಕ್‌ಟಾಪ್ ಕಂಪ್ಯೂಟರ್, ಗೂಗಲ್ ಹೋಮ್ ಅಥವಾ ಅಮೆಜಾನ್ ಅಲೆಕ್ಸಾದ ಮೊದಲಾದ ಸಾಧನಗಳನ್ನು ಸಹ ಬಳಸ್ಲು ಅವಕಾಶವಿದೆ. ಆದರೆ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳನ್ನು ಬಳಸಲು ಮಾತ್ರ ಅವಕಾಶವಿರುವುದಿಲ್ಲ.
         ಸ್ಪರ್ಧೆಗೆ ನೊಂದಾಯಿಸಿಕೊಳ್ಳುವುದಕ್ಕೆ ಜನವರಿ 8, 2019 ಕೊನೆಯ ದಿನವಾಗಿರಲಿದೆ. #nophoneforayear ಮತ್ತು #contest ಹ್ಯಾಶ್‌ಟ್ಯಾಗ್ ಬಳಸಿ ಒಂದು ವರ್ಷ ಕಾಲ ನೀವು ಸ್ಮಾರ್ಟ್ ಫೋನ್ ಬಳಸದೆ ಯಾವ ಕೆಲಸ ಮಾಡುವಿರಿ ಎನ್ನುವುದನ್ನು ವಿವರವಾಗಿ ಬರೆದು ಟ್ವಿಟರ್ ಅಥವಾ ಇನ್ ಸ್ಟಾಗ್ರಾಮ್ ಗಳಲ್ಲಿ ಹಾಕಬೇಕು. ನೀವು ಹಾಕಿರುವ ವಿವರ ಅತ್ಯುತ್ತಮವಾಗಿದ್ದರೆ ಸಂಸ್ಥೆ ಕರೆಮಾಡಿ ನಿಮ್ಮನ್ನು ಸ್ಪರ್ಧಿಯನ್ನಾಗಿ ಆಯ್ಕೆ ಮಾಡಲಿದೆ.
         ಇನ್ನು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡುವ ಮುನ್ನ ಸುಳ್ಳು ಪತ್ತೆ ಯಂತ್ರದ ಮೂಲಕ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ನೀವು ಸ್ಮಾರ್ಟ್ ಫೋನ್ ಬಳಸಿದ್ದಲ್ಲಿ ಯಂತ್ರ ಅದನ್ನು ಪತ್ತೆ ಮಾಡಲಿದೆ! ಇಷ್ಟಾಗಿ ಒಂದು ವರ್ಷ ಅವಧಿಯಲ್ಲದೆ ಆರು ತಿಂಗಳ ಅವಧಿಯ ಸ್ಪರ್ಧೆ ಸಹ ಇದೆ.ಇದಕ್ಕಾಗಿ 7.2 ಲಕ್ಷ ರೂ ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap