ಕುಡಿಯುವ ನೀರಿನ ಸೌಲಭ್ಯೆ ಕಲ್ಪಿಸುವಂತೆ ಒತ್ತಾಯಿಸಿ ಹಿರೇಮಲ್ಲನ ಹೋಳೆ ಗೋಲ್ಲರ ಹಟ್ಟಿ ಗ್ರಾಮಸ್ಥರಿಂದ ಪ್ರತಿಭಟನೆ

0
5

ಜಗಳೂರು :

      ಕುಡಿಯುವ ನೀರಿನ ಸೌಲಭ್ಯೆ ಕಲ್ಪಿಸುವಂತೆ ಒತ್ತಾಯಿಸಿ ಹಿರೇಮಲ್ಲನ ಹೋಳೆ ಗೋಲ್ಲರ ಹಟ್ಟಿ ಗ್ರಾಮಸ್ಥರು ಮಂಗಳವಾರ ಮಧ್ಯಾಹ್ನ ಪಟ್ಟಣದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಆಗಮಿಸಿದ ಮಹಿಳೆಯರು ಖಾಲಿಕೊಡಪಾನಗಳನ್ನು ಇಲಾಖೆಯ ಮುಂಭಾಗದಲ್ಲಿರಿಸಿ ಪ್ರತಿಭಟನೆ ನಡೆಸಿದರು.

       ಗ್ರಾಮದ ಮುಖಂಡ ಮಹಾಲಿಂಗಪ್ಪ ಮಾತನಾಡಿ ಹಿರೇಮಲ್ಲನ ಹೊಳೆ ಗೋಲ್ಲರ ಹಟ್ಟಿ ಗ್ರಾಮದಲ್ಲಿ 300ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದ್ದು , ಕಳೆದ 4 ತಿಂಗಳುಗಳಿಂದ ನೀರಿನ ಸಮಸ್ಯೆ ವಿಕೋಪಕ್ಕೆ ಹೋಗಿದೆ.

       ಇರುವ ಬೋರ್ ವೆಲ್ ನಲ್ಲಿ ಅಲ್ಪ ಸ್ವಲ್ಪ ಬಾರುತ್ತಿದ್ದು ಈ ನೀರನ್ನು ಹಿಡಿಯಲು ಜಾಗರಣೆ ಮಾಡ ಬೇಕಾಗಿದೆ . ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರು ಕೆಸರು ಮಿಶ್ರಿತವಾಗಿದೆ ಇವು ಬಳಸಲು ಸಹ ಬಾರುವುದಿಲ್ಲ ಇರುವ ಶುದ್ದ ಕುಡಿಯುವ ನೀರಿನ ಘಟಕ ನೀರಿಲ್ಲದೇ ಕಾರ್ಯನಿರ್ವಹಿಸುತ್ತಿಲ್ಲ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಕ್ಕ ಪಕ್ಕದ ಗ್ರಾಮಗಳಿಗೆ ತರಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ .

       ಇಷ್ಟಲ್ಲ ಸಮಸ್ಯೆಗಳಿದ್ದರು ಸಹ ನಮ್ಮ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಕಲ್ಲೇಶಪ್ಪ ಗ್ರಾಮದ ಕಡೆ ತಲೆಹಾಕಿಲ್ಲ ಮತ್ತು ಇವರು ಗ್ರಾಮಸ್ಥರ ಕೈಗೆ ಸಿಗುತ್ತಿಲ.್ಲ ನೀರಿನ ಸಮಸ್ಯೆ ಯನ್ನು ಬಗೆಹರಿಸುವಂತೆ ಇಂಜಿನಿಯರ್ ಗೆ ಹಲವಾರು ಬರೀ ಮನವಿಸಲ್ಲಿಸಿದರು ಸಹ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

        ಪ್ರತಿಭಟನ ಸ್ಥಳಕ್ಕೆ ಎಇಇ ಬಾಲಸ್ವಾಮಿ ಆಗಮಿಸಿ ಸದರಿ ಗ್ರಾಮದಲ್ಲಿರುವ ಬೋರ್ ವೆಲ್ ಗೆ ಮೋಟಾರ್ ವ್ಯೆವಸ್ಥೆ ಮಾಡಲಾಗುವುದು ಮತ್ತು ಮಾತ್ತೊಂದು ಬೋರ್ ವೆಲ್ ನ್ನು ಇನ್ನೆರೆಡು ದಿನಗಳಲ್ಲಿ ಕೊರೆಸಲು ವ್ಯೆವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು

       ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರೇಮಕ್ಕ , ಶರಣಮ್ಮ, ಸುವರ್ಣಮ್ಮ , ಧನ್ಯಕುಮಾರ್, ಕುಮಾರ್ , ರವಿಚಂದ್ರ, ಶೇಖರಪ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here