ಆನಂದ್ ಸಿಂಗ್ ಚಿಕಿತ್ಸೆ ಸುತ್ತ ಅನುಮಾನದ ಹುತ್ತ???

ಬೆಂಗಳೂರು

       ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ಬೆಂಗಳೂರಿನ ಶೇಷಾದ್ರಿಪುರ ಅಪೋಲೊ ಆಸ್ಪತ್ರೆಗೆ ಆಗಮಿಸಿದ್ದ ಬಿಜೆಪಿ ಶಾಸಕ ರಾಜೂಗೌಡ ಭೇಟಿಗೆ ಅವಕಾಶ ಸಿಗದೆ ನಿರಾಶರಾಗಿ ಹಿಂದಿರುಗಿದರು.

       ಇಂದು ಬೆಳಿಗ್ಗೆ 7 ಗಂಟೆಗೆ ಶೇಷಾದ್ರಿಪುರ ಅಪೋಲೊ ಆಸ್ಪತ್ರೆಗೆ ದಾಖಲಾಗಿ 6ನೇ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್‍ಸಿಂಗ್ ಅವರನ್ನು ಸಂಸದ ಡಿ. ಕೆ. ಸುರೇಶ್ ಭೇಟಿಯಾಗಿ ಸಮಾಲೋಚಿಸಿ ದ್ದಾರೆ. ಇವರ ಬೆನ್ನಲ್ಲೇ ಆಗಮಿಸಿದ ರಾಜು ಗೌಡ ಅವರಿಗೆ ಭೇಟಿಗೆ ಅವಕಾಶ ದೊರೆತಿಲ್ಲ.

      ಆಸ್ಪತ್ರೆಯಲ್ಲಿ ಆನಂದ್ ಸಿಂಗ್ ಅವರನ್ನು ಭೇಟಿಯಾಗಲು ಹೋದರೆ “ಇಲ್ಲಿ ಯಾರಿಗೂ ಭೇಟಿಗೆ ಅವಕಾಶ ಇಲ್ಲ” ಎಂದು ವೈದ್ಯರು ತಿಳಿಸಿದರು. ಅವರು ಯಾವ ವಾರ್ಡ್ ನಲ್ಲಿ ಇದ್ದಾರೆ? ಎಲ್ಲಿದ್ದಾರೆ? ಎನ್ನುವುದನ್ನು ಕೂಡ ತಿಳಿಸಲಿಲ್ಲ. ಅವರಿಗೆ ನೀಡುತ್ತಿರು ಚಿಕಿತ್ಸೆಯನ್ನು ಗುಪ್ತವಾಗಿ ಇಟ್ಟಿರುವುದು ಅನುಮಾನ ತರಿಸುತ್ತಿದೆ ಎಂದು ರಾಜುಗೌಡ ಹೇಳಿದರು.

        ನಾನು ಪಕ್ಷ ಅಂತ ನೋಡುವುದಿಲ್ಲ ನಮ್ಮದು ಬೇರೆ ಬೇರೆ ಪಕ್ಷವಾಗಿದ್ದರೂ ನಾನು ಅವರು ಒಳ್ಳೆಯ ಸ್ನೇಹಿತರು. ಈ ರೀತಿ ಆಗಿದೆ ಅಂದಾಗ ಆತಂಕಕ್ಕೊಳಗಾಗಿ ಭೇಟಿಗೆ ಬಂದೆ. ಬೆಳಿಗ್ಗೆ ನನಗೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ `ರಕ್ತ ಪರೀಕ್ಷೆಗೆ ಒಳಗಾಗುತ್ತಿದ್ದೇನೆ’ ಎಂದು ಹೇಳಿ ಒಳಗೆ ಪ್ರವೇಶಿಸಿ ರಕ್ತ ತಪಾಸಣೆಗೂ ಒಳಗಾದೆ. ಸಾಕಷ್ಟು ಕಷ್ಟ ಪಟ್ಟು 6ನೇ ಮಹಡಿವರೆಗೂ ತೆರಳಿದರೂ ಕೂಡ ಅವರ ಭೇಟಿಗೆ ಅವಕಾಶ ಸಿಗಲಿಲ್ಲ ಎಂದು ನಿರಾಶರಾಗಿ ನುಡಿದರು.

       ಗೌಪ್ಯವಾಗಿ ಇವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆಯೋ ಏನೋ ಎಂಬ ಅನುಮಾನ ನನ್ನನ್ನ ಕಾಡುತ್ತಿದೆ. ಆನಂದ್ ಅಣ್ಣನನ್ನ ಬೇಟಿಯಾಗುವ ಆಸಕ್ತಿ ಮಾಧ್ಯಮದವರಿಗೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ನನಗಿತ್ತು. ಆದರೆ ನಿರಾಸೆಯಾಗಿದೆ ಎಂದ ರಾಜುಗೌಡ, ಆನಂದ್ ಸಿಂಗ್ ಅವರ ಕುಟುಂಬ ಸದಸ್ಯರು ಮುಂಬೈಯಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಇಂದು ಸಂಜೆಯೊಳಗೆ ವಾಪಸ್ ಆಗುವ ಸಾಧ್ಯತೆ ಇದೆ. ಅವರ ತಂದೆ ತಾಯಿ ಕೂಡ ಹೊಸಪೇಟೆಯಲ್ಲಿ ಇದ್ದಾರೆ ಎಲ್ಲರೂ ಸಂಜೆ ವೇಳೆಗೆ ಬರಬಹುದು ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap