ದೀಪಾವಳಿ ಹಬ್ಬದಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ

ಹಾವೇರಿ :

       ದೀಪಾವಳಿ ಹಬ್ಬ ಬಂತು ಅಂದರೆ ಸಾಕು ಜಿಲ್ಲೆಯ ರೈತರಿಗೆ ಸಖತ್ ಖುಷಿಯೋ ಖುಷಿ. ದೀಪಾವಳಿ ಹಬ್ಬದಿಂದ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ಶುರುವಾಗುತ್ತವೆ. ಇಕ್ಕಟ್ಟಾದ ರಸ್ತೆಯಲ್ಲಿ ಜನರ ನಡುವೆ ಯಾರ ಕೈಗೂ ಸಿಗದಂತೆ ಹೋರಿಗಳು ಮಿಂಚಿನ ಓಟ ಕಿಳ್ಳುತ್ತೇವೆ. ಭರ್ಜರಿಯಾಗಿ ಓಡುವ ಹೋರಿಗಳನ್ನು ನೋಡೋದೆ ಸಖತ್ ಮಜಾ ಇರುತ್ತದೆ. ಚಿತ್ರನಟರು, ಚಿತ್ರದ ಹೆಸರು ಹೀಗೆ ವಿವಿಧ ಹೆಸರುಗಳನ್ನು ಸಂಘಟಕರು ಕೂಗಿ ಹೇಳುತ್ತಿದ್ದಂತೆ ಹೋರಿಗಳು ಧೂಳೆಬ್ಬಿಸಿಕೊಂಡು ಓಡುತ್ತವೆ ಇದನ್ನು ನೋಡುವ ಅಭಿಮಾನಿಗಳಿಗೆ ರೋಮಾಂಚನವಾಗುತ್ತದೆ.

        ಇದೇಲ್ಲಾ ಕಂಡು ಬಂದಿರುವುದು ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದೀಪಾವಳಿ ಹಬ್ಬದ ವೀರಭದ್ರೇಶ್ವರ ಜಾತ್ರೆಯ ವಿಶೇಷವಾಗಿ ಪಾಡ್ಯದ ದಿನ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ. ಅಲಂಕಾರಗೊಂಡಿರುವ ಹೋರಿಗಳ ಕೊರಳಲ್ಲಿ ಕಾಣುವ ಕೊಬ್ಬರಿ ಹಾರ. ಹೋರಿಗಳಿಗೆ ಹಾಕಿರುವ ಬಲೂನ್. ಅವುಗಳ ಬಳಿ ರಾರಾಜಿಸುವ ಚಿತ್ರನಟರು, ಚಲನಚಿತ್ರದ ಹೆಸರುಗಳು. ಜನರ ನಡುವೆ ಓಡುತ್ತಿರುವ ಹೋರಿಗಳು. ನಗರದಲ್ಲಿ ನಡೆಯುವ ಕೊಬ್ಬರಿ ಹೋರಿ ಸ್ಪರ್ಧೆ ನಂತರದ ದಿನಗಳಲ್ಲಿ ಈಡಿ ಜಿಲ್ಲಾಯಾದ್ಯಂತ ವ್ಯಾಪಿಸುತ್ತದೆ. ತಾಲೂಕಿನ ಬಹುತೇಕ ಗ್ರಾಮಗಳ ಹೋರಿಗಳು ಸ್ಪರ್ಧೆಗೆ ಬಂದಿರುತ್ತವೆ. ಹೋರಿಗಳ ಕೊರಳಲ್ಲಿ ಕೊಬ್ಬರಿ ಹಾರ, ಹಣೆಗೆ ಬಲೂನ್, ಹೆಗಲ ಮೇಲೆ ಜೂಲಾ ಹೀಗೆ ತರಹೇವಾರಿ ವಸ್ತುಗಳನ್ನು ಹಾಕಿ ಹೋರಿಗಳನ್ನು ಅಲಂಕಾರ ಮಾಡಲಾಗಿರುತ್ತದೆ. ಈ ದಿನದ ಆರಂಭಿಕ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಐನೂರಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ಸ್ಪರ್ಧೆ ನಡೆಯುತ್ತದೆ. ಸುಮಾರು ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆ ನಡೆದುಕೊಂಡು ಬಂದಿದೆ.

         ಎರಡು ಬದಿಯಲ್ಲಿ ಜನರು ನಿಂತುಕೊಂಡಿರುತ್ತಿದ್ದು, ಸಂಘಟಕರು ಆಯಾ ಹೋರಿಗಳ ಹೆಸರು ಕೂಗಿ ಕರೆಯುತ್ತಿದ್ದಂತೆ ಹೋರಿ ಮಾಲೀಕ ಜನರ ನಡುವೆ ಹೋರಿಯನ್ನು ಓಡಿಸುತ್ತಾನೆ. ಸಂಘಟಕರು ನಿಗದಿಪಡಿಸಿದ ಸಮಯದಲ್ಲಿ ಹೋರಿ ಯಾರ ಕೈಗೂ ಸಿಗದಂತೆ ನಿಗದಿಪಡಿಸಿದ ದೂರಕ್ಕೆ ಓಡಬೇಕು. ಹೋರಿಯನ್ನು ಓಡಿಸುತ್ತಿದ್ದಂತೆ ಹೋರಿ ಹಿಡಿಯುವವರು ಹೋರಿ ಹಿಂದೆಯೇ ಓಟ ಕಿಳ್ಳುತ್ತಾರೆ. ಯಾರ ಕೈಗೂ ಸಿಗದಂತೆ ಓಡುವ ಹೋರಿಗೆ ಬಹುಮಾನ ನೀಡುವಂತೆ ಹೋರಿ ಹಿಡಿದವರಿಗೂ ಬಹುಮಾನ ನೀಡಲಾಗುತ್ತದೆ. ಹೀಗಾಗಿ ಭರ್ಜರಿ ಓಟ ಓಡುವ ಹೋರಿಗಳನ್ನು ಹೊಡಿಯಲು ಪ್ರಾಣದ ಹಂಗು ತೊರೆದು ಹೋರಿ ಹಿಡಿಯೋರು ಓಡುತ್ತಾರೆ. ಹೋರಿ ಹಿಡಿಯಉವ ವೇಳೆ ಕೆಲವೊಂದು ಅನಾಹುತಗಳು ಸಂಭವಿಸುತ್ತವೆ. ಆದರೂ ಜನರು ಹೋರಿಗಳ ಓಟ ನೋಡಿ ಸಖತ್ ಎಂಜಾಯ್ ಮಾಡುತ್ತಾರೆ. ಇನ್ನು ಹೋರಿ ಮಾಲೀಕರು ಹುರುಳಿ, ಹಿಂಡಿ, ದಾನಿ, ಮೊಟ್ಟೆ ಸೇರಿದಂತೆ ವಿವಿಧ ಧಾನ್ಯಗಳನ್ನು ತಿನ್ನಿಸಿ ಹೋರಿಯನ್ನು ಭರ್ಜರಿಯಾಗಿ ತಯಾರು ಮಾಡಿರುತ್ತಾರೆ.

       ಹಿಂಗಾರು ಭಿತ್ತನೆ ಮುಗಿದ ನಂತರ ಶುರುವಾಗುವ ಹೋರಿ ಸ್ಪರ್ಧೆಗೆ ಹೋರಿಗಳನ್ನು ಸಜ್ಜುಗೋಳಿಸುತ್ತಾರೆ. ಕೆಲವರು ಹೋರಿಗಳಿಗೆ ತಮ್ಮಿಷ್ಟದ ಚಿತ್ರನಟರ ಹೆಸರು ಇಟ್ಟಿದ್ದರೆ ಕೆಲವರು ತಮ್ಮಿಷ್ಟದ ಚಿತ್ರನಟರ ಹೆಸರು ಇಟ್ಟಿರುತ್ತಾರೆ. ಕೆಲವರು ತಮ್ಮಿಷ್ಟದ ದೇವರು ಹೆಸರುಗಳನ್ನು ಇಟ್ಟಿರುತ್ತಾರೆ. ಸಂಘಟಕರು ಹೆಸರುಗಳನ್ನು ಕೂಗಿ ಕರೆಯುತ್ತಿದ್ದಂತೆ ಹೋರಿಗಳು ಮಿಂಚಿನ ಓಟ ಕಿಳ್ಳುತ್ತೇವೆ.

       ದಿನದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಯಾವುದೇ ರೀತಿಯ ಬಹುಮಾನ ನೀಡೋದಿಲ್ಲ. ಇಂದಿನಿಂದ ಅಧಿಕೃತವಾಗಿ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ಶುರುವಾಗುತ್ತದೆ. ಕೆಲವು ಕಡೆಗಳಲ್ಲಿ ಬೈಕ್, ಬಂಗಾರದ ಚೈನು, ಉಂಗುರುಗಳನ್ನು ಬಹುಮಾನವಾಗಿ ಇಟ್ರೆ, ಕೆಲವೆಡೆ ಟಿವಿ, ಪ್ರಿಡ್ಜ್ ಸೇರಿದಂತೆ ವಿವಿಧ ವಸ್ತುಗಳನ್ನು ಪ್ರಶಸ್ತಿಗೆ ಇಡತ್ತಾರೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಹೋರಿಗಳು ಯಾರ ಕೈಗೂ ಸಿಗದಂತೆ ಧೂಳೆಬ್ಬಿಸಿ ಓಡಿ ಪ್ರಶಸ್ತಿ ಬಾಚಿಕೊಳ್ಳುತ್ತೇವೆ. ಹೋರಿ ಹಿಡಿಯೋರ ಕೈಗೆ ಸಿಕ್ಕ ಹೋರಿಯನ್ನು ಸ್ಪರ್ಧೆಯಿಂದ ಹೊರಗೆ ಕಳಿಸಲಾಗುತ್ತದೆ.

       ಜಿಲ್ಲೆಯ ವಿವಿಧ ಹಳ್ಳಿ ಪಟ್ಟಣಗಳಲ್ಲಿ ದೀಪಾವಳಿಯ ಹಬ್ಬದ ನಿಮಿತ್ಯ ಸಾಂಕೇತಿಕವಾಗಿ ಹೋರಿ ಓಡಿಸಲಾಯಿತು. ಹೀಗೆ ಜನರಿಗೆ ಸಖತ್ ಮನರಂಜನೆ ಹಬ್ಬವಾಗಿ ಈ ಭಾಗದಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ನಡೆಸಿಕೊಂಡು ಬರಲಾಗುತ್ತಿದೆ. ಕೆಲವೊಂದು ಬಾರಿ ಡೇಂಜರ್ ಅನ್ನಿಸುವ ಕೊಬ್ಬರಿ ಹೋರಿ ಸ್ಪರ್ಧೆಯನ್ನು ರೈತರು ಮನರಂಜನೆ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಯುವಕರು ತಮ್ಮ ಮೆಚ್ಚಿನ ಹೋರಿ ಸಕತ್ತ್ ಓಡಬೇಕು ಎನ್ನುವ ಅವರ ಆಸಕ್ತಿ ಹೇಳತ್ತಿರದು. ಜಿಲ್ಲೆಯಲ್ಲಿ ಹೋರಿ ಓಡಿಸುವ ಸ್ಪರ್ಧೆ ಬಲು ಜೋರಾಗಿ ನಡೆಯುತ್ತಿವೆ ಎನ್ನಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap