ಗಂಗಾಸೆಂಟ್ರಲ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0
9

ಹಿರಿಯೂರು : 

         ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ ಜಾಗತಿಕ ಮಟ್ಟದಲ್ಲಿ ಬೆಳೆಯುವ ಶಕ್ತಿ ಇದ್ದರೂ ಕನ್ನಡಿಗರ ನಿರಾಸಕ್ತಿಯಿಂದ ಅದು ಸಾಧ್ಯವಾಗಿಲ್ಲ ಕನ್ನಡ ಭಾಷೆಯು ಮೌಲ್ಯಯುತ ಕೃತಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಕೇವಲ ಉದ್ಯೋಗದ ದೃಷ್ಠಿಕೋನದಲ್ಲಿ ಒಂದು ಭಾಷೆಯನ್ನು ನೋಡುವುದು ಸರಿಯಲ್ಲ ಎಂದು ಕನ್ನಡ ಪ್ರಾಧ್ಯಾಪಕರಾದ ಜಗನ್ನಾಥ ತಿಳಿಸಿದರು.

       ನಗರದ ಗಂಗಾಸೆಂಟ್ರಲ್ ಸಿ.ಬಿ.ಎಸ್.ಸಿ. ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

        ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕತಿಕ ತಂಡಗಳಿಂದ ವೀರಗಾಸೆಕುಣಿತ, ಕುಂಭಮೇಳ ಸೇರಿದಂತೆ ವಿದ್ಯಾರ್ಥಿಗಳಿಗಾಗಿ ಹಾಡು, ನೃತ್ಯ, ಕಥೆ, ಲೇಖನ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಿ ಕನ್ನಡನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕನ್ನಡಭುವನೇಶ್ವರಿ ದೇವಿಯ ಮೆರವಣಿಗೆ ನಡೆಸಲಾಯಿತು.

       ಕಾರ್ಯಕ್ರಮದಲ್ಲಿ ಶಾಲಾಮುಖ್ಯಸ್ಥರಾದ ಶ್ರೀಯುತ ಓಬಯ್ಯನವರು ಶ್ರೀಮತಿ ಸಿದ್ದಗಂಗಮ್ಮ ಆಡಳಿತಾಧಿಕಾರಿಗಳಾದ ಪ್ರಹ್ಲಾದ್‍ರಾವ್ ಪ್ರಾಚಾರದಯರಾದ ಶ್ರೀಮತಿ ಶೈಲಜಾ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here