ಕನ್ನಡ ಭಾಷೆಯು ಪ್ರತಿಯೊಬ್ಬ ಕನ್ನಡಿಗರ ಜೀವನಾಡಿಯಾಗಬೇಕು-ಶಾಸಕ

ಶಿರಾ:

       ಕನ್ನಡ ಭಾಷೆಯು ಕೇವಲ ಉಸಿರಷ್ಟೇ ಆಗಿರದೆ ಕನ್ನಡಿಗರ ಜೀವನಾಡಿಯೂ ಆದಾಗ ಮಾತ್ರಾ ತಾಯಿ ಭಾಷೆಗೆ ಶಕ್ತಿ ತುಂಬಲು ಸಾದ್ಯ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.

        ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡ ದ್ವಜ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಕನ್ನಡ ರಾಜ್ಯೋತ್ಸವ ಕೇವಲ ನಾಟಕೀಯವಾಗಿ ನಡೆಸುವ ಕಾರ್ಯಕ್ರಮವಾಗಬಾರದು. ಇದೊಂದು ತಾಯಿ ಭಾಷೆಯ ಹಾಗೂ ಕರುಳಿನ ಭಾಷೆಯ ಕೂಗಾಗಬೇಕು. ಈ ಮಣ್ಣಿನಲ್ಲಿ ಹುಟ್ಟಿದ ಯಾರೇ ಆಗಲಿ ನೆಲ, ಜಲ ಸಂಸ್ಕøತಿಯನ್ನು ಕಾಪಾಡುವ ಕೆಲಸವನ್ನು ನಿರಂತರವಾಗಿ ಕೈಗೊಳ್ಳುವ ಪಣ ತೊಡಬೇಕು ಎಂದರು.

      ರಾಜ್ಯದಲ್ಲಿ ಅನ್ಯ ಭಾಷಿಕರ ಆಕ್ರಮಣದಿಂದಾಗಿ ಗಡಿನಾಡ ಕನ್ನಡಿಗರಲ್ಲಿ ಭಾಷೆಯ ಹಿಡಿತವೇ ಮರೆಯಾಗುವಂತಾಗಿದೆ. ಗಡಿನಾಡುಗಳ ಗ್ರಾಮಗಳಲ್ಲಿ ಕನ್ನಡವನ್ನೇ ಮರೆತು ಅನ್ಯ ಭಾಷೆಗೆ ಜೋತು ಬೀಳುವ ಪರಿಸ್ಥಿತಿ ಬಂದಿದೆ ಎಂದು ಶಾಸಕರು ವಿಷಾಧಿಸಿದರು.ಆಂಗ್ಲ ಭಾಷೆಯನ್ನು ವಿರೋಧಿಸಬೇಕು ಅನ್ನುವ ವಾದ ನಮ್ಮದಲ್ಲ. ಈ ನಡುವೆ ಕನ್ನಡದ ಗಂಧ ಎಲ್ಲಿ ಕಮರುತ್ತದೆಯೋ ಅನ್ನುವ ಆತಂಕ ನಮ್ಮದು. ನಮ್ಮದೇ ನೆಲ, ನಮ್ಮದೆ ಜಲವನ್ನು ಸೇವಿಸಿ ಬದುಕುವ ಮಂದಿ ಕನ್ನಡವನ್ನೂ ಮಾತನಾಡಲು ಹಿಂಜರಿಯುತ್ತಿರುವಾಗ ಕನ್ನಡಿಗರು ಬಲಿಷ್ಠಗೊಳ್ಳದೇ ಇದ್ದಲ್ಲಿ ಕನ್ನಡ ಶಾಲೆಗಳೂ ಮಾಯವಾಗಿ ಬಿಡುತ್ತವೆ ಎಂದು ಶಾಸಕ ಸತ್ಯನಾರಾಯಣ್ ಎಚ್ಚರಿಸಿದರು.

       ತಾಲ್ಲೂಕು ದಂಡಾಧಿಕಾರಿ ಸಿದ್ಧಲಿಂಗರೆಡ್ಡಿ ರಾಷ್ಟ್ರದ್ವಜಾರೋಹಣ ಮಾಡಿ ಮಾತನಾಡಿ ಇಡೀ ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕೀರ್ತಿ ಕರುನಾಡಿನದ್ದು. ನಾಡಿನ ಉಳಿವಿಗಾಗಿ ಅನೇಕ ಮಂದಿ ತಮ್ಮ ಪ್ರಾಣವನ್ನೇ ತೆತ್ತ ನಿಧರ್ಶನಗಳು ನಮ್ಮ ನಾಡಿನಲ್ಲಿವೆ ಎಂದರು.

      ಕನ್ನಡದ ಕಂಪು ಕೇವಲ ನವಂಬರ್ ತಿಂಗಳಲ್ಲಿ ಮಾತ್ರಾ ಸೂಸಿದರೆ ಸಾಲದು ಇಡೀ ವರ್ಷವೇ ಕನ್ನಡದ ಕಂಪು ಹೊರ ಹೊಮ್ಮುವ ಇಚ್ಚಾಶಕ್ತಿಯನ್ನು ಎಲ್ಲರೂ ತೊಡಬೇಕು. 8ನೇ ಶತಮಾನದಿಂದ 21ನೇ ಶತಮಾನದವರೆಗೂ ಕನ್ನಡವನ್ನು ಉಳಿಸಿಕೊಳ್ಳಲು ತವಕಪಡುವಂತಹ ಸ್ಥಿತಿ ನಿರ್ಮಾಣಗೊಂಡಿರುವುದು ವಿಷಾಧನೀಯ ಎಂದು ತಾಲ್ಲೂಕು ದಂಡಾಧಿಕಾರಿ ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಶ್ರೀಮತಿ ಹಂಸವೇಣಿ ಶ್ರೀನಿವಾಸ್ ಮಾತನಾಡಿ ಕೈಕಟ್ಟಿ ಕುಳಿತರೆ ಕನ್ನಡದ ಉಳಿವು ಸಾದ್ಯವಿಲ್ಲ. ನಮ್ಮ ಮಕ್ಕಳಲ್ಲಿ ಮೊದಲು ಭಾಷಾಭಿಮಾನ ಮೂಡಿಸಬೇಕು ಎಂದರು.

       ನಗರಸಭೆಯ ಅಧ್ಯಕ್ಷ ಅಮಾನುಲ್ಲಾಖಾನ್ ಮಾತನಾಡಿ ನಾಡಿನಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದು ಅಂತಹವರನ್ನು ಗುರ್ತಿಸಿ ಪ್ರೋತ್ಸಾಯಿಸಬೇಕು. ನಮ್ಮ ಸಂಸ್ಕøತಿ, ಭಾಷೆಯ ಬಗ್ಗೆಯೂ ಗೌರವ ಮೂಡಿಸಬೇಕು ಎಂದರು.

      ಕಾರ್ಯಕ್ರಮಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಅಭಿನಂಧಿಸಲಾಯಿತಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನೂ ಅಭಿನಂಧಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

        ಡಿ.ಎಸ್.ಪಿ. ವೆಂಕಟೇಶನಾಯ್ಡು, ಜಿ.ಪಂ. ಸದಸ್ಯೆ ಶ್ರೀಮತಿ ಗಿರಿಜಮ್ಮ ಶ್ರೀರಂಗಪ್ಪ ಯಾದವ್, ಕರವೇ ಅಧ್ಯಕ್ಷ ಆಂಜಿನಪ್ಪ, ನಗರಸಭೆಯ ಆಯುಕ್ತ ಗಂಗಣ್ಣ, ತಾ||ವೈದ್ಯಾಧಿಕಾರಿ ಡಾ||ಅಫ್ಜಲ್, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಷಣ್ಮುಖಪ್ಪ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ರವಿಚಂದ್ರ, ಬಿ.ಇ.ಓ. ವಿಜಯ್‍ಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸಿದ್ದೇಶ್ವರ, ನಗರಸಭಾ ಸದಸ್ಯರಾದ ಅಹಮದಿ, ಅಬ್ದುಲ್‍ಖಾದಿರ್, ಝಾಫರ್, ಇಕ್ಬಾಲ್, ಕರವೇ ಸಂಘಟನೆಯ ಬಾಬು, ದಾದು, ಲತೀಫ್‍ಖಾನ್, ಕಂದಾಯ ನಿರೀಕ್ಷಕ ಮಂಜುನಾಥ್, ಶಿವಕುಮಾರ್, ಗ್ರಾಮಾಂತರ ಸಿ.ಪಿ.ಐ. ಶಿವಕುಮಾರ್, ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಯ್ಯ, ಪಿ.ಎಸ್.ಐ. ಚೇತನ್‍ಕುಮಾರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap