ಜನಪದ ಸಂಭ್ರಮ ಸಾಂಸ್ಕೃತಿಕ” ಕಾರ್ಯಕ್ರಮ

0
12

ಕೊಡಿಗೇನಹಳ್ಳಿ

          ಹೋಬಳಿಯ ಚಿಕ್ಕಮಾಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾವೃಂದ ರಿ. ಅರಳಾಪುರ ರಾಮಚಂದ್ರಪ್ಪರವರ ನೇತೃತ್ವದಲ್ಲಿ ಗುರುವಾರದಂದು ಶಾಲೆಯಲ್ಲಿ ಮೂರಕ್ಕೂ ಹೆಚ್ಚು ತಂಡಗಳು ಆಗಮಿಸಿ “ಜನಪದ ಸಂಭ್ರಮ ಸಾಂಸ್ಕೃತಿಕ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

         ಈ ಕಾರ್ಯಕ್ರಮದಲ್ಲಿ ಪುರವಾರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೊಂಡವಾಡಿ ತಿಮ್ಮಯ್ಯರವರು ತಂಬೂರಿ ಮತ್ತು ತಾಳದ ಮುಖಾಂತರ ಹಾಡನ್ನು ಹಾಡಿ ಉದ್ಘಾಟನೆಯನ್ನು ಮಾಡಿ, ಈ ನಮ್ಮ ಕನ್ನಡ ನಾಡಿನ ಆಂಧ್ರದ ಗಡಿ ಭಾಗಗಳಲ್ಲಿ ಜನಪದವನ್ನ ಉಳಿಸಬೇಕು ಮತ್ತು ಬೆಳೆಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ ಮಾತನಾಡಿದರು.

          ನಾವು ನಮ್ಮ ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆಗೆ ಎಷ್ಟು ಹೊತ್ತು ಕೊಡುತ್ತೇವೋ ಅಷ್ಟೇ ನಮ್ಮ ಜನಪದ ಸಂಗೀತಕ್ಕೂ ನಾವು ಹೆಚ್ಚು ಒತ್ತು ಕೊಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಯುವ ಪೀಳಿಗೆಗೆ ಕಷ್ಟವಾಗಬಹುದು. ಏಕೆಂದರೆ ಇಂತಹ ಸುಂದರವಾದ ಹಾಡುಗಳು ಇಂತಹ ಕಲಾವಿದರು ಮುಂದೆ ಸಿಗುವುದು ಕಷ್ಟಕರ. ಆದ್ದರಿಂದ ಇಂತಹ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಕಾಪಾಡುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂದಿನಿಂದಲೇ ಜನಪದ ಹಾಡುಗಳನ್ನು ಬಾಯಿಪಾಠವನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದರು.

          ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಚೆನ್ನಿಗರಾಯಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೈಜ್ಞಾನಿಕ ಜ್ಞಾನದಲ್ಲಿ ಇಂದು ಮಾಧ್ಯಮಗಳಲ್ಲಿ ಹಾಗೂ ಇಂಟರ್ನೆಟ್ ಯುಗ ಬಂದು ಇಂದಿನ ವಿದ್ಯಾರ್ಥಿಗಳು ಮೊಬೈಲ್‍ಗಳಲ್ಲಿ ಮುಳುಗಿ ಹೋಗಿದ್ದಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಕಂಪ್ಯೂಟರ್‍ಗಳ ಮುಂದೆ ಕುಳಿತು ಕೆಲಸ ಮಾಡುವಂತಹ ಸಮಯದಲ್ಲಿ ಮನಸಿಗೆ ನೆಮ್ಮದಿಯೂ ಸಹ ಇಲ್ಲದಂತಾಗಿದೆ. ಆದ್ದರಿಂದ ಆ ನೆಮ್ಮದಿ ಬೇಕಾಗಿದ್ದಾರೆ ತಂಬೂರಿ, ತಾಳ, ಮೇಳ ಇತ್ಯಾದಿಗಳನ್ನು ಕಲಿತು ಇದರ ಜೊತೆಯಲ್ಲಿ ಬಹಳ ಸುಂದರವಾದ ಹಾಡುಗಳನ್ನು ಹಾಡಿ ನೋಡಿದರೆ ಅಥವಾ ಕೇಳಿದರೆ ಮನಸ್ಸಿಗೆ ಎಷ್ಟು ನೆಮ್ಮದಿ ಸಿಗುತ್ತದೆ ಹಾಗೂ ಯಾವ ಯೋಚನೆಗಳು ಸಹ ಬರುವುದಿಲ್ಲ. ಆದ್ದರಿಂದ ಕನಿಷ್ಠ ವಿದ್ಯಾರ್ಥಿಗಳು ಒಂದು ದಿನದಲ್ಲಿ ಮೂವತ್ತು ನಿಮಿಷಗಳಕಾಲ ಸಂಗೀತಕ್ಕೆ ಒತ್ತು ಕೊಡಬೇಕಾಗಿದೆ ಎಂದರು.

           ಕಲಾವಿದರಾದ ಅರಳಾಪುರ ರಾಮಚಂದ್ರಪ್ಪ ರವರು ಮಾತನಾಡಿ ಶ್ರೀ ಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾವೃಂದ ರಿ. ಈ ಸಂಸ್ಥೆಯನ್ನು 1992ರಲ್ಲಿ ಸ್ಥಾಪನೆ ಮಾಡಿಕೊಂಡು ಬಂದಿದ್ದು ಸುಮಾರು 25 ವರ್ಷಗಳಿಂದ ಶನಿಕತೆ, ಪೌರಾಣಿಕ ನಾಟಕ, ಸಾಮಾಜಿಕ ನಾಟಕ, ಜನಪದ, ಕನ್ನಡ ಗೀತೆ, ಜನಪದ ಗೀತೆ, ಕಾರ್ಯಕ್ರಮಗಳನ್ನು ಉತ್ತಮವಾಗಿ ಸರ್ಕಾರಿ ಶಾಲೆಗಳಲ್ಲಿ ಮಾಡಿಕೊಂಡು ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಗೆ ಶೋಭೆ ತರುವಂತವರು ನಮ್ಮ ನಾಡಿನ ಜನಪದರು. ಆಂಧ್ರದ ಗಡಿಭಾಗದಲ್ಲಿರುವ ನಮ್ಮ ಕನ್ನಡ ಕಲಾವಿದರನ್ನು ಇಂದಿನ ವಿದ್ಯಾರ್ಥಿಗಳು ಹಿಂದಿನ ಕಲಾವಿದರು ನಮ್ಮ ಕನ್ನಡ ನಾಡಿನ ಸಮಾಜಕೋಸ್ಕರ ದುಡಿಯುತ್ತಿದ್ದಾರೆ. ಕಲಾವಿದರು ಹಗಲು-ರಾತ್ರಿಯೆನ್ನದೆ ಹಾಡುಗಳನ್ನು ಹಾಡಿ ಎದೆ ಮುಟ್ಟುವಂತೆ ನಮ್ಮ ಕನ್ನಡ ಭಾಷೆಯನ್ನು ಹಲವಾರು ಕಡೆ ಹೆಚ್ಚಾಗಿ ಎಬ್ಬಿಸುತ್ತಿದ್ದಾರೆ. ಇದರಿಂದ ನೀವುಗಳು ನಮ್ಮ ರಾಜ್ಯಕ್ಕೋಸ್ಕರ ಏನಾದರೂ ಒಂದು ಉತ್ತಮ ಗುಣಮಟ್ಟದ ಸಾಧನೆ ಮಾಡಬೇಕಾಗಿದೆ. ಇಂತಹ ಸಾಧನೆಯನ್ನೂ ಮಾಡಬೇಕಾದರೆ ಮೊದಲು ವಿದ್ಯಾರ್ಥಿಗಳು ಶಿಸ್ತನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

          ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೊಂಡವಾಡಿ ತಿಮ್ಮಯ್ಯರವರ ಹಾಗೂ ಮುಖ್ಯ ಶಿಕ್ಷಕರಾದ ಚೆನ್ನಿಗರಾಯಪ್ಪ ಮತ್ತು ಕಲಾವಿದರಾದ ಅರಳಾಪುರ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಧಾ ಸಿದ್ದಾರೆಡ್ಡಿ, ಮಿಲ್ಟ್ರಿ ಶ್ರೀನಿವಾಸ್, ಸಿದ್ದಗಂಗಪ್ಪ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ನಾರಾಯಣಪ್ಪ, ಖಜಾಂಚಿ ರಾಮಕೃಷ್ಣ, ಗೋಪಾಲ್, ಸೋಬಾನೆ ತಂಡದ ಅಂಜಿನಮ್ಮ, ಕಲಾವಿದರಾದ ಮಂಜುನಾಥ್ ರವರ ತಂಡ ಹಾಗೂ ಶಾಲೆಯ ಶಿಕ್ಷಕರು ಮತ್ತು ಶ್ರೀ ಚಾಮುಂಡೇಶ್ವರಿ ಗ್ರಾಮೀಣ ಜನಪದ ಯುವ ಕಲಾ ವೃಂದ ವಿವಿಧ ರೀತಿಯ ಕಲಾವಿದರು ಮತ್ತು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷರಾದ ಯುವರಾಜ್, ಮುಂತಾದವರಿದ್ದರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here