ಇದು ನನ್ನ ಕರ್ಮಭೂಮಿ, ಬಿಟ್ಟು ಹೋಗುವ ಮಾತೇ ಇಲ್ಲ : ಜಿ.ನಾರಾಯಣ್

ತಿಪಟೂರು :

        ಇದು ನನ್ನ ಕರ್ಮ ಭೂಮಿ, ನನ್ನ ರಾಜಕೀಯ ಭವಿಷ್ಯ ಪ್ರಾರಂಭವಾಗಿದ್ದೇ ಇಲ್ಲಿಂದ ಇದನ್ನು ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಹೊನ್ನವಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಜಿ.ನಾರಾಯಣ್ ತಿಳಿಸಿದರು.

          ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನನ್ನನ್ನು ರಾಜ್ಯ ಕಾಂಗ್ರೇಸ್ ವರಿಷ್ಠರ ಆದೇಶ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತುಮಕೂರು ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡರ ಶಿಪಾರಿಸ್ಸಿನಂತೆ, ಎಂ.ಡಿ ಲಕ್ಷ್ಮೀನಾರಾಯಣ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು ಇನ್ನು ಮುಂದೆ ಪಕ್ಷದ ಸಂಘಟನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಾಂಗ್ರೇಸ್ ಪಕ್ಷದ ಸಬಲೀಕರಣ, ಸಂಘಟನೆ, ಬಲವರ್ದನೆ ಕಾರ್ಯದಲ್ಲಿ ದುಡಿಯುತ್ತೇನೆ ಎಂದರು

         ನಿಮ್ಮಲ್ಲಿ ಮತ್ತು ಮಾಜಿ ಶಾಸಕ ಕೆ.ಷಡಕ್ಷರಿಯವರಲ್ಲಿ ವೈಮನಸ್ಯವಿದೆಯೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕುಟುಂಬವೆಂದ ಮೇಲೆ ವೈಮನಸ್ಯಬರುವುದು ಸಹಜ ಆದರೆ ಅದನ್ನು ನಮ್ಮನಮ್ಮಲ್ಲಿಯೇ ಪರಿಹರಿಸಿಕೊಂಡು ಮುಂಬರುವ ನಗರಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಹುಲ್‍ಗಾಂಧಿಯವರನ್ನು ದೇಶದ ಪ್ರಧಾನಿಮಾಡುವುದೇ ನಮ್ಮ ಗುರಿ ಎಂದರು.

           ಇದೇ ವೇಳೆ ಎಲ್ಲಿರಿಗೂ ಹೊಸವರ್ಷದ ಶುಭಾಷಯ ತಿಳಿಸಿ, ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಿಮ್ಮೇಗೌಡ.ಆರ್.ಸಿ, ಗೌಡನಕಟ್ಟೆ ಶಶಿಧರ್, ಬಳ್ಳೆಕಟ್ಟೆ ನರಸಿಂಹಯ್ಯ, ಪ್ರಭುಸ್ವಾಮಿ, ತೀರ್ಥನಾಗೇಂದ್ರ ಪ್ರಸಾದ್ ಮುಂತಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap