ಜಾತ್ಯಾತೀಯ ಜಯಂತಿಯಾಗಿ ಮಾರ್ಪಾಡಾದ ಕನಕ ಜಯಂತಿ

ಹುಳಿಯಾರು

         ದಾರ್ಶನಿಕರ ಜಯಂತಿಗಳು ಜಾತಿಗೆ ಸೀಮಿತವಾಗಿ ಜಾತಿ ನಾಯಕರ ವೈಭವಿಕರಣದ ವೇದಿಕೆಯಾಗಿ ಮಾರ್ಪಡುತ್ತಿದೆ. ಜಾತಿ ವಿರುದ್ಧ ಹೋರಾಡಿದ ದಾರ್ಶನಿಕರು ಜಾತಿಯ ಸಂಕೋಲೆಗಳಲ್ಲಿ ಬಂಧಿಸುತ್ತಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ನಡೆದ ಕನಕ ಜಯಂತಿ ಜಾತ್ಯಾತೀಯ ಜಯಂತಿಯಾಗಿ ಪರಿವರ್ತಿಸಿ ಇತರರಿಗೆ ಮಾದರಿಯಾಗಿದ್ದಾರೆ.

        ಸಾಮಾನ್ಯವಾಗಿ ದಾರ್ಶನಿಕರ ಜಯಂತಿಯನ್ನು ಅವರವರ ಜಾತಿಯ ಸ್ವಾಮೀಜಿಗಳ, ನಾಯಕರ ಮೆರವಣಿಗೆ ಮಾಡುವುದು ಅಲಿಖಿತ ನಿಯಮವಾಗಿದೆ. ಆದರೆ ಯಳನಾಡು ಕುರುಬ ಸಮುದಾಯದವರು ತಮ್ಮ ಜಾತಿ ಸ್ವಾಮೀಜಿಗಳಾದ ಹೊಸದುರ್ಗದ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಕುಂಚಿಟಿಗರ ಮಠದ ಡಾ.ಶಾಂತವೀರ ಸ್ವಾಮೀಜಿಗಳನ್ನು ಊರಿನ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಜಾತಿ ಗೆರೆ ದಾಟಿ ಜಾತ್ಯಾತೀಯ ಮನೋಭಾವ ಪ್ರದರ್ಶಿಸಿದ್ದಾರೆ.

         ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಈ ಸಂದರ್ಭದಲ್ಲಿ ಮಾತನಾಡಿ ಕನಕದಾಸರು ಪ್ರತಿಪಾದಿಸಿದ ಜಾತಿಭೇದ, ವರ್ಣಭೇದ, ಲಿಂಗಭೇದ ಮತ್ತು ವರ್ಗ ಭೇದ ಇಲ್ಲದ ಸಮಾಜ. ಈ ನಿಟ್ಟಿನಲ್ಲಿ ಕನಕ ಜಯಂತಿಯನ್ನು ಉಪ್ಪಾರ ಹಾಗೂ ಕುಂಚಿಟಿಗ ಸ್ವಾಮೀಜಿಗಳನ್ನೂ ಆಹ್ವಾನಿಸಿ ಮಾಡುತ್ತಿರುವುದು ಅನುಕರಣೀಯ ಬೆಳವಣಿಗೆಯಾಗಿದ್ದು ಎಲ್ಲಾ ದಾರ್ಶನಿಕರ ಜಯಂತಿಗಳೂ ಹೀಗೆ ಜಾತ್ಯಾತೀಯ ಜಯಂತಿಗಳಾಗಿ ಮಾರ್ಪಡಿಸಲು ಮುಂದಾಗಬೇಕಿದೆ ಎಂದರು.

         ಕುಂಚಿಟಿಗರ ಮಠದ ಡಾ.ಶಾಂತವೀರ ಸ್ವಾಮೀಜಿ ಮಾತನಾಡಿ ಐದುನೂರು ವರ್ಷಗಳ ಹಿಂದೆಯೇ ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಎಂದು ಜಾತಿ ವ್ಯವಸ್ಥೆ ಪ್ರಶ್ನಿಸಿದ ಕನಕರ ಆಶಯದಂತೆ ಸಮಾನತೆಯ ಸಮಾಜ ಕಟ್ಟುವಲ್ಲಿ ಯಳನಾಡು ಕುರುಬ ಸಮುದಾಯದವರು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಹೀಗೆ ದಾರ್ಶನಿಕರ ವಾಣಿಯನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದರೆ ಎಲ್ಲರೂ ಮಾನವತವಾದಿಗಳಾಗಿ ಶಾಂತಿ, ನೆಮ್ಮದಿ, ಸುಖ ಸಮಾಜ ನಿರ್ಮಿಸಬಹುದು ಎಂದರು.

        ಉತ್ಸವಕ್ಕೆ ಕನಕದಾಸರು, ಸಂಗೊಳ್ಳಿರಾಯಣ್ಣ ವೇಷಧಾರಿಗಳು ಮೆರಗು ತಂದಿದ್ದರು. ಡೊಳ್ಳುಕುಣಿತ, ಗೊರವನಕುಣಿತ, ಲೀಂಗಬೀರರ ಕುಣಿತ, ಚಿಟ್ಟಿಮೇಳ, ಕಹಳೆ, ಮಂಗಳವಾದ್ಯ, ಕೋಲು ಮೇಳ ಹೀಗೆ ವಿವಿಧ ಕಲಾತಂಡಗಳು ಕಳೆ ತಂದಿದ್ದವು. ಒಟ್ಟಾರೆ ಮೂವರು ಸ್ವಾಮೀಜಿಗಳ ರಾಜಬೀದಿ ಉತ್ಸವವು ಜಾತ್ಯಾತೀತವಾಗಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap