ಕುಮಾರಸ್ವಾಮಿ “ಕೈ” ಬಿಟ್ಟು ಕಮಲ ಹಿಡಿದರೆ ಸೂಕ್ತ : ರಾಮದಾಸ್ ಅಠಾವಳೆ

0
28

ಬೆಂಗಳೂರು

        ಮೈತ್ರಿ ಸರ್ಕರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸಖ್ಯ ಬಿಟ್ಟು ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟ ಸೇರಬೇಕು ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಆರ್.ಪಿ.ಐ(ಎ) ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ

        ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ, ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ, ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡುವುದು ಸೂಕ್ತ ಎಂದು ಹೇಳಿದರು.

       ಪ್ರಧಾನಿ ನರೇಂದ್ರ ಮೋದಿ ವಿಕಾಸ ಪುರಷ. ಹತ್ತು ಹಲವು ಯೋಜನೆಗಳು ಜನರಿಗಾಗಿ ತಂದಿದ್ದಾರೆ.ಹೀಗಾಗಿ, ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ, ಬಿಜೆಪಿ ಆಡಳಿತ ಬರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

        ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ ಕ್ಷೇತ್ರ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ್ತೆಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಾಗುವುದು ಎಂದರು.

       ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎರಡು ಲೋಕಸಭಾ ಕ್ಷೇತ್ರದಲ್ಲಿ ಆರ್ ಪಿಐ ಪಕ್ಷಕ್ಕೆ ಅವಕಾಶ ನೀಡುವಂತೆ ಬಿಜೆಪಿಗೆ ಕೇಳಲಾಗಿತ್ತು. ಆದರೆ, ಅವರು ನೀಡಿಲ್ಲ.ಹೀಗಾಗಿಯೇ, ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ.ಇನ್ನೂ, ಕೆಲ ಕ್ಷೇತ್ರಗಳ ಬಿಜೆಪಿ ಪರ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು.

        ರಾಹುಲ್ ಗಾಂಧೀಜಿ ಅವರು, ಪ್ರಧಾನ ಮಂತ್ರಿ ಆಗುವ ಕನಸು ಕಾಣಬಾರದು.ಏಕೆಂದರೆ, ನರೇಂದ್ರ ಮೋದಿ ಇದುವರೆಗೂ ಅವರು ಪ್ರಧಾನಿ ಆಗಲು ಸಾಧ್ಯವಾಗಿಲ್ಲ. ಇನ್ನೂ, ಮಹಾಘಟಬಂದನ್ ಎನ್ನುವುದು ಬರೀ ಬಾಯಿ ಮಾತು.ಇದರಲ್ಲಿ ಎಲ್ಲರೂ, ಪ್ರಧಾನ ಮಂತ್ರಿ ಆಗುವ ಕನಸು ಕಾಣುತ್ತಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಂತೆ ಸುಲಭವಾಗಿ ಆಗುವ ಉದಾಹರಣೆ ಇಟ್ಟುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಆರ್ ಪಿಐ ರಾಜ್ಯಾಧ್ಯಕ್ಷ ಎ.ವೆಂಕಟಸ್ವಾಮೀ, ಬಿಜೆಪಿ ವಕ್ತಾರ ಆನಂದ್, ವೈ.ಎಸ್.ದೇವುರ್ ಸೇರಿದಂತೆ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here