ಜಾತಿನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹ

0
12

ಪಾವಗಡ:

      ಪಾವಗಡ ತಾಲ್ಲೂಕ್ ಬೆಳ್ಳಿಬಟ್ಲು ಗ್ರಾಮದ ಶ್ರೀ ವಾಲ್ಮೀಕಿ ನಾಯಕ ಯುವಕ ಸಂಘ ಹಾಗೂ ವಾಲ್ಮೀಕಿ ಜಾಗೃತಿ ವೇಧಿಕೆ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮುದಾಯ ಕುರಿತು ಅವಹೇಳನಕಾರಿ ಹೇಳಿಕೆ ವಿಡಿಯೋಗಳನ್ನು ರವಾನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪಾವಗಡ-ಚಿತ್ರದುರ್ಗ ರಾಜ್ಯ ಹೆದ್ದಾರಿಯ ಬೆಳ್ಳಿಬಟ್ಲು ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿತು.

       ಕಳೆದ ಕೆಲವು ದಿನಗಳಿಂದ ಕಿಡಿಗೇಡಿಗಳು ವಾಲ್ಮೀಕಿ ನಾಯಕ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣವಾದ ವಾಟ್ಸ್‍ಪ್ ಮೂಲಕ ಹರಿಬಿಟ್ಟಿದ್ದು ಕೂಡಲೇ ಅಂತವರನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ತಾಲ್ಲೂಕು ವಾಲ್ಮೀಕಿ ಜಾಗೃತಿ ವೇಧಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ಆಗ್ರಹಿಸಿದ್ದಾರೆ.

       ಬೆಳ್ಳಿಬಟ್ಲು ಗ್ರಾಮದ ಶ್ರೀವಾಲ್ಮೀಕಿ ನಾಯಕ ಯುವಕ ಸಂಘದ ನಿರ್ಧೇಶಕ ಸತೀಶ್ ಕುಮಾರ್ ಮಾತನಾಡಿ ಕೊಪ್ಪಳ ಜಿಲ್ಲೆಯ ಒಬ್ಬ ಕುರಿಗಾಹಿಯೊಬ್ಬ ವಾಲ್ಮೀಕಿ ನಾಯಕ ಸಮುದಾಯದ ಕುರಿತು ನಿಂದನಾತ್ಮಕ ಹಾಗೂ ಜಾತಿ ವಿರುದ್ದ ಪ್ರಚೋಧನಾತ್ಮಕ ಅವ್ಯಾಚ್ಯಶಬ್ದಗಳನ್ನಾಡಿರುವ ವ್ಯಕ್ತಿಯನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಯಾವ ಕಾರಣಕ್ಕಾಗಿ ನಿಂದನೆ ಮಾತುಗಳನ್ನಾಡಿದ್ದಾನೆ ಎಂಬುದರ ಮಾಹಿತಿ ಪಡೆದು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

         ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಶಿವಪ್ಪ, ಕನ್ನಮೇಡಿ ಸುರೇಶ್, ಓಂಕಾರ್ ನಾಯಕ, ಬಲರಾಂ, ಸತ್ಯನಾರಾಯಣ, ಪಾಲಯ್ಯ,  ಪಾಳೇಗಾರ್, ರಘು, ಪ್ರತಾಪ್, ಹರೀಶ್, ಜನಾರ್ಧನ್, ಪ್ರಕಾಶ್, ಓಬಯ್ಯ, ಸುರೇಶ್, ವಸಂತ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here