ದುಬಾರಿ ಕಾರು ಕಳ್ಳರ ಬಂಧನ

0
16

ಬೆಂಗಳೂರು

       ದುಬಾರಿ ಕಾರುಗಳನ್ನು ತಿಂಗಳಿಗೆ ಬಾಡಿಗೆಗೆ ಪಡೆದು ಬಾಡಿಗೆಯ ಹಣ ನೀಡದೆ ಸುಮಾರು 31 ಕಾರುಗಳನ್ನು ದೋಚಿದ್ದ ನಾಲ್ವರು ಖತರ್ನಾಕ್ ಕಳ್ಳರು ಸೇರಿ 9 ಮಂದಿಯನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಪಶ್ಚಿಮ ವಿಭಾಗದ ಪೊಲೀಸರು 2 ಕೋಟಿ 4 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

         ಜ್ಞಾನಭಾರತಿ ಪೊಲೀಸರು ಸಾರ್ವಜನಿಕರಿಂದ ಬಾಡಿಗೆ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಮಂಡ್ಯದ ಗಾಣದಾಳು ಗ್ರಾಮದ ಚೇತನ್ ಕುಮಾರ್ (25) ಎಂಬಾತನನ್ನು ಬಂಧಿಸಿ, 1 ಕೋಟಿ 50 ಲಕ್ಷ ಮೌಲ್ಯದ 23 ಕಾರುಗಳು, 1 ಟೆಂಪೊ ಟ್ರಾವೆಲರ್‍ನ್ನು ವಶಪಡಿಸಿಕೊಂಡಿದ್ದಾರೆ.

          ಆರೋಪಿ ತಿಂಗಳಿಗೆ 30 ಸಾವಿರ ಕೊಡುವುದಾಗಿ ಸುನಿಲ್ ಕುಮಾರ್ ಹಾಗೂ ಇನ್ನಿತರರನ್ನು ನಂಬಿಸಿ 23 ಕಾರುಗಳು ಹಾಗೂ 1 ಟೆಂಪೆÇ ಟ್ರಾವೆಲರ್‍ನ್ನು ಪಡೆದು ಬಾಡಿಗೆಯನ್ನು ಕೊಡದೆ, ವಾಹನವನ್ನು ಹಿಂದಿರುಗಿಸದೆ ಪರಾರಿಯಾಗಿದ್ದನು. ಆರೋಪಿಯ ಬಂಧನಕ್ಕೆ ಜ್ಞಾನಭಾರತಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು.

         ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಆರೋಪಿಯು ರುಕ್ಕಮ್ಮ ಟೂರ್ ಅಂಡ್ ಟ್ರಾವೆಲ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ವೇಳೆ ಪರಿಚಿತರಾದ ಸುನಿಲ್ ಕುಮಾರ್ ಅವರಿಗೆ ತಿಂಗಳಿಗೆ 30 ಸಾವಿರ ಬಾಡಿಗೆ ಕೊಡುವುದಾಗಿ 4 ಕಾರುಗಳನ್ನು ಪಡೆದು ಪ್ರಾರಂಭದಲ್ಲಿ 2 ತಿಂಗಳು ಬಾಡಿಗೆ ನೀಡಿ ನಂಬಿಕೆ ಗಳಿಸಿದ್ದ. ಸುನಿಲ್ ಕುಮಾರ್ ಅವರ ಸ್ನೇಹಿತರನ್ನು ಪರಿಚಯ ಮಾಡಿಕೊಂಡು ಒಟ್ಟು 23 ಕಾರುಗಳು ಹಾಗೂ ಟೆಂಪೊ ಟ್ರಾವೆಲರ್‍ನ್ನು ಬಾಡಿಗೆಗೆ ಪಡೆದು ಮಾಲೀಕರ ಸಂಪರ್ಕಕ್ಕೂ ಸಿಗದೆ . ವಾಹನಗಳೊಂದಿಗೆ ಪರಾರಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ.ಆರೋಪಿಯ ಬಂಧನದಿಂದ 24 ವಾಹನಗಳವು ಪ್ರಕರಣಗಳು ಪತ್ತೆಯಾಗಿವೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here