ರಾಮಂದಿರ ನಿರ್ಮಾಣಕ್ಕಾಗಿ ಇಂದು ಜನಾಗ್ರಹ ಸಭೆ

ದಾವಣಗೆರೆ:

           ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯಮಂದಿರ ನಿರ್ಮಾಣಕ್ಕಾಗಿ ಇಂದು (ಡಿ.8ರಂದು) ಸಂಜೆ 4 ಗಂಟೆಗೆನಗರದ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ ತಿಳಿಸಿದರು.

          ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಹರಿಹರ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀಶಿವಾನಂದ ಸ್ವಾಮೀಜಿ, ಆವರಗೊಳ್ಳದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀವೇಮನಾನಂದ ಸ್ವಾಮೀಜಿ ಮತ್ತಿತರೆ ಮಠಾಧೀಶರು ವಹಿಸಿಕೊಳ್ಳಲಿದ್ದಾರೆಂದು ಹೇಳಿದರು.

         ಪ್ರಧಾನ ಭಾಷಣಕಾರರಾಗಿ ವಿಶ್ವ ಹಿಂದೂ ಪರಿಷತ್‍ನ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶರಣ್ ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸಂಸದರ ಮೂಲಕ ಮನವಿಪತ್ರ ಸಲ್ಲಿಸಲಾಗುವುದು ಎಂದರು.

        ಈ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 3 ಗಂಟೆಗೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಹಾಗೂ ನಿಟುವಳ್ಳಿ ಶ್ರೀದುರ್ಗಾಂಬಿಕಾ ದೇವಸ್ಥಾನದಿಂದ ಪ್ರತ್ಯೇಕ ಶೋಭಯಾತ್ರೆ ನಡೆಯಲಿದ್ದು, ಈ ಎರಡೂ ಶೋಭಯಾತ್ರೆಗಳು ಮೋತಿವೀರಪ್ಪ ಮೈದಾನ ಸೇರಿ ಮುಕ್ತಾಯವಾಗಲಿವೆ ಎಂದು ಹೇಳಿದರು. 

         ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಅಡೆತಡೆಗಳನ್ನು ಸಂಸತ್ತಿನಲ್ಲಿ ಮಸೂದೆ ಮೂಲಕ ನಿವಾರಿಸಬೇಕು. ಹಿಂದೂ ಭಾವನೆಗಳನ್ನು ಕೆಣಕುವ ಪ್ರಸಂಗಗಳು ಇನ್ನು ಮುಂದೆ ಮರುಕಳಿಸಬಾರದು. ಮುಸ್ಲಿಂ ಸಮಾಜವು ತಾನೇ ನೀಡಿದ್ದ ಭರವಸೆಯಂತೆ ಸ್ವ ಇಚ್ಛೆಯಿಂದ ಜನ್ಮಸ್ಥಳದ ಜಾಗವನ್ನು ಹಿಂದೂ ಸಮಾಜಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿದರು

           ಅಯೋಧ್ಯೆಯ ಸಾಂಸ್ಕತಿಕ ಪರಿಧಿಯೊಳಗೆ ಯಾವುದೇ ಮಸೀದಿ ಅಥವಾ ಇಸ್ಲಾಮೀ ಸ್ಮಾರಕಗಳ ನಿರ್ಮಾಣವಾಗಬಾರದು. ಜನ್ಮಭೂಮಿ ರಾಮಮಂದಿರದ ನಕ್ಷೆಯಂತೆಯೇ ಸಂಗ್ರಹಿಸಿದ ಇಟ್ಟಿಗೆ, ಕೆತ್ತಿದ ಕಲ್ಲುಗಳಿಂದಲೇ ಮಂದಿರ ನಿರ್ಮಾಣವಾಗಬೇಕೆಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈ ಜನಾಗ್ರಹ ಸಭೆಯ ಮೂಲಕ ಪ್ರತಿಪಾದಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಬಸವರಾಜ ಗುಬ್ಬಿ, ರವೀಂದ್ರ, ಹನುಮಂತಪ್ಪ, ಎಸ್.ಜಿ.ರಾಜು, ಪ್ರಹ್ಲಾದ್ ತೇಲ್ಕರ್, ರಾಜೇಶಾಚಾರ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap