ಕಾರ್ಮಿಕ ಮುಷ್ಕರ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

0
54

ಬೆಂಗಳೂರು

       ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.

         ಎಐಟಿಯುಸಿ,ಸಿಐಟಿಯು, ಐಎನ್‍ಟಿಯುಸಿ ಎಲ್‍ಫಿಎಫ್ ಸೇರಿದಂತೆ ಬಹುತೇಕ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಬಸ್‍ಗಳು, ಟ್ಯಾಕ್ಸಿ, ಆಟೋ,ಕ್ಯಾಬ್‍ಗಳ ಸಂಚಾರ ಬಹುತೇಕ ವಾಹನಗಳ ಸ್ಥಗಿತಗೊಂಡು ರಾಷ್ಟ್ರಾದ್ಯಂತ ಜನಜೀವನ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆಯಿದೆ.

         ಕಾರ್ಮಿಕರ ಮುಷ್ಕರಕ್ಕೆ ಬ್ಯಾಂಕ್‍ಗಳ ನೌಕರರ ಒಕ್ಕೂಟವೂ ಬೆಂಬಲ ವ್ಯಕ್ತಪಡಿಸಿರುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಲಿದೆ.ಅಂಗನವಾಡಿ ನೌಕರರು ಮುಷ್ಕರದಲ್ಲಿ ಭಾಗಿಯಾಗುವುದಾಗಿ ಘೋಷಿಸಿರುವುದರಿಂದ ಅಂಗನವಾಡಿಗಳ ಬಂದ್, ಗಾರ್ಮೆಂಟ್ಸ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಪರದಾಟುವ ಸ್ಥಿತಿ ನಿರ್ಮಾಣವಾಗಲಿದೆ.

           ಬಂದ್ ನಡೆಯುವ ಎರಡು ದಿನ ನಿತ್ಯದ ಅಗತ್ಯ ವಸ್ತುಗಳು ತುರ್ತು ಸೇವೆಗಳಿಗೆ ವಿನಾಯ್ತಿ ನೀಡಲಾಗಿದ್ದು, ಆಸ್ಪತ್ರೆಗಳು, ಔಷಧಿ ಅಂಗಡಿ ಆಂಬ್ಯುಲೆನ್ಸ್, ಹಾಲು, ತರಕಾರಿ ಮಾರಾಟ ಮತ್ತಿತರ ಸೇವೆಗಳಲ್ಲಿ ಯಾವುದೇ ತೊಂದರೆ ಎದುರಾಗುವುದು ಸಾಧ್ಯವಿಲ್ಲ.
ಸರ್ಕಾರಿ ನೌಕರರು ಚಿತ್ರೋದ್ಯಮ, ಬೀದಿ ಬದಿ ವ್ಯಾಪಾರಿಗಳು, ಎಪಿಎಂಸಿ ಕಾರ್ಮಿಕ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿವೆ ಬಂದ್‍ನ್ನು ಶಾಂತಯುತವಾಗಿ ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರದಲ್ಲಿ ನಡೆಸಲಾಗುವುದು ನಗರದಲ್ಲಿ ಸಾವಿರಾರು ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರುಗಳು ತಿಳಿಸಿದ್ದಾರೆ.

ಬಿಗಿ ಬಂದೋಬಸ್ಥ್

          ಈ ನಡುವೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಷ್ಕರ ಶಾಂತಯುತವಾಗಿ ನಡೆಯಲು ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ರಾಜ್ಯ ಮೀಸಲು ಪಡೆ ಕೈಗಾರಿಕಾ ಭದ್ರತಾ ಪಡೆ.ಸಶಸ್ತ್ರ ಮೀಸಲು ಪಡೆ,ಜಿಲ್ಲಾ ಮೀಸಲು ಪಡೆ ಸೇರಿದಂತೆ ಕಾನೂನು ಸುವ್ಯವಸ್ಥೆಯ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

          ಕಾರ್ಮಿಕ ಸಂಘಟನೆಗಳು ಪ್ರಭಲವಾಗಿರುವ ಪ್ರದೇಶಗಳು ಆಯಕಟ್ಟಿನ ಸ್ಥಳಗಳು ನಗರ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗುವುದು ಬಸ್ ಸಂಚಾರಕ್ಕೆ ಅಗತ್ಯಬಿದ್ದರೆ ಪೊಲೀಸ್ ಭದ್ರತೆಯನ್ನು ನೀಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್‍ಪಂತ್ ತಿಳಿಸಿದ್ದಾರೆ.

            ಈ ನಡುವೆ ರಾಷ್ಟ್ರವ್ಯಾಪಿ ನಡೆಯಲಿರುವ ಮುಷ್ಕರ ರಾಜ್ಯದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಸದ್ಯಕ್ಕೆ ಹೇಳುವುದು ಸಾಧ್ಯವಿಲ್ಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಅಡ್ಡಿಯಾಗದಿದ್ದರೆ ಬಂದ್‍ನಿಂದ ತೊಂದರೆ ಕಡಿಮೆ ಯಾಗಲಿದೆ.ಅಂಗಡಿ ಮುಗ್ಗಟ್ಟುಗಳು ವಾಣಿಜ್ಯ ವಹಿವಾಟುಗಳು ಯತಾಸ್ಥಿತಿಯಲ್ಲಿ ವಹಿವಾಟು ನಡೆಯುವ ಸಾಧ್ಯತೆಯಿದೆ

ಬಸ್ ಸಂಚಾರ ಸ್ಥಗಿತ

          ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಖಾಸಗಿ ಬಸ್‍ಗಳ ಓಡಾಟ ಸ್ಥಗಿತವಾಗಲಿದೆ. ಇದರ ಜತೆಗೆ ಆಟೋ ಟ್ಯಾಕ್ಸಿ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ. ಅಂಗಡಿ ಮುಂಗ್ಗಟ್ಟು, ಹೋಟೆಲ್‍ಗಳು ಎಂದಿನಂತೆ ತೆರೆಯಲಿದ್ದು, ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಸಹ ಮಾಮೂಲಿನಂತೆ ಇರಲಿದೆ. ಉಳಿದಂತೆ ಬಸ್ ಟ್ಯಾಕ್ಸಿ, ಆಟೋ ಸೇವೆಗಳು ಬಂದ್ ಆಗುವ ಸಾಧ್ಯತೆಗಳಿವೆ.

         ಸರ್ಕಾರಿ ಶಾಲೆಗಳಿಗೆ ಮುಷ್ಕರದ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ.ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಜಿಲ್ಲೆಯಲ್ಲಿ ನಡೆಯುವ ಮುಷ್ಕರದ ಪರಿಸ್ಥಿತಿ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಶಾಲೆಗಳಿಗೆ ರಜೆ

            ಮುಷ್ಕರದಿಂದಾಗಿ ಎರಡು ದಿನಗಳ ಕಾಲ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ತಿಳಸಿದ್ದಾರೆ.

         ರಾಜ್ಯದ ಎಲ್ಲಾ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ ಗಲಾಟೆ, ಗಲಭೆಗಳು ನಡೆಯುವ ಸಾಧ್ಯತೆಯಿರು ವುದರಿಂದ ಮುಂಜಾಗೃತ ಕ್ರಮವಾಗಿ ಶಾಲಾ ಮಕ್ಕಳಿಗೆ ತೊಂದರೆ ಯಾಗಬಾರದೆಂದು ರಜೆ ಘೋಷಿಸಲಾಗಿದೆ ಎಂದಿದ್ದಾರೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಘೋಷಿಸಲು ತಿರ್ಮಾನಿಸಿದ್ದೇವೆ. ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಸದಸ್ಯರು ಸೇರಿ ಈ ನಿರ್ಧಾರ ವನ್ನು ತೆಗೆದುಕೊಂಡಿದ್ದೇವೆ. ನಾಳೆ, ನಾಡಿದ್ದು ಎರಡು ದಿನಗಳು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ತುಮಕೂರಿನ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೇಯಾಗಿದ್ದು ನಾಳೆಯ ಬದಲಾಗಿ ಶನಿವಾರ ಪೂರ್ತಿ ದಿನ ತರಗತಿ ಮಾಡಲು ಸೂಚನೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here