ತುರ್ತಾಗಿ ಪಂಪ್ ಮೋಟಾರ್ ಅಳವಡಿಕೆಗೆ ಸೂಚನೆ

ಚಿತ್ರದುರ್ಗ

       ಜಿಲ್ಲೆಯಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ,ಅಂತಹ ಕಡೆ ತುರ್ತಾಗಿ ಜನವರಿ ಅಂತ್ಯದೊಳಗಾಗಿ ಲಭ್ಯವಿರುವ ಅನುದಾನದಲ್ಲಿ ಪಂಪ್ ಮೋಟಾರ್ ಅಳವಡಿಕೆ ಮಾಡಲು ಬೆಂಗಳೂರು ವಿಭಾಗದ ಸಂಪುಟ ಉಪ ಸಮಿತಿಅಧ್ಯಕ್ಷರು ಹಾಗೂ ಕೃಷಿ ಸಚಿವರಾದ ಶಿವಶಂಕರ್‍ರೆಡ್ಡಿ ಸೂಚನೆ ನೀಡಿದರು.

         ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು, ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಸಣ್ಣಕೈಗಾರಿಕೆ ಸಚಿವರಾದ ಶ್ರೀನಿವಾಸ್, ಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ನೇತೃತ್ವದ ಸಂಪುಟ ಉಪ ಸಮಿತಿಯುಜಿಲ್ಲೆಯ ಪರಪೀಡಿತ ಪ್ರದೇಶಗಳ ಪರೀಕ್ಷಣೆ ಮಾಡಿ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

       ಗ್ರಾಮೀಣಕುಡಿಯುವ ನೀರು ಪೂರೈಕೆ ವಿಭಾಗದಿಂದ ಹಲವು ಕಡೆ ಕೊಳವೆಬಾವಿಯನ್ನು ಕೊರೆಯಲಾಗಿದ್ದರೂ ಪಂಪ್ ಮೋಟಾರ್‍ಗೆಅನುದಾನಇಲ್ಲದಕಾರಣ ನೀರುಕೊಡಲು ಸಾಧ್ಯವಾಗುದಿರುವ ಬಗ್ಗೆ ಸಮಿತಿಯುಗಂಭೀರವಾಗಿ ಪರಿಗಣಿಸಿ ಈಗಾಗಲೇ ಟಾಸ್ಕ್ ಪೋರ್ಸ್‍ನಡಿ ಪ್ರತಿಕ್ಷೇತ್ರಕ್ಕೆ 1 ಕೋಟಿ ಬಿಡುಗಡೆ ಮಾಡಲಾಗಿದೆ.ಮತ್ತುಎಸ್.ಡಿ.ಆರ್.ಎಫ್.ಖಾತೆಯಲ್ಲಿಯು ಸುಮಾರು 7.5 ಕೋಟಿಯಷ್ಟುಅನುದಾನ ಲಭ್ಯವಿರುವುದರಿಂದ ಮೊದಲುಇರುವಅನುದಾನ ಬಳಕೆ ಮಾಡಿಕೊಂಡು ಕೆಲಸ ಮಾಡಲು ಸೂಚನೆ ನೀಡಿದರು.

          ಸಾರಿಗೆ ಸಚಿವರು ಮಾತನಾಡಿ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲಾಗುತ್ತಿದೆ.ಆದರೆ ಇವುಗಳ ಬಗ್ಗೆ ಸರಿಯಾದದಾಸ್ತಾನು ಹೊಂದದೆಇರುವುದರಿಂದ ಪ್ರತಿ ವರ್ಷ ಹೊಸ ಮೋಟಾರ್‍ಖರೀದಿ, ಪೈಪ್‍ಲೈನ್‍ಕಾಮಗಾರಿ ತೆಗೆದುಕೊಳ್ಳುವಂತಾಗಿದೆ.ಆದರೆ ಅಧಿಕಾರಿಗಳಿಗೆ ಕೊಳವೆಬಾವಿ ವಿಫಲವಾದಾಗ ಹಳೆ ಪಂಪ್ ಮೋಟಾರ್‍ತೆಗೆದು ಹೊಸ ಬಾವಿಗೆ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು ಈ ವೇಳೆ ಎಲ್ಲಾ ಸಚಿವರು ಸಹಮತ ವ್ಯಕ್ತಪಡಿಸಿದರು.

         ಈ ಹಂತದಲ್ಲಿಗ್ರಾಮೀಣಕುಡಿಯುವ ನೀರು ಪೂರೈಕೆ ವಿಭಾಗದಕಾರ್ಯಪಾಲಕಇಂಜಿನಿಯರ್ ಸರಿಯಾದ ಅಂಕಿ ಅಂಶ ನೀಡದಿರುವುದರಿಂದ ಸಚಿವರುತೀವ್ರಅಸಮಧಾನ ವ್ಯಕ್ತಪಡಿಸಿದರು. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಅಧಿಕಾರಿಯು ಸಹ ಸುಮ್ಮನೆ ಕಾಲಹರಣ ಮಾಡದೆ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬೇಕೆಂದುಜಿಲ್ಲಾಉಸ್ತುವಾರಿ ಸಚಿವರು ಸೂಚನೆ ನೀಡಿದರು.

        ಉದ್ಯೋಗಖಾತರಿಯಡಿಜಿಲ್ಲೆಯಲ್ಲಿಇಲ್ಲಿಯವರೆಗೆ 3996953 ಮಾನವ ದಿನಗಳನ್ನು ಸೃಜಿಸಲಾಗಿಇದಕ್ಕಾಗಿಒಟ್ಟು 20153 ಲಕ್ಷ ವೆಚ್ಚ ಮಾಡಲಾಗಿದೆ.ಇದಲ್ಲದೆರೈತರಿಗೆ ವೈಯಕ್ತಿಕವಾಗಿಅವರ ಜಮೀನುಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಎರೆಹುಳು ಗೊಬ್ಬರತೊಟ್ಟಿ ನಿರ್ಮಾಣ ಸೇರಿದಂತೆ ಪ್ರತಿರೈತರಿಗೆ ರೂ.1.50 ಲಕ್ಷದವರೆಗೆಖಾತರಿಯಲ್ಲಿಕೊಡಲು ಅವಕಾಶ ಇದ್ದು ಈ ಬಗ್ಗೆ ಜನರಿಗೆ ಕರಪತ್ರಗಳ ಮೂಲಕ ತಿಳಿಸಲಾಗಿದೆ.ಯಾರು ಮುಂದೆ ಬರುತ್ತಾರೆಅಂತಹರೈತರಿಗೆ ನೆರವು ನೀಡಲಾಗುತ್ತದೆಎಂದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ತಿಳಿಸಿದರು.

ಇಸ್ರೇಲ್ ಮಾದರಿ ಕೃಷಿ

         ಬರಪೀಡಿತ ಪ್ರದೇಶವಾಗಿದ್ದರಿಂದಚಿತ್ರದುರ್ಗಜಿಲ್ಲೆಯನ್ನುಇಸ್ರೇಲ್ ಮಾದರಿ ಕೃಷಿಗೆ ಆಯ್ಕೆ ಮಾಡಲಾಗಿದೆ. ಹಾಗೂ ಮುಂದಿನ ವರ್ಷದಿಂದಖಾತರಿಯಡಿಜಲಾನಯನಕನ್ವರ್‍ಜೆನ್ಸ್ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ. ಇದರಿಂದ ಸಾಕಷ್ಟು ಜಲಾನಯನ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಾಗಲಿದೆಎಂದರು.

         ಸಭೆಯಲ್ಲಿ ಹಟ್ಟಿಚಿನ್ನದಗಣಿ ನಿಗಮದಅಧ್ಯಕ್ಷರಾದಟಿ.ರಘುಮೂರ್ತಿ, ಸಂಸದರಾದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯತ್‍ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಿಧಾನ ಪರಿಷತ್ ಸದಸ್ಯೆಜಯಮ್ಮ, ಕೃಷಿ ಇಲಾಖೆ ಸರ್ಕಾರದಕಾರ್ಯದರ್ಶಿ ಮಹೇಶ್ವರರಾವ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿರವೀಂದ್ರ ಹಾಗೂ ವಿವಿಧ ಸ್ಥಾಯಿ ಸಮಿತಿಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap