4 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಹುಲಿಕಲ್ ನಟರಾಜು

ತುರುವೇಕೆರೆ:

        ರಾಷ್ಟ್ರ ಹಾಗು ಹೊರ ರಾಷ್ಟ್ರಗಳಲ್ಲಿ ಎಷ್ಟೆ ಗೌರವ ಸನ್ಮಾನಗಳು ಸಿಕ್ಕರೂ ಸಹ ಹುಟ್ಟಿ ಬೆಳೆದ ತವರೂರಲ್ಲಿ ಪಡೆವ ಸನ್ಮಾನ ಇದೆಯಲ್ಲಾ ಅದು ನನ್ನ ಜೀವನ ಪರ್ಯಂತ ನೆನಪಿಸುವಂತಾದ್ದು ಎಂದು ತುರುವೇಕೆರೆ ತಾಲ್ಲೂಕು ಸಮ್ಮೇಳನಾದ್ಯಕ್ಷ ಡಾ.ಹುಲಿಕಲ್ ನಟರಾಜು ಅವರಿಂದ ಬಂದಂತ ಅಂತರಾಳದ ಮಾತಿದು.

         ತುರುವೇಕೆರೆಯಲ್ಲಿ ಜನವರಿ 30 ಹಾಗು 31 ರಂದು ಹಮ್ಮಿಕೊಂಡಿರುವ ನೂತನ ಕನ್ನಡ ಭವನ ಉಧ್ಘಾಟನೆ ಹಾಗು 4 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ತಾಲ್ಲೂಕಿನವರೇ ಆದ ರಾಷ್ಟ್ರ ಹಾಗು ರಾಜ್ಯ ಪ್ರಶಸ್ತಿ ಪುರಸ್ಕತ ಡಾ. ಹುಲಿಕಲ್ ನಟರಾಜು ಅವರನ್ನು ಆಹ್ವಾನಿಸಲು ದೊಡ್ಡಬಳ್ಳಾಪುರದ ಅವರ ಸ್ವಗೃಹಕ್ಕೆ ತಾಲ್ಲೂಕು ಕಸಾಪ ಪದಾಧಿಕಾರಿಗಳು ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಸಂಧರ್ಭದಲ್ಲಿ ಮುಕ್ತ ಮನಸ್ಸಿನಿಂದ ಮಾತನಾಡಿದ ಅವರು ಕನ್ನಡ ಹಬ್ಬ ಅಂದರೆ ಒಳಗಿನ ಹಾಗು ಹೊರಗಿನ ಕನ್ನಡಿಗರ ಸಂಬಂದವನ್ನು ಬೆಸೆಯುವಂತಾದ್ದು.

         ನಾನು ಎಲ್ಲೇ ಇದ್ದರೂ ನನ್ನ ತವರೂರು ಕರ್ಮಭೂಮಿ. ನಾನು ಹುಟ್ಟಿ ಬೆಳೆದ ಶಿಕ್ಷಣ ಸೇರಿದಂತೆ ಅನೇಕ ಕನಸುಗಳನ್ನು ಕಟ್ಟಿದ ಈ ಮಣ್ಣಿನ ಋಣ ಜನ್ಮ ಜನ್ಮಾಂತರದ್ದು. ಬಡತನದ ಬವಣೆಯಲ್ಲಿ ಬೆಂದ ನನಗೆ ಸೋಲುಗಳೇ ಮೆಟ್ಟಿಲಾಗಿದ್ದು, ನನಗಿಂದು ದೊರೆಯುತ್ತಿರುವ ಗೌರವಾದರಗಳು ನನ್ನ ಪೂರ್ವಾರ್ಜಿತರ ಪುಣ್ಯವೇ ಸರಿ. ನನ್ನ ಹುಟ್ಟೂರಲ್ಲಿ ಕಳೆಯುವ ಆ ಎರಡು ದಿನಗಳೂ ನನ್ನ ಜೀವನದ ಅಪರೂಪದ ಕ್ಷಣಗಳಾಗಿರುವುದು ನನ್ನ ಸೌಭಾಗ್ಯ.

       ನನ್ನ ಮೇಲಿಟ್ಟಿರುವ ನಮ್ಮೂರಿನ ಜನತೆಗೆ ನಾನು ಎಂದೆಂದೂ ಚಿರಋಣಿಯಗಿರುತ್ತೇನೆ ಎಂದರು. ಈ ಸಂಧರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಂ.ರಾಜು, ಗೌರವಾದ್ಯಕ್ಷ ಪ್ರೊ|| ಪುಟ್ಟರಂಗಪ್ಪ, ಸಂಚಾಲಕರಾದ ಎಪಿಎಮ್‍ಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪ್ರಹ್ಲಾದ್, ಮಲ್ಲಿಕಾರ್ಜುನ ದುಂಡ ಹಾಗು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap