ಹೆಜ್ಜೆ ಮೂಡದ ಹಾದಿಗೆ ಸರಿದ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ…!!!!

ಬೆಂಗಳೂರು

       ತ್ರಿವಿಧ ದಾಸೋಹಿ, ಅಜಾತ ಶತ್ರು, ಜಾತಿ, ಮತ, ಪಂಥಗಳನ್ನು ಮೀರಿದ, ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಶತಾಯುಷಿ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಕೋಟ್ಯಾಂತರ ಭಕ್ತಗಣವನ್ನು ಬಿಟ್ಟು ಅಗಲಿದ್ದಾರೆ.

       ಕಳೆದ ಮತ್ತು ಈಗಿನ ಶತಮಾನದಲ್ಲಿ ನಾಡಿನ ಉದ್ದಗಲಕ್ಕೂ ನಡೆದಾಡಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಇದೀಗ ಹೆಜ್ಜೆ ಮೂಡದ ಹಾದಿಗೆ ಸರಿದಿದ್ದಾರೆ.

       ತಮ್ಮ ಸರಳ ನಡೆ, ನುಡಿ, ಪಾಂಡಿತ್ಯ, ಆಚಾರ, ವಿಚಾರಗಳಿಂದ ಅಸಂಖ್ಯಾತ ಜನ ಸಮೂಹದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರು ಬಹುದೊಡ್ಡ ಶಿಷ್ಯಗಣ, ಭಕ್ತರನ್ನು ಅಗಲಿದ್ದಾರೆ. ತ್ರಿವಿಧ ದಾಸೋಹ ಪರಂಪರೆಗೆ ಹೊಸ ಅರ್ಥ ತುಂಬಿದ್ದ ಡಾ. ಶಿವಕುಮಾರ ಸ್ವಾಮೀಜಿ, ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕೋಟ್ಯಂತರ ಬಡ ಮಕ್ಕಳಲ್ಲಿ ಜ್ಞಾನ ಜ್ಯೋತಿ ಬೆಳಗಿ, ಅವರ ಕುಟುಂಬಗಳು, ಸಮಾಜ ಹಾಗೂ ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದರು. ಸಿದ್ಧಗಂಗಾ ಮಠದಲ್ಲಿ ಓದಿ ದೇಶ ವಿದೇಶಗಳಲ್ಲಿ ಖ್ಯಾತರಾದ ಅಸಂಖ್ಯಾತ ಗಣ್ಯರಿಗೆ ಸ್ವಾಮೀಜಿ ಅವರು ದಾರಿ ದೀಪವಾಗಿದ್ದರು.

       ದೇಶ ಮತ್ತು ಸಮಾಜ ಪ್ರಗತಿ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದರು. ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಶಿವಕುಮಾರ ಸ್ವಾಮೀಜಿ, ಮಕ್ಕಳ ಶಿಕ್ಷಣ, ಮಕ್ಕಳ ಬೆಳವಣಿಗೆಯನ್ನೇ ಉಸಿರಾಗಿಸಿಕೊಂಡಿದ್ದರು.

        ಶ್ರೀಗಳ ಪೂರ್ವಾಶ್ರಮ; ಏಪ್ರಿಲ್ 1 1907 ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದ ಹೊನ್ನೇಗೌಡ ಮತ್ತು ಗಂಗಮ್ಮನವರ ಮಗನಾಗಿ ಜನಿಸಿದ್ದರು. ಶ್ರೀಗಳಿಗೆ ಶಿವಕುಮಾರ ಎಂದು ನಾಮಕರಣ ಮಾಡಿದ್ದು, ಮೊದಲಿಗೆ ಎಲ್ಲರ ನೆಚ್ಚಿನ ಶಿವಣ್ಣನಾಗಿದ್ದರು. ಹೊನ್ನೇಗೌಡ ದಂಪತಿಗೆ 8 ಗಂಡು ಹಾಗೂ 5 ಹೆಣ್ಣು ಮಕ್ಕಳು. ಎಲ್ಲರಿಗಿಂತಲೂ ಕಿರಿಯನಾದ ಶಿವಣ್ಣನೆಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ.

         ವೀರಾಪುರದಲ್ಲಿಯೇ ಇದ್ದ ಕೂಲಿಮಠದ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಬದುಕು ಪ್ರಾರಂಭವಾಯಿತು. ಹೀಗೆ ಪ್ರಾರಂಭವಾದ ಅವರ ಅಕ್ಷರ ಜ್ಞಾನ, ಯಾರೂ ಊಹಿಸಿದ ರೀತಿಯಲ್ಲಿ ದೇಶದ ದಶ ದಿಕ್ಕುಗಳಿಗೂ ಪಸರಿಸಿತು. ನಂತರ ಅವರನ್ನು ಪಕ್ಕದ ಪಾಲನಹಳ್ಳಿಯಲ್ಲಿ ಪ್ರಾಥಮಿಕ ಶಾಲೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡ ಶಿವಣ್ಣನಿಗೆ ಆಸರೆಯಾಗಿದ್ದು ಅಕ್ಕ. ತುಮಕೂರು ಬಳಿಯ ನಾಗವಲ್ಲಿ ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ 1926 ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು.

       1927 ರಲ್ಲಿ ಆಗಿನ ಸಿದ್ಧಗಂಗಾ ಮಠಾಧಿಪತಿ ಉದ್ಧಾನ ಶಿವಯೋಗಿಗಳೊಡನೆ ಶಿವಕುಮಾರರಿಗೆ ಒಡನಾಟ ಪ್ರಾರಂಭವಾಯಿತು. ಅದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ದಿನಗಳಲ್ಲಿ ಬೆಂಗಳೂರಿನ `ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಛತ್ರ’ದಲ್ಲಿ ಉಳಿದುಕೊಳ್ಳುತ್ತಿದ್ದರು. ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಶಿವಕುಮಾರರಿಗೆ ಸಿದ್ಧಗಂಗಾ ಮಠದ ಒಡನಾಟವೂ ಮುಂದುವರೆಯಿತು. ಎಂತಹ ಸಂದರ್ಭ ಬಂದರೂ ಶಿವಣ್ಣ ಮಠಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ತುಮಕೂರು ಜಿಲ್ಲೆಯಲ್ಲೊಮ್ಮೆ ಭೀಕರ ಪ್ಲೇಗ್ ತಗುಲಿದಾಗಲೂ ಶಿವಣ್ಣ ಮತ್ತು ಮಠದ ಒಡನಾಟ ಎಂದಿನಂತೆಯೇ ಇತ್ತು.

        ಮಠಾಧಿಪತಿಯಾದ ಶಿವಕುಮಾರ: 1930 ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೀಗಳ ಕ್ರಿಯಾಸಮಾಧಿ ಕಾರ್ಯದಲ್ಲಿ ಶಿವಣ್ಣ ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ ಬಹಳ ಉತ್ಸಾಹದಿಂದ ಓಡಾಡುತ್ತಿದ್ದ ಶಿವಣ್ಣನ ಮೇಲೆ ಉದ್ಯಾನ ಶ್ರೀಗಳ ದೃಷ್ಟಿ ಹರಿಯುತ್ತದೆ. ಯಾರ ಹೇಳಿಕೆಗೂ ಕಾಯದ ಶ್ರೀಗಳು ಶಿವಣ್ಣನೇ ಸಿದ್ಧಗಂಗಾ ಮಠಧ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಎಲ್ಲರಂತೆ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣ ಹಿಂತಿರುಗುವಾಗ ಕಾವಿ, ರುದ್ರಾಕ್ಷಿ ಧರಿಸಿದ ಸನ್ಯಾಸಿಯಾಗಿ `ಶ್ರೀ ಶಿವಕುಮಾರ ಸ್ವಾಮೀಜಿ’ಯಾಗಿ ಹಿಂದಿರುಗುತ್ತಾರೆ. 

         ಸನ್ಯಾಸತ್ವ ಸ್ವೀಕಾರದ ಬಳಿಕವೂ ಶಿವಕುಮಾರ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಶಿಸ್ತುಬದ್ಧ ವಿದ್ಯಾರ್ಥಿಯಾಗಿ ಶಿಕ್ಷಕರ, ಸ್ನೇಹಿತರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಿವಕುಮಾರ ಸಿದ್ಧಗಂಗಾ ಮಠಕ್ಕೆ ತೆರಳುತ್ತಾರೆ. ಅಂದಿನಿಂದ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ಮುಂದೆ ಉದ್ದಾನ ಶಿವಯೋಗಿ ಶ್ರೀಗಳು ಲಿಂಗೈಕ್ಯರಾದಾಗ ಮಠದ ಸಕಲ ಆಡಳಿತ, ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ ಜವಾಬ್ದಾರಿ ಶಿವಕುಮಾರ ಶ್ರೀಗಳಿಗೆ ಹಸ್ತಾಂತರವಾಗುತ್ತದೆ.

ಮಠದಲ್ಲಿ ಆರಂಭದ ದಿನಗಳು

         ಮಠದಲ್ಲಿ ಆರಂಭದ ದಿನಗಳಲ್ಲಿ ಆದಾಯ ತುಂಬಾ ಕಡಿಮೆಯಿತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನ ಹುಟ್ಟುವಳಿಯಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿತ್ತು. ಮಠದ ಭೂಮಿ ಮಳೆಯಾಧಾರಿತವಾಗಿದ್ದರಿಂದ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಮಠದ ಏಳಿಗೆಗಾಗಿ ಶ್ರೀಗಳು ಭಕ್ತರ ಮನೆಗೆ ಭಿನ್ನಹ ಆದ್ಯತೆ ಮೇರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ದವಸ ಧಾನ್ಯಗಳನ್ನು ತರುತ್ತಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನಷ್ಟೇ ಅಲ್ಲದೆ ಮಠದಲ್ಲಿ ದಿನನಿತ್ಯ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳು, ಭಕ್ತರ ಗಣ್ಯರ ಭೇಟಿ, ಮಠದ ಆರ್ಥಿಕ ನಿರ್ವಹಣೆ ಸೇರಿದಂತೆ ಬಿಡುವಿಲ್ಲದ ಕಾರ್ಯಪಟ್ಟಿಗಳೇ ಇರುತ್ತಿದ್ದವು. ಶಿವಕುಮಾರ ಸ್ವಾಮೀಜಿಗಳಿಂದ ಎಲ್ಲದರ ಜವಾಬ್ದಾರಿ ವಹಿಸಲು ಸಾಧ್ಯವಿಲ್ಲ ಎಂದು ಆರಂಭದಲ್ಲಿ ಹಲವರು ಹೇಳುತ್ತಿದ್ದು, ಯಾವ ಮಾತಿಗೂ ಧೃತಿಗೆಡದ ಅವರು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾರಂಭಿಸಿದರು.

         ಅದಾಗಲೇ ದೇಶಕ್ಕೆ ಸ್ವಾತಂತ್ರ ಬಂದ ಸಮಯ. ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಲು ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಮಹತ್ವ ತಿಳಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಆದರೆ ಸಿದ್ಧಗಂಗೆಯಲ್ಲಿ ಅದಾಗಲೇ ಎಲ್ಲವೂ ಕಾರ್ಯರೂಪಕ್ಕೆ ಬಂದಿತ್ತು. ಹೀಗಾಗಿ ಸಿದ್ಧಗಂಗಾ ಮಠದ ಹೆಸರು ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಒಳಗಾಯಿತು.

        ಪ್ರತಿದಿನ ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಸ್ನಾನಮಾಡಿ, ಒಂದು ತಾಸಿಗೂ ಹೆಚ್ಚು ಸಮಯ ಪೂಜಾಕೋಣೆಯಲ್ಲಿ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ದೂರದೂರಿನಿಂದ ಸ್ವಾಮಿಗಳ ದರ್ಶನಕ್ಕಾಗಿ ಬರುವ ಭಕ್ತರಿಗೆ ತ್ರಿಪುಂಡಕ ಭಸ್ಮವನ್ನು ಕೊಟ್ಟು ತಾವು ಧರಿಸಿ ಪೂಜೆಯನ್ನು ಮುಗಿಸುತ್ತಿದ್ದರು. ನಂತರವೇ ಆಹಾರ ಸೇವನೆ. ಮುಂಜಾನೆ ಆರೂವರೆ ಗಂಟೆಗೆ ಒಂದು ಅಕ್ಕಿ ಇಡ್ಲಿ, ಸ್ವಲ್ಪ ಹೆಸರುಬೇಳೆ ತೊವ್ವೆ, ಸಿಹಿ ಹಾಗೂ ಖಾರದ ಚಟ್ನಿ ಅವರ ಆಹಾರ. ಜತೆಗೆ ಎರಡು ತುಂಡು ಸೇಬು ಸೇವಿಸುತ್ತಿದ್ದರು. ಇದಾದ ಬಳಿಕ ಬೇವಿನ ಚಕ್ಕೆಯ ಕಷಾಯವನ್ನು ಕುಡಿಯುತ್ತಿದ್ದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸ್ವಾಮೀಜಿ.

         ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ಪ್ರತಿದಿನ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ರೀಗಳು ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಪ್ರಾರ್ಥನೆ ಬಳಿಕ ಕಚೇರಿಯಲ್ಲಿ ದಿನಪತ್ರಿಕೆಗಳನ್ನು ಓದುತ್ತಿದ್ದರು. ಕಚೇರಿಗೆ ಬರುತ್ತಿದ್ದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡಿ, ಮಳೆ ಬೆಳೆ, ಕುಶಲೋಪಚರಿ ವಿಚಾರಿಸಿ ಗಣ್ಯರನ್ನು ಭೇಟಿ ಮಾಡುತ್ತಿದ್ದರು. ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳು ಸೇರಿದಂತೆ ಹಲವಾರು ಕಾರ್ಯದಲ್ಲಿ ನಿರತರಾಗುತ್ತಿದ್ದರು. ಇಳಿವಯಸಿನಲ್ಲಿಯೂ ಧಣಿವರಿಯದೇ `ಕಾಯಕವೇ ಕೈಲಾಸ’ ಎಂದು ದುಡಿಯುತ್ತಿದ್ದರು.

         ಸಿದ್ಧಗಂಗಾ ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದ ಶ್ರೀಗಳು ಮಧ್ಯಾಹ್ನ 3 ಗಂಟೆಯವರೆಗೂ ಭಕ್ತರ ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದರು. ನಂತರ ಮಠಕ್ಕೆ ತೆರಳಿ ಸ್ನಾನ ಪೂಜೆಗಳಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಬಳಿಕ ಮಠದಲ್ಲಿ ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪ ಅನ್ನ ತೊಗರಿಬೇಳೆ ಸಾಂಬಾರ್ ಊಟ ಮಾಡುತ್ತಿದ್ದು, ಸಂಜೆ 4 ಗಂಟೆಯ ನಂತರ ಪುನ: ಭಕ್ತಗಣರ ಭೇಟಿ, ಮಠದಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪಚರಿ, ದಾಸೋಹದ ಮಾಹಿತಿ ಹೀಗೆ ರಾತ್ರಿ 9 ಗಂಟೆಯವರೆಗೆ ದಣಿವರೆಯದೇ ದುಡಿಯುತ್ತಿದ್ದರು.

         ಹಳೆಯ ಮಠದಲ್ಲಿ ರಾತ್ರಿ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಮುಂದಾಗುತ್ತಿದ್ದರು. ಸ್ನಾನ ಪೂಜೆ ಮತ್ತು ಪ್ರಸಾದ ಹಳೆಯ ಮಠದಲ್ಲಿಯೇ ನಡೆಯುತ್ತಿತ್ತು. ರಾತ್ರಿ ಒಂದು ಚಪಾತಿ ಇಲ್ಲವೇ ಒಂದು ದೋಸೆ ಜೊತೆಗೆ ಚಟ್ನಿ ಇಲ್ಲವೇ ಪಲ್ಯ. ಇದಿಲ್ಲದಿದ್ದರೆ ಉಪ್ಪಿಟ್ಟು, ಹಣ್ಣಿನ ಸೇವನೆ ಮಾಡುತ್ತಿದ್ದರು. ನಂತರ ರಾತ್ರಿ 10 ಗಂಟೆಗೆ ಸ್ವಾಮೀಜಿಗಳು ಸಭಾಂಗಣದಲ್ಲಿ ಹಾಜರಾಗಿ, `ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ’ದ ಒಂದು ದೃಶ್ಯವನ್ನು ನೋಡಿದ ಬಳಿಕವೇ ಅಂದಿನ ಕಾಯಕಕ್ಕೆ ತೆರೆಬೀಳುತಿತ್ತು. 

          ಪ್ರತಿನಿತ್ಯ ಮಲಗುವ ಮುನ್ನ ಕನಿಷ್ಠ ಅರ್ಧ ತಾಸಾದರೂ ಪುಸ್ತಕ ಓದುತ್ತಿದ್ದರು. ನಂತರ 11 ಗಂಟೆಗೆ ಮಲಗುತ್ತಿದ್ದರು.ಓದಿನೊಂದಿಗೆ ಆರಂಭವಾಗುತ್ತಿದ್ದ ಶ್ರೀಗಳ ದಿನಚರಿ ಓದಿನೊಂದಿಗೆ ಅಂತ್ಯವಾಗುತ್ತಿತ್ತು.

        ಹಲವು ಧಾರ್ಮಿಕ ಸಮಾರಂಭಗಳಲ್ಲಿ, ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು. ದೂರದ ಊರುಗಳಿಗೆ ಹೋದಾಗ ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಬಿಸಿನೀರು ಸೇವಿಸುತ್ತಿದ್ದರು. 8 ದಶಕಗಳಿಂದ ಇದೇ ರೀತಿ ಶ್ರೀಗಳ ಬದಕು ಸಾಗಿತ್ತು. ಶ್ರೀಗಳ ಮೇಲೆ, ಮಠದ ಮೇಲೆ ಹಲವು ಸಾಕ್ಷ್ಯ ಚಿತ್ರಗಳನ್ನೂ ತಯಾರಿಸಲಾಗಿದೆ.

ಪ್ರಶಸ್ತಿಗಳು ಮತ್ತು ಸನ್ಮಾನಗಳು

        ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

          ಪೂಜ್ಯ ಸ್ವಾಮೀಜಿಯವರ 100 ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ `ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಗೆ? ದಾಖಲೆ ಸಂಗ್ರಹ-

       ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರುವ ಉದ್ದೇಶದಿಂದ ಮಠದ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಯ್ಯ ಅಂಕಿಅಂಶಗಳನ್ನು ಸಂಗ್ರಹಿಸಿದ್ದು, ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಗೆ ಕೊಡಲು ಮುಂದಾಗಿದ್ದಾರೆ. ಮಠದಲ್ಲೇ ಹಲವು ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ ಸಂಗತಿಗಳನ್ನು ಕಲೆ ಹಾಕಿದ್ದಾರೆ.

        ಶ್ರೀಗಳು ಮೂರು ಬಾರಿ ಶಿವಪೂಜೆ ದೀಕ್ಷೆ ಪಡೆದಿದ್ದು, 88 ವರ್ಷಗಳು ಸಂದಿವೆ. ಈ 88 ವರ್ಷಗಳಲ್ಲಿ 96,426 ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ. ಸಿದ್ಧಗಂಗಾ ಶ್ರೀಗಳನ್ನು ಹೊರತುಪಡಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಯಾರೂ ಸಹ ಇಷ್ಟೊಂದು ಶಿವಾರಾಧನೆ ಮಾಡಿಲ್ಲ.

      6 ಗಂಟೆ ಧ್ಯಾನ, ಪೂಜೆ ಶ್ರೀಗಳು ಪ್ರತಿದಿನ 6 ಗಂಟೆ ಧ್ಯಾನ ಮತ್ತು ಪೂಜೆಯಲ್ಲಿ ತಪ್ಪದೆ ತಮ್ಮನ್ನು ತೊಡಗಿಕೊಳ್ಳುತ್ತಿದ್ದರು. ಸುಮಾರು 1.89.930ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ ಮಾಡಿದ್ದಾರೆ. 14 ಗಂಟೆ ಸಮಾಜ ಸೇವೆಯಲ್ಲಿ ತೊಡಗುವ ಶ್ರೀಗಳು ಇಲ್ಲಿಯವರೆಗೆ 4,49,680 ಗಂಟೆಗಳ ಕಾಲ ಸಮಾಜ ಸೇವೆಗೈದಿದ್ದಾರೆ.

       ಲಕ್ಷಾಂತರ ವಿದ್ಯಾರ್ಥಿಗಳು ಸಿದ್ದಗಂಗಾ ಮಠದ ಬೃಹತ್ ಶಿಕ್ಷಣ ದಾಸೋಹದ ಅಂಕಿ-ಅಂಶಗಳನ್ನೂ ಇವರು ಸಂಗ್ರಹಿಸಿದ್ದು, 1935 ರಿಂದ 2017ರ ವರೆಗೆ 2,67,545 ವಿದ್ಯಾರ್ಥಿಗಳು ಮಠದಲ್ಲಿ ವ್ಯಾಸಂಗ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಮಠದ 100 ಕ್ಕೂ ಅಧಿಕ ವಿದ್ಯಾಸಂಸ್ಥೆಗಳಲ್ಲಿ 6,06,312 ಮಂದಿ ವಿದ್ಯಾರ್ಥಿಗಳು ವಿದ್ಯೆ ಕಲಿತಿದ್ದಾರೆ. ಮಠದಲ್ಲಿ 23,854 ಶಿಕ್ಷಕರಿದ್ದು, 23,845 ಬೋಧಕೇತರ ಸಿಬ್ಬಂದಿಗಳಿದ್ದಾರೆ.

      ಈ ವರೆಗೆ ಮಠಕ್ಕೆ ಭೇಟಿ ನೀಡಿರುವ ಭಕ್ತಾದಿಗಳ ಸಂಖ್ಯೆ 6,68,29,300 ಎಂದು ಲೆಕ್ಕ ಹಾಕಲಾಗಿದ್ದು, ಜಾತ್ರಾ ಸಮಯದಲ್ಲಿ ಮಠದಲ್ಲಿ 3,62,00,000 ಜನ ದಾಸೋಹ ಸ್ವೀಕರಿಸಿದ್ದು, ಇಲ್ಲಿಯವರೆಗೆ ಸಿದ್ದಗಂಗಾ ಶ್ರೀಗಳ ಪಾದವನ್ನು 23,12,64,100 ಭಕ್ತಾದಿಗಳು ಸ್ಪರ್ಶಿಸಿದ್ದಾರೆ.

      ಶ್ರೀಗಳೀಗೆ ಭಾರತ ರತ್ನ ಕೊಡಿಸುವ ಸಲುವಾಗಿ ದಾಖಲೆಗೆ ಅರ್ಹವಾದ ಅಂಕಿಅಂಶಗಳನ್ನು ಸಂಗ್ರಹಿಸಿರುವುದಾಗಿ ಚಂದ್ರಶೇಖರಯ್ಯ ಹೇಳಿದ್ದಾರೆ. ಸಿದ್ದಗಂಗಾ ಶ್ರೀಗಳ ಸಾಧನೆ ಗೌರವಿಸಿ ಗಿನ್ನೆಸ್ ಬುಕ್ ಆಪ್ ರೆಕಾರ್ಡ್ ಗೆ ಹೆಸರು ಸೇರಿದರೆ ಅದು ಕನ್ನಡಿಗರ ಹೆಮ್ಮೆ ಎಂದೇ ಪರಿಗಣಿತವಾಗುತ್ತದೆ.

       ಶತಾಯುಷಿ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಹಲವು ಕೂಗುಗಳು ಕೇಳಿಬಂದಿದ್ದವು. ಕಳೆದ ಮೂರು ವರ್ಷಗಳಿಂದ ಶ್ವಾಸಕೋಶದ ತೊಂದರೆಗೊಳಗಾಗಿದ್ದ ಶ್ರೀಗಳಿಗೆ 8 ಸ್ಟಂಟ್ ಅಳವಡಿಸಲಾಗಿತ್ತು. ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡ ಶ್ರೀಗಳು ಸಿದ್ಧಗಂಗಾಮಠಕ್ಕೆ ವಾಪಸಾಗಿದ್ದರು. ಮಠದ ಆಸ್ಪತ್ರೆಯಿಂದ ಸ್ವಾಮೀಜಿ ಅವರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap