ಎಲ್ಲಾದರು ಇರು ಎಂತಾದರು ನೀ ಕನ್ನಡಿಗನಾಗಿರು : ಪೂವಿತಾ

0
11

ತಿಪಟೂರು :

     ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಅನ್ಯಭಾಷೆಗಳನ್ನು ಪೀತಿಸಿ ಆದರೆ ಕನ್ನಡಭಾಷೆಯನ್ನು ಆರಾಧಿಸಿ ಎಂದು ಉಪವಿಬಾಗಾಧಿಕಾರಿ ಪೂವಿತಾ ಕರೆನೀಡಿದರು.

         ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ 63 ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರೀಯಧ್ವಜವನ್ನು ಧಜ್ವಾರೋಹಣಮಾಡಿ ಮಾತನಾಡಿದ ಅವರು ಕನ್ನಡ ನಾಡಿಗೆ ಪ್ರಪಂಚದಲ್ಲಿ ವಿಶೇಷವಾದ ಸ್ಥಾನವಿದೆ. ನಮ್ಮ ದೇಶದ ಸ್ವತಂತ್ಯ್ರಾನಂತರ ಭಾಷಾವಾರು ಪ್ರಾಂತ್ಯವಿಂಡನೆಯಾದಾಗ ವಿಶಾಲ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟ ಮೈಸೂರು ಸಂಸ್ಥಾನವು ಉದಯವಾಯಿತು. ಇದನ್ನು ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು.

        ನಮ್ಮ ರಾಜ್ಯವನ್ನು ಕದಂಬ, ಚಾಲುಕ್ಯ, ವಿಜಯನಗರ, ಗಂಗರು, ಹೊಯ್ಸಳರು ಆಳ್ವಿಕೆಮಾಡಿದ ನಾಡು. ನಮ್ಮ ನಾಡಿನ ಕವಿಪುಂಗವರಾದ ರನ್ನ, ಜನ್ನ, ಪಂಪ, ಪೊನ್ನ, ಕುಮಾರವ್ಯಾಸ, ಲಕ್ಷ್ಮೀಶ, ಗೋವಿಂದಪೈ, ಕುವೆಂಪು, ಬೇಂದ್ರೆ ಇನ್ನು ಮುಂತಾದವರು ನಮ್ಮಹೆಮ್ಮೆ.

       ರವಿಕೀರ್ತಿಯ ಐಹೊಳೆಶಾಸನದಲ್ಲಿ ನಮ್ಮ ನಾಡನನ್ನು ಕಾವೇರಿಯಿಂದ ಗೋದಾವರಿರೆಗೆ ಹಬ್ಬಿರುವುದೇ ಕನ್ನಡನಾಡು ಎಂದು ಕರೆದಿದ್ದು ನಮ್ಮ ರಾಜ್ಯ ಎಷ್ಟು ವಿಶಾಲವಾಗಿತ್ತು ಎಂದು ಗೊತ್ತಾಗುತ್ತದೆ. ಕನ್ನಡ ನಾಡಿನ್ನು ಗಂಧದಬೀಡು, ಚಿನ್ನದನಾಡು ಎಂದು ಕರೆಯುತ್ತಾರೆ. ಈ ಮಣ್ಣಿನಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು. ನಾವು ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಬೇರೆ ಬಾಷೆಗಳು ನಮ್ಮ ವ್ಯವಹಾರಕ್ಕೆ ಅನಿವಾರ್ಯ ಆದರೆ ನಮ್ಮ ಕನ್ನಡ ತನವನ್ನು ಬಿಡಬಾರದು ಕನ್ನಡಿಗರಾದ ನಾವು ಔದಾರ್ಯವನ್ನು ತೋರೊಣ ಆದರೆ ಮೊದಲು ನಮ್ಮ ಭಾಷೆಯನ್ನು ಆರಾಧಿಸೋಣ ಎಂದರು.

       ಕನ್ನಡ ಧ್ವಜವನ್ನು ಆರೋಹಣಮಾಡಿ ಮಾತನಾಡಿದ ಶಾಸಕ ನಾಗೇಶ್ ಮಾತನಾಡುತ್ತಾ ದೇಶದ ಏಳಿಗೆಗೆ ಕನ್ನಡಿಗರು ನೀಡಿರುವ ಕೊಡುಗೆಯು ಅವಿಸ್ಮರಣೀಯವಾದದ್ದು, ನಮ್ಮ ನಾಡಿನ ಇಂಜಿನಿಯರ್‍ಗಳು, ವಿಜ್ಞಾನಿಗಳು, ಸೇನಾಧಿಕಾರಿಗಳು, ವೈದ್ಯರುಗಳು ಇನ್ನು ಮುಂತಾದಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇನ್ನು ನಾವು ಕೃಷಿಯಲ್ಲಿ ಹಿಂದಿದ್ದು, ಕೈಗಾರಿಕೆಯಲ್ಲಿ ಮುಂದಿದ್ದೇವೆ. ನಮ್ಮ ನಾಡಿನ ಬಗ್ಗೆ ತಿಳಿಯಬೇಕಾದರೆ ನಾವು ಯಾವುದೇ ಇತಿಹಾಸವನ್ನು ಓದಬೇಕಾಗಿಲ್ಲ ಕುವೆಂಪುರವರು ಬರೆದಿರುವ ನಮ್ಮ ನಾಡಗೀತೆಯನ್ನು ಅರ್ಥೈಸಿಕೊಂಡರೆ ನಮ್ಮ ನಾಡಿನ ಸಂಪತ್ತು ನಮ್ಮ ಕಣ್ಣಮುಂದೆ ಬರುತ್ತದೆ.

       ಕರ್ನಾಟಕ ಏಕೀಕರಣ ಚಲುವಳಿಯಲ್ಲಿ ನಮ್ಮ ಕವಿಗಳಾದ ಹುಲಿಗೊಳನಾರಾಯಣ ರಾಯರು ಬರೆದಿರುವ ಉದಯವಾಗಲಿ ನಮ್ಮ ಕನ್ನಡನಾಡು ಎಂಬಂತೆ ಇಂದು ನಾವು ನಮ್ಮ ಸಂಪತ್ತನ್ನು ಸೂಕ್ತವಾಗಿ ಬಳಸಿಕೊಂಡು ಮತ್ತೆ ನವ ಮತ್ತು ಸಂಮೃದ್ಧ ಕರ್ನಾಟಕವನ್ನು ನಿರ್ಮಿಸೋಣ ಎಂದು ಕರೆನೀಡಿದರು.

      ಇದೇ ಸಂದರ್ಭದಲ್ಲಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, 10ನೇ ತರಗತಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125/125 ಅಂಕಗಳಿಸಿ 35 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

       ವಿಶೇಷ ಗಮನ ಸೆಳದ ಅಕ್ಕಮಹಾದೇವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಆಯೋಜಿಸಿದ್ದ ಛದ್ಮವೇಷ ಪ್ರದರ್ಶನದಲ್ಲಿ ಮುಸ್ಲಿಂ ಬಾಲಕಿ ಸಫಾ ಅಕ್ಕಮಹದೇವಿ ವೇಷವು ಎಲ್ಲರಗಮನಸೆಳದೆ ಅಕ್ಕಮಹಾದೇವಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಸಭಿಕರು ಮುಗಿಬಿದ್ದರು

         ತಾಲ್ಲೂಕು ರಾಜ್ಯೋತ್ಸವ ಪಶಸ್ತಿಯಲ್ಲಿ ಕೆಲವು ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಬಿ.ಟಿ.ಕುಮಾರ್ ಆರೋಪಿಸಿದ್ದಾರೆ.

          ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಮಂಜುನಾಥ್, ಸಿ.ಟಿ.ಪಿ.ಓ ಓಂಕಾರಪ್ಪ, ಡಿ.ವೈ.ಎಸ್.ಪಿ ವೇಣುಗೋಪಾಲ್, ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್, ಉಪಾಧ್ಯಕ್ಷರಾದ ಜೆಹರಾಜಬೀನ್, ಕ.ಸಾ.ಪ ಅಧ್ಯಕ್ಷ ಬಾಲಕೃಷ್ಣ, ರಕ್ಷಣಾವೇದಿಕೆಯ ಕುಮಾರ್‍ಯಾದವ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here