ಕೆಎಸ್‍ಎಟಿ ಪೀಠ ಇಂದು ಉದ್ಘಾಟನೆ ಮಾಡಿದ ಕೃಷ್ಣಭೈರೆಗೌಡ

ಬೆಳಗಾವಿ

        ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆ ಈಡೇರಿದ್ದು, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ-ಕೆಎಸ್‍ಎಟಿ ಪೀಠ ಇಂದು ಉದ್ಘಾಟನೆಗೊಂಡಿದೆ.

        ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಭ್ಯೆರೆಗೌಡ ಮತ್ತು ನ್ಯಾಯಮೂರ್ತಿ ಕೆ. ಭಕ್ತವತ್ಸಲ ದೀಪ ಬೆಳಗುವ ಮೂಲಕ ನ್ಯಾಯಪೀಠವನ್ನು ಶುಭಾರಂಭಗೊಳಿಸಿದರು.

        ಉದ್ಘಾಟನೆಯ ಬಳಿಕ ಮಾತನಾಡಿದ ಸಚಿವ ಕೃಷ್ಣ ಭ್ಯೆರೆಗೌಡ, ಕಲಬುರಗಿಯಲ್ಲಿ ಮತ್ತೊಂದು ಆಡಳಿತಾತ್ಮಕ ನ್ಯಾಯಾಧಿಕರಣ ಪೀಠ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

      ಇಂದು ಲೋಕಾರ್ಪಣೆಗೊಂಡಿರುವ ನ್ಯಾಯಪೀಠ ಉತ್ತರ ಕರ್ನಾಟಕದ ಜನತೆಗೆ ಪ್ರಯೋಜನವಾಗಲಿದೆ. ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಎಡತಾಕುವುದು ತಪ್ಪಲಿದೆ ಎಂದರು.

      ನ್ಯಾಯಪೀಠಕ್ಕಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಹಾಗೂ ವಕೀಲ ಅನಿಲ್ ಬೆನಕೆ, ನ್ಯಾಯಮಂಡಳಿ ಸ್ಥಾಪಿಸಿದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಅಂತೆಯೇ ನ್ಯಾಯಪೀಠಕ್ಕಾಗಿ ಪ್ರತಿಭಟಿಸುತ್ತಿದ್ದವರ ಮೇಲಿನ ಎಲ್ಲ ಪ್ರಕರಣಗಳನ್ನೂ ಹಿಂಪಡೆಯುವಂತೆ ಮನವಿ ಮಾಡಿದರು.ಅಧ್ಯಕ್ಷೀಯ ಭಾಷಣ ಮಾಡಿದ ನ್ಯಾ. ಡಾ. ಕೆ.ಎ. ಭಕ್ತವತ್ಸಲ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಆಡಳಿತಾತ್ಮಕ ನ್ಯಾಯಾಧಿಕರಣಗಳಿಗೆ ಕಟ್ಟಡ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap