ಮನುಷ್ಯ ಸಂಬಂಧಗಳು ಅವರ ಬದುಕನ್ನು ಸುಂದರಗೊಳಿಸುವಂತಿದ್ದರೆ ಮಾತ್ರಚೆನ್ನ

ಹಾನಗಲ್ಲ :

          ಮನುಷ್ಯ ಸಂಬಂಧಗಳು ಅವರ ಬದುಕನ್ನು ಸುಂದರಗೊಳಿಸುವಂತಿದ್ದರೆ ಮಾತ್ರಚೆನ್ನ, ಇಲ್ಲದಿದ್ದರೆಅದಕ್ಕೆ ಬೆಲೆಯೆಇಲ್ಲ ಸುಂದರ ಬದುಕನ್ನು ಕಟ್ಟಿಕೊಳ್ಳುವುದು ಅವರ ಸಂಸ್ಕಾರದಿಂದ ಮಾತ್ರ ಸಾಧ್ಯ.ನಮ್ಮ ಬದುಕು ಸುಂದರರಂಗೊಲಿ ಇದ್ದಂತೆ, ಅಲ್ಲಿಂದಲೆ ನಮ್ಮಸಂಸ್ಕತಿ,ಆಚಾರ,ವಿಚಾರ ತಿಳಿಯುತ್ತದೆ.

        ಶಿಕ್ಷಕರ ಆದ್ಯಕರ್ತವ್ಯಅವರ ಬದುಕನ್ನ ಸುಂದರಗೊಳಿಸವುದರ ಜೊತೆಗೆಅವರ ಮಕ್ಕಳನ್ನ ಜಗತ್ತಿಗೆ ಕೊಡುಗೆ ಕೊಡುವಂತೆ ಮಾಡುವುದು ಎಂದು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದಬಿಳ್ಕೋಡುಗೆ ಸಮಾರಂಭ ಹಾಗೂ ದೀಪದಾನ ಸಮಾರಂಭದಂದು ಪೂಜ್ಯರಾದ ಶ್ರೀಮನ್ ಮಹಾರಾಜ ನಿರಂಜನಜಗದ್ಗುರು ಶ್ರೀ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಮೂರುಸಾವಿರಮಠ ನುಡಿಯುತ್ತ ಇಂದು ಶಿಕ್ಷಕರಾದವರು ತಮ್ಮ ಮೇಲೆಯೆ ನಂಬಿಕೆ ಇಟ್ಟು ಬಂದಿರುವ ಮಕ್ಕಳಿಗೆ ಸರಿಯಾಗಿವಿದ್ಯೆಯನ್ನುತಿಳಿಸಿ ಅವರನ್ನು ಈ ಸಮಾಜಕ್ಕೆಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡಿಕೊಡಬೇಕಾಗಿದೆಎಂದು ನುಡಿದರು.

        ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ ಬಿ.ಬಿ. ನಂದ್ಯಾಲ ಎಸ್.ಜೆ.ಪಿ.ವಿ ಕಾಲೇಜ ಹರಿಹರಇವರು ಮಾತನಾಡುತ್ತ ಶಿಕ್ಷಕರು ಶಿಲ್ಪಿಗಳು, ವಿದ್ಯಾರ್ಥಿಗಳು ಕಲ್ಲುಬಂಡೆಗಳು ಅವರನ್ನು ಸರಿಯಾಗಿ ಮೂರ್ತಿಗಳನ್ನಾಗಿ ಮಾಡುವಕಾರ್ಯ ಶಿಕ್ಷಕರ ಮೇಲಿದೆ. ಜನನ,ಜೀವನ, ಮರಣಅಮೂಲ್ಯ ಘಟ್ಟಗಳು ಅವನ್ನು ಸರಿಯಾಗಿ ನಿಬಾಯಿಸುವ ಕಾರ್ಯ ನಮ್ಮ ಮೇಲಿದೆ. ಯಶಸ್ಸುಅನ್ನುವುದು ಕೇವಲ ಕಲ್ಪನೆಅಲ್ಲಅದನ್ನ ನಿಯಮಿತವಾಗಿಕಾರ್ಯ ಮಾಡಿದಾಗ ಮಾತ್ರ ಸಿಗಲು ಸಾದ್ಯಎಂದು ನುಡಿದರು.

        ಕಾರ್ಯಾದ್ಯಕ್ಷರಾದ ಪ್ರೊದಿನೇಶ ಆರ್‍ರವರು ವಾರ್ಷಿಕ ವರದಿಯನ್ನು ನಿರೂಪಿಸಿದರು,ಡಾ.ಪ್ರಕಾಶ ಹುಲ್ಲೂರ ಅತಿಥಿಗಳನ್ನ ಪರಿಚಯಿಸಿದರು. ದೀಪದಾನವನ್ನು ಪ್ರಾಚಾರ್ಯಡಾ ಸದಾಶಿವಪ್ಪ ಎನ್‍ರವರು ನೆರವೇರಿಸಿದು.ದತ್ತಿನಿಧಿಕಾರ್ಯಕ್ರಮವನ್ನುಪ್ರೊಎಮ್ ಬಿ ನಾಯ್ಕರವರು ನೆರವೇರಿಸಿಕೊಟ್ಟರು.

       ಪ್ರಶಿಕ್ಷಣಾರ್ಥಿ ಆಂಜನೆಯ ಸಂತೋಳಿ ಹಾಗೂ ವಂದನಾ ಹೆಗಡೆತಮ್ಮಕಾಲೇಜಿನ ಅನಿಸಿಕೆ ಹಂಚಿಕೊಂಡರು. ಹನುಮಂತಪ್ಪ ಬಿತ್ತಪ್ಪನವರ ಹಾಗೂ ಅನಿತಾ ಪೂದೂರಅವರುಕಾಲೇಜಿಗೆ ಪ್ರಥಮ ಬಂದು ನೆನಪಿನ ಕಾಣಿಕೆ ಹಾಗೂ ದತ್ತಿನಿಧಿ ಪಡೆದುಕೊಂಡು ಮಾತನಾಡುತ್ತ ನಮ್ಮಕಾಲೇಜುಅಂದರೆ ಸ್ವರ್ಗ ಹಾಗೂ ಅನುಭವ ಕಲಿಸಿಕೊಡುವ ಜ್ಞಾನ ಮಂದಿರಎಂದರು.ವಿವಿಧ ಕ್ರೀಡೆಗಳಲ್ಲಿ ಪ್ರಥಮ ಬಂದ ಪ್ರಶಿಕ್ಷಣಾರ್ಥಿಗಳಿಗೆ ಪ್ರೊ ಮಹೇಶ ಅಕ್ಕಿವಳ್ಳಿಯವರು ಬಹುಮಾನ ವಿತರಿಸಿದರು.

        ರಾಜೇಶ್ವರಿಗೌಡರ ಹಾಗೂ ಮಂಜುಶ್ರೀ ಕಾರ್ಯಕ್ರಮನಿರೂಪಿಸಿದರು,ಶ್ವೇತಾ ಶಿವಗಿರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ ವಿಶ್ವನಾಥ ಬೊಂದಾಡೆ ಸ್ವಾಗತಿಸಿದರು, ಲಕ್ಷ್ಮೀ ಗುಂಜಾಳ ವಂದಿಸಿದರು.ಪ್ರೊ ಪ್ರಕಾಶ ಜಿ ವಿ, ಪ್ರೊ.ರಾಘವೇಂದ್ರ ಮಾಡಳ್ಳಿ, ಪ್ರೊ.ಜೀತೇಂದ್ರ ಜಿ ಟಿ, ಪ್ರೊಎಮ್.ಬಿ.ನಾಯ್ಕ, ಪ್ರೊ.ಹರೀಶ ಟಿ ಟಿ, .ರುದ್ರೇಶ ಬಿ.ಎಸ್. ಪ್ರೊಎಮ್‍ಎಮ್ ನಿಂಗೋಜಿ, ಎಸ್.ಸಿ.ವಿರಕ್ತಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap