ಹಿಂದಿ ಚಿತ್ರ ಪ್ರದರ್ಶನ: ಕನ್ನಡಪರ ಒಕ್ಕೂಟ ಪ್ರತಿಭಟನೆ

0
17

ದಾವಣಗೆರೆ:

       ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದರೂ ಸಹ ಹಿಂದಿ ಭಾಷೆಯ ಚಿತ್ರ ಪ್ರದರ್ಶಿಸುತ್ತಿದ್ದ

        ಇಲ್ಲಿನ ಶಾಮನೂರು ರಸ್ತೆಯ ಎಸ್ಸೆಸ್ ಮಾಲ್‍ನ ಮಲ್ಟಿಪ್ಲೆಕ್ಸ್‍ನ ವಿರುದ್ಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.

        ನಗರದ ಜಯದೇವ ವೃತ್ತದಿಂದ ಬೈಕ್ ರ್ಯಾಲಿಯ ಮೂಲಕ ಎಸ್.ಎಸ್.ಮಾಲ್‍ಗೆ ತೆರಳಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾಲ್‍ನ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸಿ, ತಕ್ಷಣವೇ ಪರಭಾಷೆ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

        ನ.1ರಿಂದ ತಿಂಗಳು ಪೂರ್ತಿ ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳಲ್ಲೂ ಕನ್ನಡ ಚಿತವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಪರಭಾಷೆ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಡ್ಡಾಯವಾಗಿ ಕನ್ನಡ ಚಿತ್ರ ಪ್ರದರ್ಶಿಸುವಂತೆ ಎಲ್ಲಾ ಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‍ಗೆ ಸೂಚಿಸಿದ್ದರು. ಆದರೂ ಮಲ್ಟಿಪ್ಲೆಕ್ಸ್‍ನಲ್ಲಿ ಬದಾಯಿ ಹೋ… ಹಿಂದಿ ಚಿತ್ರವನ್ನು ಪ್ರದರ್ಶಿಸುವ ಮೂಲಕ ಕನ್ನಡಕ್ಕೆ ಅಪಮಾನ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

        ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಲ್ಟಿಫ್ಲಕ್ಸ್‍ನ ವ್ಯವಸ್ಥಾಪಕ ಪರಮೇಶ ಪ್ರತಿಭಟನಾಕಾರರ ಬಳಿ ಕ್ಷಮಾಪಣೆ ಕೇಳಿ, ಮಧ್ಯಾಹ್ನದಿಂದಲೇ ಕನ್ನಡ ಚಿತ್ರ ಪ್ರದರ್ಶಿಸುವುದಾಗಿ ಘೋಷಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.

         ಪ್ರತಿಭಟನೆಯಲ್ಲಿ ವಿಶ್ವ ಕರ್ನಾಟಕ ವೇದಿಕೆಯ ಕೆ.ಜಿ.ಯಲ್ಲಪ್ಪ, ಅಮ್ಜದ್ ಅಲಿ, ಶ್ರಯಸ್, ಕರ್ನಾಟಕ ಏಕತಾ ವೇದಿಕೆಯ ಎಚ್.ಎನ್.ಹಾಲೇಶ, ಮಂಜುನಾಯ್ಕ, ವಿಶ್ವನಾಥ್, ಶಿವು, ಕರವೇ ಸ್ವಾಭಿಮಾನಿ ಬಣದ ಕೆ.ಬಿ.ರುದ್ರೇಶ, ಕರುನಾಡ ಸಮರ ಸೇನೆಯ ಐಗೂರು ಸುರೇಶ, ಅವಿನಾಶ್, ಎಂ.ಜಾಕೀರ್, ಜಫ್ರುಲ್ಲಾ, ಸಿದ್ದೇಶ್ ಬಣಕಾರ್, ಕರ್ನಾಟಕ ಕದಂಬ ಸೇನೆಯ ದ್ವಾರಕೀಶ್, ಹರೀಶ್‍ರಾವ್, ಕರುನಾಡ ಕದಂಬ ಸೇನೆ ಆನಂದ್, ಕರುನಾಡು ಸೇವಕರು ಸಂಘದ ಆವರಗೆರೆ ಮಂಜುನಾಥ್, ಕರುನಾಡ ಸಿಂಹ ಸೇನೆಯ ರಮೇಶ್, ರಾಮಚಂದ್ರ, ಕರವೇ ಶಿವರಾಮೇಗೌಡ ಬಣದ ರಾಜು, ಜಬಿ, ಪ್ರವೀಣ್ ಶೆಟ್ಟಿ ಬಣದ ಪರಮೇಶ್, ಮೊಹಮ್ಮದ್ ರಫೀಕ್, ಸಿಕಂದರ್ ಹಜರತ್, ಸೈಯದ್ ನಜೀರ್, ಎಂ.ರವಿ, ಮಂಜುನಾಥ ಗೌಡ, ಪರಮೇಶ ಮೇಟಿ, ಮಹಮ್ಮದ್ ರಫೀಕ್, ಮಸಾರತ್, ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here