ಪ್ರಾಣಿಗಳಿಗೆ ನೀರು ಹಾಗು ಆಹಾರ ವ್ಯವಸ್ಥೆ ಮಾಡಿದ ಇನ್ಫೋಸಿಸ್ ಸ್ವಯಂ ಸೇವಕರು

ಪಾವಗಡ:

       ಎಂದಿನಂತೆ ಈ ಶನಿವಾರವೂ  ನವಿಲುಧಾಮವಾದ ಹನುಮನ ಬೆಟ್ಟ ದಲ್ಲಿ ಪ್ರಾಣಿಗಳಿಗೆ ನೀರು ಹಾಗು ಆಹಾರ ನೀಡಲಾಯಿತು. ಇದೇಸಂದರ್ಭದಲ್ಲಿ ಸುಮಾರು ಮುನ್ನೂರು ಅಡಿಗೂ ಎತ್ತರವಿರುವ ಅಕ್ಕಮನ ಬೆಟ್ಟಫ ಮದ್ಯೆ ಇರುವ ನೀರುಶೇಕರಣ ದೋಣಿಯೊಂದನ್ನು ಸಂಪೂರ್ಣ ಶುಚಿಗೊಳಿಸಿ ಪ್ರಾಣಿ ಪಕ್ಷಿಗಳಿಗೆ ನೀರುಶೇಖರಣೆಗೆ ಅಣಿಮಾಡಲಾಯಿತು.

       ಈ ಕಾರ್ಯದಲ್ಲಿ ಇನ್ಫೋಸಿಸ್ ನ್ ಸ್ವಯಂಸೇವಕರಾದ ?ಸಮರ್ಪಣ? ತಂಡದವರು ಕೈಗೂಡಿಸಿದ್ದು ನಿಜಕ್ಕೂ ನೆರೆದ ಸಮಸ್ತ ಗ್ರಾಮಸ್ಥರುಗೆ ಸ್ಪೂರ್ತಿದಾಯಕವಾಗಿತ್ತು. ಸ್ವಾಮಿ ಜಪಾನಂದಜಿ ರವರ ತಂಡ ಮತ್ತು ಸ್ವಯಂಸೇವಕರ ತಂಡ ಈ ಸಮಯೋಪಯೋಗಿ ನೀರುಶೇಕರಣ ಸ್ಥಳವನ್ನು ಶುದ್ದಿಗೊಳಿಸಿತು. ಒಟ್ಟಿನಲ್ಲಿ ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಸ್ವಾಮಿ ಜಪಾನಂದಜಿ ರವರ ಶ್ರದ್ದಾಭರಿತ ಸೇವೆಗೆ ಮೆಚ್ಚಲೇಬೇಕು.

        ನೂರಾರು ಪ್ರಾಣಿಪಕ್ಷಿಗಳಿಗೆ ಈಭಯಂಕರ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಒಣಗುವ ಗಂಟಲಿಗೆ ತಂಪೆರಗಿಸುವ ಪವಿತ್ರಕಾರ್ಯ ಎಂತಹ ಹೃದಯಹೀನನಿಗೂ ಹೃದಯವಂತನಾಗಿಸುವ ಪವಿತ್ರ ಸೇವಾಕಾರ್ಯ ಇದಾಗಿದೆ. ಕೆ. ರಾಂಪುರದ ಚಿಣ್ಣರು ಈ ಮಹತ್ಕಾರ್ಯದಲ್ಲಿ ಅತ್ಯನ್ತ ಹುರುಪಿನಿಂದ ಭಾಗವಹಿಸಿದ್ದುದು ನಿಜಕ್ಕೂ ಆಶ್ಚರ್ಯವನ್ನೇ ತಂದಿದೆ.

        ಈ ಬಾಲಕರಲ್ಲಿ ಅನೇಕರು ಶ್ರೀ ರಾಮಕೃಷ್ಣ ಸೇವಾಶ್ರಮದ ಮುಂಜಾನೆ ಹಾಲಿನ ಹಾಗು ಉಪಾಹಾರದ ಯೋಜನೆಯಾದ ?ವಾತ್ಸಲ್ಯ ಸುಧಾ? ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಬಾಲಕರು ಎಂದು ತಿಳಿದಾಗ ಸ್ವಾಮೀಜಿ ರವರುಗೆ ಅದೆಷ್ಟು ಸಂತೋಷವಾಯಿತು ಎಂಬುದನ್ನು ನೋಡಿದಾಗಲೇ ಅರ್ಥವಾಗುತ್ತಿತ್ತು. ಜೀವನದಲ್ಲಿ ಒಂದು ಮಹತ್ ಗುರುತು ಇರುವಂತೆ ಕಾರ್ಯ ಮಾಡು …… ಎನ್ನುವ ಸ್ವಾಮಿ ವಿವೇಕಾನಂದರ ವಾಣಿ ಇಲ್ಲಿ ಕಾರ್ಯರೂಪದಲ್ಲಿ ಗೋಚರಿಸುತ್ತಿದೆ.

        ಇದೆ ಸಂದರ್ಭದಲ್ಲಿ ನವಿಲುಧಾಮಕ್ಕೆ ಒಂದು ನೂತನ ನೀರೆತ್ತುವ ಯಂತ್ರವನ್ನು ಖರೀದಿಸಿದ್ದು ಈ ಯಂತ್ರದಿಂದ ನೀರನ್ನು ಸುಮಾರು ಮುನ್ನೂರರಿಂದ ನಾನೂರು ಅಡಿಗಳವರೆವಿಗೆ ಪಂಪ್ ಮಾಡಬಹುದಾಗಿದೆ. ಸದರಿ ಯಂತ್ರದ ಬಳಕೆ ಸ್ವಾಮೀಜಿ ರವರು ಆರಂಭಿಸಿದರು. ದೂರದ ಮತ್ತು ಕ್ಲಿಷ್ಟ ಹಾಗು ಎತ್ತರದ ನೀರಿನ ದೊಣೆಗಳಿಗೆ ಸುಲಭವಾಗಿ ಡೀಸೈಲೇಂಜಿನ್ನಿನ ಈ ಯಂತ್ರ ಅತ್ಯಂತ ಸಹಕಾರಿಯಾಗಿದೆ. ಬಾಯಾರಿದ ಮೂಕ ಪ್ರಾಣಿಗಳ ಗಂಟಲುಗಳನ್ನು ತಣಿಸುವ ಪವಿತ್ರ ಕಾರ್ಯ ಇನ್ನೂ ಮುಂದುವರೆಯುತ್ತದೆ ಎಂದುಪೂಜ್ಯರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಯೋಜನಾಧಿಕಾರಿಗಳಾದ ಶ್ರೀ ನಾಗರಾಜು, ಸ್ವಯಂ ಸೇವಕರಾದ ವೆಂಕಟೇಶ್, ದೇವರಾಜ್, ಮೂರ್ತಿ, ಹಾಗು ಸಮರ್ಪಣಾ ತಂಡ ಮತ್ತು ಕೆ.ರಾಮಪುರದ ಗ್ರಾಮಸ್ಥರು , ಚಿಣ್ಣರು ಪಾಲ್ಗೊಡ್ಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap