ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಭ್ರೂಣ ಹತ್ಯೆ ನಿಯಂತ್ರಣ ಎಲ್ಲರ ಹೊಣೆ;ಡಾ.ಸುಧಾ

ಚಿತ್ರದುರ್ಗ;

      ಹೆಣ್ಣು ಎಂದರೆ ಸಾಮಾಜಿಕ, ಅರ್ಥಿಕ ಮತ್ತು ಮಾನಸಿಕವಾಗಿ ಹೊರೆ ಎನ್ನುವ ಭಾವನೆ ಎಲ್ಲರ ಮನದಲ್ಲಿದೆ ಇದನ್ನು ನಿವಾರಣೆ ಮಾಡುವುದರ ಮೂಲಕ ಹೆಣ್ಣು ಎಂದರೆ ಸಮಾಜದ ಕಣ್ಣು ಎಂದು ತೋರಿಸಿಕೊಡುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂದು ಕುಟುಂಬ ಕಲ್ಯಾಣಾಧಿಕಾರಿ ಡಾ:ಸುಧಾ ಅಭಿಪ್ರಾಯಪಟ್ಟಿದ್ದಾರೆ.

     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

       ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವುದು ಬರಿ ಸರ್ಕಾರ, ಇಲಾಖೆ, ಕಾನೂನು ಮಾತ್ರವೇ ಅಲ್ಲ ಇದು ಸಮಾಜದಲ್ಲಿನ ಎಲ್ಲರ ಹೊಣೆಗಾರಿಕೆಯಾಗಿದೆ . ಹೆಣ್ಣು ಎಂದರೆ ಸಂಸಾರದ ಹೊರೆಯನ್ನು ಹೊರುವುದರ ಮೂಲಕ ಜವಾಬ್ದಾರಿಯುತವಾಗಿ ನಡೆಯುವ ಜೀವವಾಗಿದೆ, ನಮ್ಮಲ್ಲಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಅರಿವು ಇದಿದ್ದರೆ ಕಾನೂನು ಜಾರಿ ಮಾಡುವ ಅಗತ್ಯ ಇರಲಿಲ್ಲ 1994 ರಲ್ಲಿ ಕಾಯ್ದೆಯಾದರೂ ಸಹಾ ಇದು ಜಾರಿಯಾಗಿದ್ದ 1996ರಲ್ಲಿ 22 ವರ್ಷವಾಗಿದೆ ಎಂದು ಸುಧಾ ತಿಳಿಸಿದರು.

     ಹೆಣ್ಣು ಎಂದರೆ ಸೆರಗಿನಲ್ಲಿ ಕೆಂಡ ಇದ್ದಂತೆ ಎಂಭ ಭಾವನೆ ಎಲ್ಲಾ ಪೋಷಕರಲ್ಲಿಯೂ ಇದೆ, ಕೆಲವೊಂದು ಹೆಣ್ಣು ಮಕ್ಕಳು ಇನ್ನೂ ತಿಳುವಳಿಕೆ ಬಾರದ ಸ್ಥಿತಿಯಲ್ಲಿ ಪ್ರೀತಿ, ಪ್ರೇಮ ಎಂಬ ಆಸೆಗೆ ಬಲಿಯಾಗಿ ಮನೆಯನ್ನು ತೋರೆಯುತ್ತಾರೆ, ಈ ಸಮಯದಲ್ಲಿ ಪೋಷಕರಿಗೆ ನೋವಾಗಲಿದೆ ಈ ರೀತಿಯಾಗದಂತೆ ಎಲ್ಲಾ ಹೆಣ್ಣು ಮಕ್ಕಳು ಜವಾಬ್ದಾರಿಯತವಾಗಿ ಇರಬೇಕಿದೆ ಯಾವುದೇ ಕಾರಣದಿಂದಲೂ ಪೋಷಕರು ತಲೆ ತಗ್ಗಿಸುವ ಕೆಲಸವನ್ನು ಮಾಡದೇ ಸಮಾಜದಲ್ಲಿ ತಲೆಯನ್ನು ಎತ್ತಿ ನಡೆಯುವಂತ ಕಾರ್ಯವನ್ನು ಮಾಡುವಂತೆ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.

       ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಕಾನೂನು ಜಾರಿ ಮಾಡಲಾಗಿದೆ. ಇದಕ್ಕಿಂತ ಮಿಗಿಲಾಗಿ ಬದುಕುವ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಸಮಾಜದಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದನ್ನು ತಿಳಿಯಬೇಕಿದೆ ಎಂದ ಅವರು ಬಡತನ, ಜವಾಬ್ದಾರಿಯನ್ನು ಕಳೆದುಕೊಳ್ಳುವುದಕ್ಕೆ ಉತ್ತಮ ಸಂಬಂಧ ಎಂದೂ ಹೇಳಿ ಮಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲು ಪೋಷಕರು ಮುಂದಾಗುತ್ತಾರೆ ಇಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸುವಂತೆ ಮನವಿ ಮಾಡಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಿ.ಎನ್, ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಶಿವುಯಾದವ್ ಡಾ, ವಿಜಯ, ಭಾಗವಹಿಸಿದ್ದರು.

      ಮೇಘನ ಪ್ರಾರ್ಥಿಸಿದರೆ, ಸಿಚಿತ್ರ ಮತ್ತು ತಂಡ ನಾಡಗೀತೆ ಗಾಯನ ಮಾಡಿತು. ಮಲ್ಲಿಕಾರ್ಜನ್ ಸ್ವಾಗತಿಸಿದರೆ ಶ್ರೀಮತಿ ಶಕುಂತಲಾ ವಂದಿಸಿದರೆ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap