ಜೈನ ಸಮಾಜದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವ

0
3

ಹಿರಿಯೂರು :

       ನಗರದ ಜೈನಸಂಘದ ನೇತೃತ್ವದಲ್ಲಿ ಶ್ರೀಭಗವಾನ್ ಮಹಾವೀರ್ ಜಯಂತೋತ್ಸವವನ್ನು ನಗರದ ಜೈನ ಮಂದಿರದಲ್ಲಿ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.

      ಆನಂತರ ಭಗವಾನ್ ಮಹಾವೀರರ ಭಾವಚಿತ್ರವನ್ನು ಜೈನಮಂದಿರದಿಂದ ಬೆಳ್ಳಿರಥದಲ್ಲಿ ಕುಳ್ಳಿರಿಸಿ ಚರ್ಚ್ ರಸ್ತೆ, ಹುಳಿಯಾರು ರಸ್ತೆ ಹಾಗೂ ಪ್ರಧಾನ ರಸ್ತೆ ಮಾರ್ಗದ ಮೂಲಕ ಜಯಂತೋತ್ಸವ ಮೆರವಣಿಗೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.

      ಈ ಕಾರ್ಯಕ್ರಮದಲ್ಲಿ ಜೈನ ಸಮಾಜದ ಮುಖಂಡರುಗಳಾದ ಆರ್.ಬಾಬುಲಾಲ್ ಬಲಾರ್, ಗೌತಮ್‍ಚಂದ್, ದಲಿಚಂದ್, ಸುರೇಶ್‍ಕುಮಾರ್, ಪ್ರಕಾಶ್‍ಕುಮಾರ್ ಗುಲೇಜಾ, ಆರ್.ಜಯಂತಿಲಾಲ್ ಬಲಾರ್, ಅಶೋಕ್‍ಜೈನ್, ಕಿಶೋರ್ ಕುಮಾರ್, ರೇಖ್‍ಚಂದ್, ಗೌತಮ್‍ಚಂದ್, ವಿಜಯ್‍ಕುಮಾರ್, ಕೈಲಾಶ್‍ಕುಮಾರ್, ಮಹಾವೀರಕುಮಾರ್, ಪಾರಸಮಲ್, ರಾಜಕುಮಾರ್, ವೇದ್ ಪರಿವಾರ ಹಾಗೂ ಸಮಾಜದ ಸರ್ವ ಸದಸ್ಯರು ಮತ್ತು ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here