ಕಳಂಕ ರಹಿತ ಸೇವೆ ನನ್ನ ಉದ್ದೇಶ…!!!

ಮೊಳಕಾಲ್ಮುರು  

         ಯಾವುದೇ ಕಪ್ಪುಚುಕ್ಕೆ ಇಲ್ಲದೇ ಕಳಂಕ ರಹಿತ ಸೇವೆಯೊಂದಿಗೆ ಜಿಲ್ಲೆಗೆ ಗೌರವ ತರುವಂತಹ ನಿಟ್ಟಿನಲ್ಲಿ ಸಂಸದನಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿಯಿದ್ದು ಎಲ್ಲಾ ಸಮುದಾಯದ ಪ್ರೀತಿ ಗೌರವಕ್ಕೆ ದೊರತ ಮನ್ನಣೆಯಾಗಿದೆ ಎಂದು ಸಂಸದ ಬಿ.ಎನ್. ಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

         ತಾಲ್ಲೂಕಿನ ಚಿಕುಂತಿ ಗ್ರಾಮದಲ್ಲಿ ನಡೆದ ಶ್ರೀಕಂಪಳರಂಗಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಮಾತನಾಡಿದರು.

       ಎಲ್ಲಾ ಸಮುದಾಯದ ಪ್ರೀತಿ ಗೌರವದಿಂದ ಲೋಕಸಭಾ ಕ್ಷೇತ್ರಾದ್ಯಾಂತಹ ಸೀಮಿತ ಅನುದಾನದಲ್ಲಿ ನ್ಯಾಯ ಒದಗುಸುವಂತಹ ಅಭಿವೃದ್ದಿ ಕಾರ್ಯಕ್ರಮಗಳೊಂದಿಗೆ ಸಂಸದನಾಗಿ ಸೇವೆ ಸಲ್ಲಿಸಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಮೂಲಕ ಮತ್ತಷ್ಟು ಅಭಿವೃದ್ದಿ ಕಾರ್ಯಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ತಮ್ಮೇಲ್ಲರ ಸಹಕಾರ ಅವಶ್ಯಕವಿದೆ ಎಂದು ತಿಳಿಸಿದರು.

       ಬಿ.ಜಿ.ಕೆರೆ ಜಿ.ಪಂ ಸದಸ್ಯ ಹಾಗೂ ಮೊಳಕಾಲ್ಮುರು ವಿಧಾನಸಭಾ ಕಾಂಗ್ರೇಸ್ ಮುಖಂಡ ಡಾ ಬಿ. ಯೋಗೀಶ್ ಮಾತನಾಡಿ ಸಂಸದರ ಕಡಿಮೆ ಅನುದಾನದಲ್ಲಿ ಅವಶ್ಯಕವಾದ ಅಭಿವೃದ್ದಿ ಕಾರ್ಯಕ್ರಮಗಳೊಂದಿಗೆ ಪ್ರತಿಯೊಂದು ಸಮುದಾಯದ ವಿಶ್ವಾಸ ಗಳಿಸಿರುವ ಸಂಸದರ ಸೇವೆ ಶ್ಲಾಘನೀಯವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಸಂಸದರಾಗಲು ಪ್ರತಿಯೊಬ್ಬರು ಶ್ರದ್ದೆಯಿಂದ ಸೇವೆ ಸಲ್ಲಿಸಬೇಕಾಗಿದೆ ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ತಿಳಿಸಿದರು.

      ಇತಿಹಾಸ ಪ್ರಸಿದ್ದ ಮ್ಯಾಸ ನಾಯಕ ಸಂಸ್ಕತಿಯ ಬುಡಕಟ್ಟು ಜನರ ಆರಾದ್ಯದೈವ ಶ್ರೀ ಕಂಪಳರಂಗಸ್ವಾಮಿಯ ನೆಲೆ ಬೀಡಾಗಿರುವ ಚಿಕುಂತಿ ಗ್ರಾಮಕ್ಕೆ ಇದುವರೆಗೂ ಯಾವುದೇ ಸಂಸದರು ಬೇಟಿ ನೀಡಿಲ್ಲ ಎಂಬ ಗ್ರಾಮಸ್ಥರ ಬೇಸರಕ್ಕೆ ಮುಕ್ತಿ ನೀಡಿರುವುದರೊಂದಿಗೆ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಬದ್ದ ಎಂಬ ಸಂಸದರ ಕಾರ್ಯವೈಖರಿಗೆ ಉದಾರಣೆಯಾಗಿದೆ ಇಂತಹ ಗೌರವಾನ್ವೀತ ಸಂಸದರ ಸೇವೆಗೆ ಮತ್ತೊಮ್ಮೆ ಕಂಕಣ ಬದ್ದರಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

        ಸಂದರ್ಭದಲ್ಲಿ ಶ್ರೀ ಕಂಪಳರಂಗಸ್ವಾಮಿ ಪೀಠಾಧಿಪತಿ ಪೂಜಾರಿ ರೇವಣ್ಣ, ಕೆಪಿಸಿಸಿ ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯಧರ್ಶಿ ಸಿ. ಭಕ್ತ ಪ್ರಹ್ಲಾದ್, ಜಿ.ಪಂ. ಕೆಡಿಪಿ ಸದಸ್ಯ ಜಯಣ್ಣ, ವಕೀಲ ಮಲ್ಲೇಶಿ, ಧವರ್iಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಯೋಜಕ ಓ ಬೋರಯ್ಯ, ಗ್ರಾಮದ ಮುಖಂಡರಾದ ದಳಪತಿ ತಿಪ್ಪೇಸ್ವಾಮಿ, ಮೆಂಬರ್ ಬೋರಯ್ಯ, ಗ್ರಾ.ಪಂ. ಅದ್ಯಕ್ಷ ವೆಂಕಟೇಶ್ ತಿಪ್ಪೇಸ್ವಾಮಿ ಪಾಲಯ್ಯ, ಮಂಜಣ್ಣ, ಶಿವಮೂರ್ತಿ, ಶಂಕರಪ್ಪ, ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap