ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ರೀಡಾಕೂಟ

ದಾವಣಗೆರೆ:

       ಮಹಾನಗರ ಪಾಲಿಕೆ, ಕನ್ನಡಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿರುವ ಕ್ರೀಡಾಕೂಟದ ಅಂಗವಾಗಿ ಮಂಗಳವಾರ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾವಳಿ ಜರುಗಿದವು.
ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಮೇಯರ್ ಶೋಭಾ ಪಲ್ಲಾಗಟ್ಟೆ ಹಾಗೂ ಆಯುಕ್ತ ಮಂಜುನಾಥ್ ಬಳ್ಳಾರಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

      ಉಪಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಎಂ. ಹಾಲೇಜ್, ಕುಂದುವಾಡ ತಿಪ್ಪಣ್ಣ, ಅಬ್ದುಲ್ ಲತೀಫ್, ಬಿ.ಕೆ. ಲಿಂಗಾರಾಜ್, ಚಂದ್ರಶೇಖರ್, ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಜಯಪ್ರಕಾಶ್ ಗೌಡ, ಕೆ.ಎಸ್. ಗೊಂವಿಂದರಾಜ್, ಕೆ.ಜಿ. ಶಿವಕುಮಾರ್, ನಾಗೇಂದ್ರ ಬಂಡೀಕರ್, ಎಂ.ಎಸ್. ರಾಮೇಗೌಡ, ಹುಚ್ಚವ್ವನಹಳ್ಳಿ ಮಂಜುನಾಥ, ಸೋಮಶೇಖರ್, ಪತ್ರಕರ್ತರಾದ ವೀರಪ್ಪ ಬಾವಿ, ನಾಗರಾಜ ಬಡದಾಳ್, ವರದರಾಜ್, ರಾಮ್ ಪ್ರಸಾದ್, ಮಧು, ಪುನೀತ್, ಜಯಂತ್, ವಿಶ್ವನಾಥ, ವಿಜಯ್, ವಿವೇಕ್ ಬದ್ದಿ, ರಾಮು ಮತ್ತಿತರರು ಹಾಜರಿದ್ದರು.

ನೌಕರರ ತಂಡಕ್ಕೆ ಜಯ:

        ಕ್ರಿಕೆಟ್ ಪಂದ್ಯಾವಳಿಯ ಫೈನಲ್‍ನಲ್ಲಿ ಕನ್ನಡಪರ ಹೋರಾಟಗಾರರ ತಂಡವನ್ನು ಮಹಾನಗರ ಪಾಲಿಕೆ ನೌಕರರ ಸಂಘ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಕನ್ನಡಪರ ಹೋರಾಟಗಾರರ ತಂಡ 28 ಓಟ(ರನ್)ಗಳನ್ನು ಗಳಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ಪಾಲಿಕೆ ನೌಕರರ ತಂಡ 29 ಓಟ(ರನ್)ಗಳನ್ನು ಗಳಿಸುವ ಮೂಲಕ ವಿಜಯದ ನಗೆ ಬೀರಿತು.

        ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ, ಪತ್ರಕರ್ತರ ತಂಡ, ಗುತ್ತಿಗೆದಾರರ ತಂಡ, ಪಾಲಿಕೆ ಅಧಿಕಾರಿಗಳ ತಂಡ, ಪಾಲಿಕೆ ನೌಕರರ ತಂಡ, ಪಾಲಿಕೆ ಸದಸ್ಯರ ಎ ಮತ್ತು ಬಿ ತಂಡ, ಕನ್ನಡಪರ ಹೋರಾಟಗಾರರ ತಂಡಗಳು ಭಾಗವಹಿಸಿದ್ದವು.

ಗುತ್ತಿಗೆದಾರರ ತಂಡಕ್ಕೆ ಗೆಲುವು:

         ಕಬ್ಬಡಿ ಪಂದ್ಯಾವಳಿಯಲ್ಲಿ ಕನ್ನಡಪರ ಹೋರಾಟಗಾರರ ತಂಡವನ್ನು ಪಾಲಿಕೆ ಗುತ್ತಿಗೆದಾರರ ತಂಡ ಮಣಿಸಿತು. ನ.21ರಂದು ಅಥ್ಲೇಟಿಕ್ ಕ್ರೀಡೆಗಳು ನಡೆಯಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap