ಈ ಬಾಗದ ಜನರ ಕಷ್ಟಗಳಿಗೆ ಆಸರೆಯಾಗುವೆ : ವಿ,ಎಸ್ ಉಗ್ರಪ್ಪ

0
10

ಬಳ್ಳಾರಿ

       ಲೋಕಸಭಾ ಉಪ ಚುನಾವಣೆ ಇನ್ನು ಎರಡು ಸುತ್ತು ಎಣಿಕೆ ಬಾಕಿ ಇರುವಾಗಲೆ ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್,ಉಗ್ರಪ್ಪ ಇದು ನನ್ನ ಗೆಲುವು ಅಲ್ಲ ಮತದಾರರ ಹಾಗೂ ಸಿದ್ದಾಂತದ ಗೆಲುವು ಎನ್ನುವ ಮೂಲಕ ಬಳ್ಳಾರಿಯ ಎಲ್ಲಾ ವರ್ಗದ ಜನರ ಹಿತ ಕಾಯಿವುದು ನನ್ನ ಮೂಲ ಉದ್ದೇಶ ಮತ್ತು ಬರುವ ದಿನಗಳಲ್ಲಿ ನೈಜ ಪ್ರತಿನಿಧಿಯಾಗಿ ಕೇಲಸ ಮಾಡುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ನುಡಿದರು,

       ನಗರದ ಮತ ಎಣಿಕೆ ಕೇಂದ್ರದ ಅರ್ ವೈ ಎಮ್ ಇ ಸಿ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇದು ಒಂದು ಐತಿಹಾಸಿಕ ಗೆಲುವಿನ ಮೂಲಕ ಸರ್ವಾಧಿಕಾರದ ಸೊಲು ಇದು ಎಂದು ನೇರವಾಗಿ ಶ್ರೀರಾಮುಲುಗೆ ಟಾಂಗ್ ಕೊಟ್ಟರು ನಂತರದ ದಿನಗಳಲ್ಲಿ ಬಳ್ಳಾರಿಯ ಸುತ್ತುಮುತ್ತಣ ಶಾಂತಿಯುತ ಅಭಿವೃದ್ಧಿ ಯೋಜನೆ ಬಗ್ಗೆ ಹೆಚ್ಚು ಗಮನ ಸೆಳೆಯುವ ರೀತಿಯಲ್ಲಿ ಹೇಳುವುದಾದರೆ ಭ್ರಷ್ಟಾಚಾರ ವಿರೋಧಿ ನೀತಿಯನ್ನು ಅನುಸರಿಸದೆ ಇಲ್ಲಿನ ಜನರ ಆರೋಗ್ಯ, ಶಿಕ್ಷಣ, ಕೃಷಿ ಮಾರುಕಟ್ಟೆಗಳು ಅನುಭವಿಸುವ ರೈತರ,ಕಷ್ಟಗಳನ್ನು ಅರಿತು ಮನೆ ಮಗನಾಗಿ ಕೆಲಸ ಮಾಡುತ್ತೆನೆ ಸ್ಪಷ್ಟೀಕರಣ ನೀಡಿದರು,

       ಕೇಂದ್ರ ಸರ್ಕಾರದ ವಿರೋಧಿ ನೀತಿಗಳನ್ನು ಮನಗಂಡು ಪಕ್ಷದ ಆದೇಶದಂತೆ ಮುಂದಿನ ಸಂಸದರಾಗಿ ಅಂತರಾಷ್ಟ್ರೀಯ ತೈಲ ಬೆಲೆ ಗಗನಕ್ಕೆ ಏರಿಕೆಯು ಜನರ ಬಡತನಕ್ಕೆ ಕಾರಣ ವಾಗಿವೆ ಸರಳ ಜೀವಿಯಾಗಿ ಸಾಮಾನ್ಯನಲ್ಲಿ ಸಾಮಾನ್ಯನಾಗಿ ಕೆಲಸ ಮಾಡುತ್ತೇನೆ, ಇದು ಜನಾದೇಶ ರಾಮುಲು ರಾಜಿನಾಮೆ ನೀಡಿ ಜನರಿಗೆ ಅಪಮಾನ ಮಾಡಿದ್ದಾರೆ ಅದಕ್ಕೆ ಜನರೆ ತೀರ್ಪು ನೀಡಿದರು ನನ್ನನ್ನ ಸಾರ್ ಅಂತ ಕರೆಯಬೆಡಿ ಎಂದು ಇದು ನಿರಂತರ ಪ್ರಕ್ರಿಯೆ ಐದು ತಿಂಗಳು ಮುಖ್ಯ ಅಲ್ಲ ಜನರ ನೈಜತೆಯನ್ನು ಅರಿಯುವುದು ಸೂಕ್ತ ರೀತಿಯಲ್ಲಿ ಕೆಲಸ ಮಾಡಿದಂತೆ ಎಂದರು,39 ಸಾವಿರ ಕೋಟಿ ರಫೆಲ್ ಹಗರಣ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಹಗರಣ ನರೇಂದ್ರ ಮೋದಿ ಸರ್ಕಾರ ಮಾಡಿದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ಬಳ್ಳಾರಿ ಕಾಂಗ್ರೆಸ್ ಭದ್ರಕೊಟೆ ಎಂಬುದು ಮತ್ತೊಮ್ಮೆ ಮತದಾರರು ಸಾಬಿತು ಪಡಿಸಿದರು ಎನ್ನುವ ಮೂಲಕ ಹರ್ಷ ವ್ಯಕ್ತಪಡಿಸಿದರು ಈ ಸಮಯದಲ್ಲಿ ಸಂಡೂರು ಶಾಸಕ ಈ ತುಕರಾಂ ಜೆ ಎಸ್ ಆಂಜನೇಯಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here