ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ

ತುರುವೇಕೆರೆ

       ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದು ಬೆಂಗಳೂರು ಎಲ್‍ಸಿಬಿ ಫೌಂಟನ್ ಹೆಡ್ ಅಧ್ಯಕ್ಷ ಲ|| ಗುರುದತ್ ಸೂರ್ಯನಾರಾಯಣ್ ತಿಳಿಸಿದರು.

          ಪಟ್ಟಣದ ಜೆ.ಪಿ. ಆಂಗ್ಲಶಾಲಾ ಆವರಣದಲ್ಲಿ ಲಯನ್ಸ್ ಕ್ಲಬ್ ಲಯನ್ಸ್ ಛಾರಿಟಬಲ್ ಟ್ರಸ್ಟ್ ತುರುವೇಕೆರೆ ಹಾಗೂ ಇತರೆ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ 29 ನೇ ವರ್ಷದ ಮಕ್ಕಳ ಸಪ್ತಾಹ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಲಯನ್ಸ್ ಕ್ಲಬ್‍ನಂತಹ ಸಂಘಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರತಿ ಮಕ್ಕಳು ಪಾಲ್ಗೊಂಡು ತಮ್ಮಲ್ಲಿರುವ ಸುಪ್ತಪ್ರತಿಭೆ ಹೊರಚಿಮ್ಮುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಗುರ್ತಿಸಿಕೊಳ್ಳವಂತಾಗಬೇಕು. ಎಲ್ಲಾ ಮಕ್ಕಳಲ್ಲಿ ಅಡಗಿರುವ ವಿಶೇಷ ಕಲೆಗಳನ್ನು ಗುರ್ತಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.

           ಇಂತಹ ಅವಕಾಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮುಂದೆ ಬನ್ನಿ. ಪ್ರತಿ ಮಕ್ಕಳಲ್ಲಿ ತಮ್ಮದೇ ಆದ ಒಂದೊಂದು ಪ್ರತಿಭೆಯಿದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ನಮ್ಮ ತುರುವೇಕೆರೆ ಲಯನ್ಸ್ ಸಂಸ್ಥೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

          ಜಿಲ್ಲೆ 317ಎ ಆರ್.ಸಿ. ಲ|| ಟಿಎವಿ ಗುಪ್ತಾ ಮಾತನಾಡಿ ಆಧುನಿಕತೆಯಿಂದ ಗ್ರಾಮೀಣ ಪ್ರದೇಶದ ಜಾನಪದ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಆಚಾರ ವಿಚಾರಗಳು ನಶಿಸುತ್ತಿವೆ. ಜಾನಪದ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

           ಮಕ್ಕಳ ಸಪ್ತಾಹ ಸಂಚಾಲಕ ಲ|| ಮಿಹಿರಾ ಕುಮಾರ್ ಮಾತನಾಡಿ ಪ್ರತಿ ವರ್ಷ ಮಕ್ಕಳ ಸಪ್ತಾಹ ಆಚರಿಸುತ್ತಿದ್ದು ಈ ಮೂಲಕ ಪಟ್ಟಣದ ಎಲ್ಲಾ ಶಾಲೆಗಳ ಮಕ್ಕಳು ಭಾಗವಹಿಸುತ್ತಿದ್ದು ಈ ಕಾರ್ಯಕ್ರಮ 7 ದಿನಗಳವರೆಗೆ ನಡೆದು ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಇದೇ 17ರ ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ಪ್ರತಿಭೆಗಳಿಗೆ ಸೂಕ್ತ ಬಹುಮಾನ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಲಾಗುವುದು ಎಂದರು.

            ತಾಲ್ಲೂಕು ಅಧ್ಯಕ್ಷ ಹೆಚ್.ಕೆ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಲ|| ಟಿ.ವಿ.ಮಹೇಶ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ನಟೇಶ್, ಸದಸ್ಯರುಗಳಾದ ಗಂಗಾಧರ ದೇವರಮನೆ, ಸುನಿಲ್‍ಬಾಬು, ಸುರೇಶ್, ಶ್ರೀನಿವಾಸ್, ಕುಮಾರಸ್ವಾಮಿ, ಶಿವಾನಂದ್, ರಾಜಣ್ಣ, ವಿರೂಪಾಕ್ಷ, ಪರಮೇಶ್, ರಾಮಕೃಷ್ಣ ಸೇರಿದಂತೆ ಮಕ್ಕಳು ಹಾಗೂ ಪೋಷಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap