ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಹುಂಡಿ ಎಣಿಕೆ

0
6

ಹರಪನಹಳ್ಳಿ:

        ತಾಲ್ಲೂಕಿನ ದೇವರ ತಿಮಲಾಪುರ ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಭಾನುವಾರ ನಡೆದಿದ್ದು, 7,33,855 ಹಣ ಸಂಗ್ರವಾಗಿದೆ.

        ಈ ಹಿಂದೆ ಕಮೀಟಿಯವರೇ ಹುಂಡಿ ಎಣಿಕೆ ಮಾಡುತ್ತಿದ್ದರು. ಭಾನುವಾರವೂ ಸಹ ಕಮೀಟಿ ಹಣ ಎಣಿಕೆ ಮುಂದಾಗಿತ್ತು. ಆದರೆ ಇದಕ್ಕೆ ಗ್ರಾಮಸ್ಥರು ಹಾಗೂ ವಾಲ್ಮೀಕಿ ನಗರದ ಯುವಕರು ಆಕ್ಷೇಪ ವ್ಯಕ್ತಪಡಿಸಿ ತಹಶೀಲ್ದಾರಿಗೆ ಮಾಹಿತಿ ಮುಟ್ಟಿಸಿದ್ದರು. ತದನಂತರ ತಹಶೀಲ್ದಾರ ಆದೇಶದಂತೆ ಎಣಕೆ ಕಾರ್ಯ ನಡೆಯಿತು.

         ದೇವಸ್ಥಾನ ಮುಜರಾಯಿ ಇಲಾಖೆಯ ಸಿ ಗ್ರೇಡ್ ವ್ಯಾಪ್ತಿಗೆ ಒಳಪಟ್ಟಿದೆ. ಎಣಿಕೆ ಕಾರ್ಯದಲ್ಲಿ ಅಡವಿಹಳ್ಳಿ ಗ್ರಾಮ ಲೆಕ್ಕಿಗರಾದ ಎಸ್.ಶಿಲ್ಪಾ, ದೇವಸ್ಥಾನ ಕಮೀಟಿ ಧರ್ಮದರ್ಶಿಗಳಾದ ಕಟ್ಟಿ ಆನಂದಪ್ಪ, ರಂಗಣ್ಣ, ಹರ್ಷ, ಗ್ರಾಮಮ ಮುಖಂಡರಾದ ಗೌಡಪ್ಪರ ನಾಗಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಸಣ್ಣನಿಂಗಪ್ಪ, ಆರ್.ನಾಗರಾಜ, ಭೀಮಪ್ಪ, ಅರ್ಚಕರಾದ ವಿಷ್ಣು, ಶ್ರೀನಿವಾಸ್ ಪೂಜಾರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here