ನಾನು ಸಹ ಮದಕರಿ ನಾಯಕ ಸಿನಿಮಾ ಮಾಡೇ ಮಾಡುತ್ತೇನೆ: ಕಿಚ್ಚ ಸುದೀಪ್

ಹರಿಹರ:

       ಮದಕರಿ ನಾಯಕರ ಬಗ್ಗೆ ಯಾರೇ ಏಷ್ಟೇ ಸಿನಿಮಾಗಳನ್ನು ಮಾಡಿದರು ನಾನುಕೂಡ ಮದಕರಿ ಸಿನಿಮಾ ಮಾಡುತ್ತೇನೆ, ಎರಡು ಮೂರು ವರ್ಷದಿಂದ ಅಧ್ಯಯನ ಮಾಡಿ ಸಿದ್ದಪಡಿಸಿರುವ ಚಿತ್ರಕಥೆಯನ್ನು (ಸ್ಕ್ರೀಪ್) ಒಪ್ಪಿಕೊಂಡಿದ್ದು ಮದಕರಿ ಸಿನಿಮಾ ಮಾಡೆ ಮಾಡ್ತೆನೆ ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದರು.

      ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರು ಪೀಠಕ್ಕೆ ಶುಕ್ರವಾರ ಬೇಟಿ ನೀಡಿ ಶ್ರೀಗಳನ್ನು ಸನ್ಮಾನಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಂಡುಗಲಿ ವೀರ ಮದಕರಿ ನಾಯಕರ ಸಿನಿಮಾವನ್ನು ನಟ ದರ್ಶನ್ ಅವರುಮಾಡುತ್ತಿರುವುದನ್ನು ಕಲಾವಿದನಾಗಿ ನಾನು ಸ್ವಾಗತಿಸುತ್ತೇನೆ, ನಾನು ಕೊಡ ಮದಕರಿ ನಾಯಕರ ಕುರಿತು ಸಿನಿಮಾ ಮಾಡುತ್ತೆನೆ. ಮದಕರಿ ನಾಯಕರ ಜೀವನ ಚರೀತ್ರಯ ಬಗ್ಗೆ ಮೂರು ವರ್ಷದಿಂದ ಅಧ್ಯನಯನ ಮಾಡಿ ಚಿತ್ರಕಥೆಯನ್ನು( ಸ್ಕ್ರೀಪ್) ಕೂಡ ಸಿದ್ದಪಡಿಸಲಾಗಿದೆ. ಹಾಗಾಗೀ ಮದಕರಿ ನಾಯಕರ ಸಿನಿಮಾ ಮಾಡುವುದಾಗಿ ಈ ಹಿಂದೆ ನಾನು ಹೇಳಿದ್ದೆ ಎಂದರು.

        ರಾಕ್‍ಲೈನ್ ವೇಕಟೇಶ ನಿರ್ಮಾಣದ ಮದಕರಿ ನಾಯಕರ ಸಿನಿಮಾ ಜನವರಿ ತಿಂಗಳಲ್ಲಿ ಪ್ರಾರಂಭಿಸುವುದಾಗಿ ನನಗೆ ತಿಳಿದು ಬಂದಿದ್ದು, ನಾವು ಮಾಡಲಿರುವ ಸಿನಿಮಾವು ಮಾರ್ಚ ಅಥವಾ ಎಪ್ರೀಲ್ ತಿಂಗಳಿನಲ್ಲಿ ಪ್ರಾರಂಭಮಾಡಲಿದ್ದೇವೆ. ಇದೂಂದು ವೀರನ ಕಥೆಯಾಗಿರುವುದರಿಂದ ಯಾರೇ ಸಿನಿಮಾ ಮಾಡಲಿ ಅದು ಉತ್ತಮವಾಗಿ ಮೂಡಿಬರಲಿ ಹಾಗೂ ಹಣವನ್ನು ಚನ್ನಾಗಿ ಗಳಿಸಲಿ.ನಾವು ಕೂಡ ಮದಕರಿ ನಬಾಯಕರ ಕುರಿತು ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದರು.

         ದುರ್ಗದ ಹುಲಿ ಚೀತ್ರದ ಟೈಟಲ್ ವಿಚಾರವಾಗಿ ಮಾತನಾಡಿದ ಅವರು ಆ ಟೈಟಲ್ ಬಗ್ಗೆ ವಿವಾದ ನೆಡದಿದ್ದು, ರಾಕ್‍ಲೈನ್ ವೇಕಟೇಶ ನಿರ್ಮಾಣದವರು ಯಾವ ಟೈಟಲ್‍ಆಯ್ಕೆಮಾಡಿಕೊಂಡು ಉಳಿದ ಯಾವದೇ ಟೈಟಲ್ ಕೊಟ್ಟರು ತಗೆದುಕೊಳ್ಳಲು ನಾವು ಸಿದ್ದರಿರುವುದಾಗಿ ಹೇಳಿದ ನಟ ಸುದೀಪ್ ವೀರ ದೊರೆಯಾದ ಮದಕರಿನಾಯಕನ ಚರೀತ್ರಗೆ ಹೆಸರಿಸಲು ಸಾಕಷ್ಟು ಟೈಟಲ್‍ಗಳು ಲಭ್ಯವಿದ್ದು ಯಾವುದಾದರು ಒಂದನ್ನು ಆಯ್ಕೆಮಾಡಿಕೊಳ್ಳುತ್ತೇವೆ ಎಂದರು.

        ಗುರುವಾರದಂದು ತೆರೆಕಂಡ ದೀ ವಿಲನ್ ಚೀತ್ರದ ಬಗ್ಗೆ ಮಾತನಾಡಿದ ಅವರು ಶಿವಣ್ಣ ಆಭಿಮಾನಿಗಳು ನನ್ನನು ತಪ್ಪಾಗಿ ತಿಳಿದುಕೊಂಡು ಶಿವಣ್ಣನವರಿಗೆ ಹೊಡೆದು ಅವಮಾನಿಸಿರುವುದಾಗಿ ಭಾವಿಸಿರುತ್ತಾರೆ ಅದರೆ ಚೀತ್ರದಲ್ಲಿ ಅತಂಹ ಸನ್ನಿವೇಶವಿದ್ದು ಅದಕ್ಕೆ ತಕ್ಕಂತೆ ಶಿವಣ್ಣ ಮತ್ತು ನಾನು ಆಭಿನೆಸಿದ್ದೇವೆ. ಚೀತ್ರದ ಸನ್ನಿವೇಶಗಳಲ್ಲಿ ಯಾರು ಯಾರನ್ನೆ ಹೋಡದರು ಆಭಿಮಾನಿಗಳು ತಪ್ಪಾಗಿ ಭಾವಿಸಬಾರದು ಮತ್ತು ಆ ದೃಶ್ಯದಲ್ಲಿ ಶಿವಣ್ಣನವರು ತಾಯಿಯ ಬಳಿ ಅವನ ಮೇಲೆ ಕೈ ಎತ್ತುವುದಿಲ್ಲ ಎಂದು ಮಾತ್ತು ಕೊಟ್ಟು ಬಂದಿರುತ್ತಾರೆ. ಅದರಂತೆ ನಾವಿಬ್ಬರು ಆಭಿನೆಸಿರುತ್ತೇವೆ ಎಂದು ತಿಳಿಸಿದರು.

         ಚೀತ್ರರಂಗದಲ್ಲಿ ಕಳೆದ ಮೂವತೈದು ವರ್ಷಗಳಿಂದ ಇರವ ಶಿವಣ್ಣನವರು ಸಿನಿಮಾ ಬಗ್ಗೆ ಚೀತ್ರಕಥೆ ಇತ್ಯಾದಿಗಳನ್ನು ಪರಿಶೀಲಿಸಿ ಚಿತ್ರದಲ್ಲಿ ನಟಿಸಿದ್ದಾರೆ. ನಾನು ಸಹಚಿತ್ರದ ಸನ್ನಿವೇಶಕ್ಕೆ ತಕಂತೆ ಆಭೀನೆಸಿದ್ದೆನೆ ಇದಕ್ಕೆ ಬೇರೆ ಅರ್ಥ ಕಲ್ಪೀಸುವುದು ಬೇಡ.ಈ ಸನ್ನಿವೇಶದಿಂದ ಶಿವಣ್ಣ ಆಭಿಮಾನಿಗಳಿಗೆ ಬೇಸರವಾಗಿದ್ದರೆ ನಿರ್ದೇಶಕರ ಬಳಿ ಶಿವಣ್ಣನವರು ಮಾತನಾಡಿ ಆ ದೃಶ್ಯವನ್ನು ಬೇಕಿದರೆ ಚೀತ್ರದಿಂದ ತೆಗೆಸಲಿ ಎಂದು ಶಿವಣ್ಣ ಆಬಿಮಾನಿಗಳ ಆರೋಪಕ್ಕೆ ಪ್ರತಿಕ್ರೀಯೆ ನೀಡಿದರು.

          ಮದಕರಿ ಚೀತ್ರದಲ್ಲಿ ಸುದೀಪ್ ಅವರು ಆಭಿನೆಸಬೇಕು ಏಂಬ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಗೆ ಪ್ರತಿಕ್ರೀಯೆ ನೀಡಿದ ವಾಲ್ಮೀಕಿ ಪೀಠದ ಶ್ರೀ ಪ್ರಸನಾನಂದ ಶ್ರೀಗಳು ಈ ಹಿಂದೆ ಹೇಳಿಕೆಯಲ್ಲಿ ನಾನು ಕಲೆ ಅಥವಾ ಕಲಾವಿದರಿಗೆ ಜಾತಿಯಾ ಕಿಚ್ಚು ಹಚ್ಚಲು ಹೇಳಿಕೆ ನೀಡಿಲ್ಲಾ ನಟ ಸುದೀಪ್ ಅವರು ನಮ್ಮ ಸಮುದಾಯದವರಾಗಿದ್ದು ಅವರು ನಟಸಿದರೆ ಚಿತ್ರ ಮನೋಜ್ಞಾವಾಗಿ ಮೂಡಿಬರಲಿದೆ ಎನ್ನುವ ದೃಷ್ಠೀಯಿಂದ ಹೇಳಿಕೆ ನೀಡಿದೆನೆ ಯಾರೇ ಆಭಿನೆಯಸಲಿ ಚಿತ್ರ ಚನ್ನಾಗಿ ಮೂಡಿಬರಲಿ ಏಂಬುದು ನಮ್ಮಆಸೆ ಎಂದರು.
ಈ ಸಂದರ್ಬದಲ್ಲಿ ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ, ಗುತ್ತಿಗೆದಾರ ಮಂಜಪ್ಪ ಹಾಗೂ ಅಸಂಖ್ಯಾತ ಕಿಚ್ಚ ಸುದೀಪ್ ಆಭಿಮಾನಿಗಳು, ಸಮಾಜದ ಮುಖಂಡರುಗಳು ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap