ಗಂಗಮ್ಮ ಬೊಮ್ಮಾಯಿ ಟ್ರಷ್ಟ ವತಿಯಿಂದ ಬೃಹತ್ ಉದ್ಯೋಗ ಮೇಳ

0
8

ಶಿಗಾವಿ

        ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವ ಅವಕಾಶ ಕಲ್ಪಿಸುವ ಸಲುವಾಗಿ ಅವರಿಗೆ ಎರಡು ದಿನ ತರಬೇತಿ ನೀಡಿ ಮೂರನೇ ದಿನ ವಿವಿದ ಕಂಪನಿಗಳಿಂದ ಉದ್ಯೋಗ ಒದಗಿಸಲು ಪಟ್ಟಣದಲ್ಲಿ ನಮ್ಮ ಟ್ರಷ್ಟ ವತಿಯಿಂದ ಭೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

       ಪಟ್ಟಣದ ಸವಣೂರ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಹಮ್ಮಿಕೊಂಡ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಈಗಾಗಲೇ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಇದೇ ನ. 14 ರ ಕೊನೆಯ ದಿನದ ಒಳಗಾಗಿ ತಮ್ಮ ಹೆಸರನ್ನು ನೊಂದಣಿ ಮಾಡಿಸಬೇಕು ಮತ್ತು ಮಿಸ್ಡ್ ಕಾಲ್ ಮಾಡುವ ಮೂಲಕ ಮೊ 9071870623 ಗೆ ನೊಂದಣಿ ಮಾಡಬಹುದು.

       ದಿ. 14 ಮತ್ತು 15 ರಂದು ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲಾಗುವದು ಮತ್ತು 16 ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಯೋಗ ಮೇಳದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ, ಯುವಕರಿಗೆ ಐಟಿ ಬಿಟಿ ಸೇರಲು, ಟೇಲರ್ ಸೆಕ್ಟರ, ಟೂಲ್ಸ್ ಸೆಂಡ್ ಇದರಲ್ಲಿ ಬರುತ್ತದೆ, ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಪ್ರಭಂಜನ, ವಿಆರ್‍ಎಲ್, ಹಿಮ್ಮತ್ ಸಿಂಕಾ, ಬಿಗ್ ಬಜಾರ, ರಿಲಾಯಿನ್ಸ್ ಹಾಗೂ ಯುರೇಖಾ ಫೋರ್ಸ್ ಸೇರಿದಂತೆ ಮುಂತಾದ ಕಂಪನಿಗಳು ಭಾಗವಹಿಸುತ್ತವೆ.

        ಎಸ್.ಎಸ್.ಎಲ್.ಸಿ ಯಿಂದ ಪದವಿ ವರೆಗಿನವರಿಗೆ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ, ನಾನ್ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ವಿದ್ಯಾಹರ್ತೆಗೆ ಅನುಕೂಲವಾದ ಉದ್ಯೋಗ ಹಾಗೂ ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವದು, ನಮ್ಮ ಟ್ರಷ್ಟ ಉದ್ಯೋಗಿಗಳಿಗೆ ಮತ್ತು ಕಂಪನಿಯವರಿಗೆ ವೇದಿಕೆ ಕಲ್ಪಿಸಿಕೊಡುವದು ಅರ್ಹತೆ ಆಧಾರದ ಮೇಲೆ ಉದ್ಯೋಗ ಪಡೆಯಬೇಕು ಇಲ್ಲಿ ಟ್ರಷ್ಟ ವಯಕ್ತಿಕವಾಗಿ ಯಾರ ಜವಾಬ್ದಾರಿಯನ್ನು ಸಂಸ್ಥೆ ತೆಗೆದುಕೊಳ್ಳುವದಿಲ್ಲ ಆದರಿಂದ ತಾಲೂಕಿನ ಯುವಕ ಯುವತಿಯರು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here