ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ಉದ್ಟಾಟನೆ

0
17

ಶಿಗ್ಗಾವಿ :

          ಭಾವೈಕ್ಯತೆ ಹರಿಕಾರರಾದ ಸಂತ ಶಿಶುನಾಳ ಷರೀಪರು ಪ್ರಾರಂಭ ಮಾಡಿ ಮಕ್ಕಳಿಗೆ ಬೋಧನೆ ಮಾಡಿದ್ದರು ಎನ್ನಲಾದ ತಾಲೂಕಿನ ಬನ್ನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಇದೇ ಜ. 11 ರಂದು ಶುಕ್ರವಾರ ಶತಮಾನೊತ್ತರ ಬೆಳ್ಳಿ ಮಹೋತ್ಸವ ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ಉದ್ಟಾಟನೆ, ಗುರುವಂದನಾ ಕಾರ್ಯಕ್ರಮ ಹಾಗೂ ಸಾಂಸ್ಕತೀಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

          ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಘೊಷ್ಠಿಯಲ್ಲಿ ಮಾತನಾಡಿದ ಅವರು ಬನ್ನೂರ ಗ್ರಾಮ ಶಾಂತಿ, ಸೌಹಾರ್ದತೆಯಿಂದ ಕೂಡಿದ ಗ್ರಾಮವಾಗಿದ್ದು ಇಲ್ಲಿನ ಗ್ರಾಮಸ್ಥರ, ಯುವಕರ ಸಹಕಾರದಿಂದ ಎಲ್ಲ ರಂಗದಲ್ಲಿ ಪ್ರಗತಿಯತ್ತ ಸಾಗುತ್ತಿದೆ, ಈ ಗ್ರಾಮದಲ್ಲಿ 140 ವರ್ಷಗಳ ಇತಿಹಾಸ ಹೊಂದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು ಈ ಶಾಲೆಯ ಎಲ್ಲ ಹಳೆ ವಿದ್ಯಾರ್ಥಿಗಳು ಕೂಡಿ ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಶತಮಾನೊತ್ತರ ಬೆಳ್ಳಿ ಮಹೋತ್ಸವ ಎಂಬ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಆಧುನಿಕತೆ ತಿಳಿಸಿಕೊಡುವುದರ ಜೊತೆಗೆ ಶಾಲೆಗಳ ಕುಂದುಕೊರತೆಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಅಭಿವೃದ್ದಿಯನ್ನು ಪಡೆಸುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.

         ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಮಾತನಾಡಿ, ಶೈಕ್ಷಣೀಕವಾಗಿ ಮತ್ತು ಭೌತಿಕವಾಗಿ ಶಾಲೆಯನ್ನು ಅಭಿವೃದ್ದಿಪಡಿಸುವುದು ನಮ್ಮ ಸಂಘದ ಮುಖ್ಯ ಉದ್ದೇಶವಾಗಿದ್ದು, ಜೊತೆಯಲ್ಲಿ ದಾನಿಗಳಿಂದ ರೂ 5 ಲಕ್ಷಗಳನ್ನು ಸೇರಿಸಿ ಅದರಿಂದ ಬರತಕ್ಕ ಬಡ್ಡಿ ಹಣದಲ್ಲಿ ವಾರ್ಷಿಕ ಕ್ರೀಯಾ ಯೋಜನೆ ರೂಪಿಸಿ ಶಾಲೆಯ ಅಭಿವೃದ್ದಿ ಪಡಿಸಲಾಗುವುದು ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆದು ಎಲ್ಲ ಶಾಲೆಗಳು ಅಭಿವೃದ್ದಿಯಾಗಬೇಕು ಎಂದರು.

         ತಾಪಂ ಸದಸ್ಯ ಶ್ರೀಕಾಂತ ಪೂಜಾರ ಮಾತನಾಡಿ ಸರ್ಕಾರ ಹಳೆ ವಿದ್ಯಾರ್ಥಿಗಳ ಸಂಘದ ರಚನೆಗೆ ಆದೇಶನೆ ಮಾಡಿದ್ದು ಅದಕ್ಕೆ ಹೆಚ್ಚಿನ ಒತ್ತು ನೀಡಲಿಲ್ಲ, ಇಂದಿನ ಖಾಸಗಿ ಶಾಲೆಗಳ ದರ್ಭಾರಿನಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ಅವಶ್ಯಕತೆಯಿದ್ದು ಹಳೆ ವಿದ್ಯಾರ್ಥಿಗಳ ಸಂಘದ ರಚನೆ ತುಂಬಾ ಮಹತ್ವದ್ದಾಗಿದೆ, ಜ್ಞಾನಸಂಗಮ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯ ಈ ಸಂಘದ ಪ್ರೇರಣೆಯಿಂದ ಎಲ್ಲ ಗ್ರಾಮಗಳಲ್ಲಿ ಇಂತ ಸಂಘ ರಚನೆಯಾಗಿ ಸರ್ಕಾರಿ ಶಾಲೆಗಳ ಅಭಿವೃದ್ದಿ ಹೊಂದುವಂತಾಗಲಿ ಎಂದು ಆಶಿಸಿದರು..

          ಬನ್ನೂರ ಗ್ರಾ.ಪಂ ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ, ಮುಖ್ಯೋಪಾದ್ಯಾಯ ಬಿ ಶ್ರೀನಿವಾಸ, ವೀರನಗೌಡ ಹೊನ್ನಾಗೌಡ್ರ, ಫಕ್ಕಿರಗೌಡ ಹುಡೇದಗೌಡ್ರ, ಟಾಕನಗೌಡ ಪಾಟೀಲ್, ದೇವೆಂದ್ರಪ್ಪ ಬಡಿಗೇರ, ತವನ್ನಪ್ಪ ಜಿ ಹೊನ್ನಪ್ಪನವರ, ಡಾ||ಗುಣಪಾಲ ಲಂಗೋಟಿ, ಎ .ಬಿ ಪೋಲೀಸಗೌಡ್ರ, ಶಂಕರಗೌಡ ಪೋಲೀಸಗೌಡ್ರ, ನಜೀರಹ್ಮದ ಶೇತಸನದಿ, ವೀರಭದ್ರಪ್ಪ ಅಗಡಿ, ಅಭು ಕಲಾಂ, ಇಸೂಮಿಯಾನ, ಪ್ರಭುಗೌಡ ಹೊಸಗೌಡ್ರ, , ವೀರಗೌಡ ಹುಡೇದಗೌಡ್ರ, ಬ್ರಹ್ಮಾನಂದ ಬಡಿಗೇರ, ಕೆ.ಸಿ ಸಿದ್ದಣ್ಣನವರ, ವಿಶ್ವನಾಥ ಚಿಕ್ಕಮಠ, ಗೋಪಾಲ ಹೊನ್ನಾಗೌಡ್ರ. ಪ್ರಸನ್ನಕುಮಾರ ಪಾಟೀಲ್. ಅಜೀತ ಮಾಯಣ್ಣವರ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here