ಕೊರಟಗೆರೆ ವಿಧಾನಸಭಾ ಕ್ಷೇತ್ರದ 242ಮತಗಟ್ಟಿ ಕೇಂದ್ರಕ್ಕೆ 1164ಜನ ಚುನಾವಣಾ ಸಿಬ್ಬಂಧಿಗಳ ನೇಮಕ

0
2

ಕೊರಟಗೆರೆ

       ತುಮಕೂರು ಲೋಕಸಭಾ ಚುನಾವಣೆಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 242ಮತಗಟ್ಟಿಗಳಿಗೆ ವಿವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಚುನಾವಣಾ ಅಧಿಕಾರಿಗಳ ತಂಡ ತಮಗೆ ನೇಮಿಸಿದ ಬಸ್ಸಿನ ಮೂಲಕ ಸಾಗಾಣಿಕೆ ಮಾಡುವ ಮೂಲಕ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿದ್ದಾರೆ.

         ಕೊರಟಗೆರೆ ವಿಧಾನಸಭಾ ಕ್ಷೇತ್ರದ 242ಮತಗಟ್ಟಿ ಕೇಂದ್ರಕ್ಕೆ ತಲಾ ನಾಲ್ಕು ಜನರಂತೆ ಮತಗಟ್ಟಿ ಅಧಿಕಾರಿ-1, ಸಹಾಯಕ ಮತಗಟ್ಟಿ ಅಧಿಕಾರಿ-1, ಮತಗಟ್ಟಿ ಸಿಬ್ಬಂದಿ-2ರಂತೆ ಚುನಾವಣೆಗಾಗಿ ಅಧಿಕಾರಿಗಳ ತಂಡವನ್ನು ನೇಮಕ ಮಾಡಲಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಪಿಆರ್‍ಓ-291, ಎಪಿಆರ್‍ಓ-291 ಮತ್ತು ಪಿಓ-582ಜನ ಒಟ್ಟು 1164ಜನ ಸಿಬ್ಬಂಧಿಗಳನ್ನು ನೇಮಕ ಮಾಡಲಾಗಿದೆ.

       ಕೊರಟಗೆರೆ ವಿಧಾನಸಭಾ ಕ್ಷೇತ್ರದ ಆರು ಹೋಬಳಿ ಸೇರಿ 36ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರು-1,00,529, ಪುರುಷರು-1,01,141 ಮತ್ತು ಇತರೇ-21ಸೇರಿ ಒಟ್ಟು 2,01,691ಜನ ಮತದಾರರು ಇದ್ದಾರೆ. 2019-20ನೇ ಸಾಲಿನ ತುಮಕೂರು ಲೋಕಸಭಾ ಚುನಾವಣೆಗೆ 242ಮತಗಟ್ಟಿ ಕೇಂದ್ರದ ವಿವಿಧ ಕಡೆಗಳಲ್ಲಿ ಏಕ ಕಾಲದಲ್ಲಿ ಮತದಾನ ಮಾಡಲಿದ್ದಾರೆ

       ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಆವರಣದಿಂದ 242ಮತಗಟ್ಟಿ ಕೇಂದ್ರಗಳಿಗೆ ಒಟ್ಟು 1164ಚುನಾವಣಾ ಅಧಿಕಾರಿಗಳ ತಂಡ ಗ್ರಾಮೀಣ ಪ್ರದೇಶದಲ್ಲಿ 40ಬಸ್ಸು ಮತ್ತು ಪಟ್ಟಣದಲ್ಲಿ 10ಜೀಪಿನ ಮೂಲಕ ಪೋಲಿಸ್ ಇಲಾಖೆಯ ಬೀಗಿ ಭದ್ರತೆಯಲ್ಲಿ ವಿವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಚುನಾವಣಾ ಅಧಿಕಾರಿಗಳ ತಂಡ ಸಾಗಾಣಿಕೆ ಮಾಡಿದ್ದಾರೆ.

      ತುಮಕೂರು ಕ್ಷೇತ್ರದ ಲೋಕಸಭಾ ಚುನಾವಣೆ ಏ.18ರ ಗುರುವಾರ ಮುಂಜಾನೆ 7ಗಂಟೆಯಿಂದ ಸಂಜೆ 6ಗಂಟೆವರೇಗೆ ಆಯಾ ಮತಗಟ್ಟಿಯಲ್ಲಿ ಮತದಾನ ನಡೆಯಲಿದೆ. ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಕೊರಟಗೆರೆ ತಹಶೀಲ್ದಾರ್ ಶಿವರಾಜು ಮತ್ತು ಸಹಾಯಕ ಚುನಾವಣಾ ಅಧಿಕಾರಿ ಕಾಂತರಾಜು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here