ಆಟೋ ಚಾಲಕರ ನಾಡು-ನುಡಿ ಸೇವೆ ಶ್ಲಾಘನೀಯ : ಸಿಪಿಐ ಅಂಬರೀಷ್

0
29

ಮಧುಗಿರಿ

      ಕನ್ನಡ ನಾಡು ನುಡಿ, ನೆಲ, ಜಲ ವಿಷಯ ಬಂದಾಗ ನಾವೆಲ್ಲರು ರಕ್ಷಣೆಗೆ ಕಂಕಣ ಬದ್ಧರಾಗಿರಬೇಕು ಎಂದು ಸಿಪಿಐ ಎಂ.ಅಂಬರೀಷ್ ತಿಳಿಸಿದರು. 

          ಪಟ್ಟಣದ ಟಿ.ವಿ.ವಿ ಸರ್ಕಲ್‍ನ ಶ್ರೀರಾಘವೇಂದ್ರ ಆಟೋ ಯುವಕರ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಂಕರ್‍ನಾಗ್ ಜಯಂತಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಆಟೋ ಚಾಲಕರು ಕನ್ನಡದ ಅಭಿವೃದ್ದಿಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ. ಕನ್ನಡದ ನೆಲ-ಜಲ-ಭಾಷೆ-ಭಾವನೆಗಳಿಗೆ ದಕ್ಕೆ ಉಂಟಾದಾಗ ಸಿಡಿದೆದ್ದು ನಿಲ್ಲುವ ಅವರ ಸೇವೆ ಶ್ಲಾಘನೀಯ. ಆಟೋ ಚಾಲಕರು ಶಿಸ್ತು ಸಂಯಮದಿಂದ ವರ್ತಿಸಿ, ನಾಗರಿಕರಿಗೆ ಮಾದರಿ ಯಾಗಿರಬೇಕು. ಅಲ್ಲದೆ ಸಮವಸ್ತ್ರ ಧರಿಸಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ಕಿವಿಮಾತು ಹೇಳಿದರು.

         ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ ಆಟೋ ಚಾಲಕರು, ದಂಡಿನ ಮಾರಮ್ಮನ ದೇವಾಲಯದ ಬಳಿ ಜಮಾಯಿಸಿ ಹರ್ಷೋದ್ಗಾರಗಳಿಂದ ಕನ್ನಡ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಜಿ.ಆರ್. ಡೆವಲಪರ್ಸ್ ಮಾಲೀಕ ರವಿಕಾಂತ್, ಗೌಡ, ಕಾಂತಣ್ಣ, ರಮೇಶ್, ನವೀನ, ಸೇವಾಲಾಲ್, ಶಿವು, ವಜೀರ್, ರಾಮಣ್ಣ ಮತ್ತಿತರ ಆಟೋ ಚಾಲಕರು ಇದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here