ಸಂಕ್ರಾಂತಿ ಸಂಭ್ರಮ ; ಸಮೂಹ ಗೀತಗಾಯನ

0
5

ಚಿತ್ರದುರ್ಗ:

      ಕರ್ನಾಟಕ ಸುಗಮ ಸಂಗೀತ ಪರಿಷತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಗೀತೋತ್ಸವ-2019 ಹದಿನಾರನೆ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಂಕ್ರಾಂತಿ ಸಂಭ್ರಮ ಸಮೂಹ ಗಾಯನ ಕೇಳುಗರನ್ನು ತಲೆದೂಗುವಂತೆ ಮಾಡಿತು.

        ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡು ಎನ್ನುವಂತೆ ಮಕರ ಸಂಕ್ರಾಂತಿಗೆ ಸಂಬಂಧಿಸಿದಂತೆ ಡಾ.ರೋಹಿಣಿ ಮೋಹನ್ ಮತ್ತು ಇಂದೂ ವಿಶ್ವನಾಥ್ ಇವರುಗಳ ನೇತೃತ್ವದಲ್ಲಿ ನಡೆದ ಸಮೂಹ ಗಾಯನದಲ್ಲಿ ಕುಸುಮಾ ಜೈನ್, ಪೂಜಾರಾವ್, ಮನೋಹರ್, ಶೃತಿ ಬಿ ರಾವ್, ರಘುವೀರ ಭಾರದ್ವಾಜ್, ವಸಂತ ಕುಂಬ್ಳೆ, ಧಾರವಾಡ ರವಿ, ರಾಜ್‍ಕಿರಣ್, ರವಿಕಿರಣ್, ವಾಸು, ಶಿವಶಂಕರ್, ಯಶವಂತ್, ಅಮೃತ ಇವರುಗಳು ಸಂಗೀತ ಸುಧೆಯನ್ನು ಹರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here