ಮಹಿಳೆಯರು ಸಮಾಜದಲ್ಲಿನ ಕಟ್ಟುಪಾಡುಗಳಿಗೆ ಬಲಿಯಾಗಬೇಡಿ :ಹುಲ್ಲಿಮನಿ ತಿಮ್ಮಣ್ಣ

ಜಗಳೂರು :

        ಮಹಿಳೆಯರು ಕೌಟುಂಬಿಕ ಸಂಪ್ರದಾಯದ ಕಟ್ಟುಪಾಡುಗಳಿಗೆ ಬಲಿಯಾಗದೆ ಧೃಢಸಂಕಲ್ಪದೊಂದಿಗೆ ಮುನ್ನುಗ್ಗಿ ಸರ್ವತೋಮುಖ ಸಾಧನೆ ಮಾಡಬೇಕೆಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಪರಿಶ್ರಮ,ನಿಷ್ಠೆ,ಪ್ರಾಮಾಣಿಕತೆಯಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಥ್ರ್ಯಹೊಂದಿರುವ ಮಹಿಳೆಯರನ್ನು ಇನ್ನೂ ಕೆಲ ಗ್ರಾಮೀಣಬಾಗದಲ್ಲಿ ಉನ್ನತ ವ್ಯಾಸಂಗದಿಂದ ದೂರಉಳಿಸಿ ಅವರಬದುಕಿನಭವಿಷ್ಯವನ್ನುಹಾಳುಮಾಡುತ್ತಿರುವುದಕ್ಕೆ ವಿಷಾಧ ವ್ಯಕ್ತ ಪಡಿಸಿದರು. ಬಡತನಕ್ಕೆ ಮದುವೆ ಪರಿಹಾರವಲ್ಲ ಇಂದು ಸರ್ಕಾರದ ಹತ್ತುಹಲವು ಮಹಿಳಾಪರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೆಳಿದರು.

          ಸಮಾಜದಲ್ಲಿ ಕಿರಿಯಹುದ್ದೆಯಿರಲಿ ಅಥವಾ ಹಿರಿಯ ಹುದ್ದೆ ಇರಲಿ ಕೀಳಿರಿಮೆ ಮನೋಭಾವನೆ ತೊರೆದು ಶ್ರದ್ದೆ ನಿಷ್ಠೆಯಿಂದ ಕಾಯಕಮಾಡಬೇಕು ಆಗಮಾತ್ರ ಅದು ಉತ್ತಮ ಸಾಧನೆಗೈಯಲು ಮೈಲಿಗಲ್ಲಾಗುತ್ತದೆ ಎಂದು ಕಿವಿಮಾತು ಹೇಳಿದರು.

         ಇಂದು ಸಮಾಜಕಲ್ಯಾಣ ಹಾಗೂ ಬಿಸಿಎಂ ಇಲಾಖೆಯಡಿ ಯುಪಿಎಸ್‍ಸಿ ಕೆಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಆಯ್ಕೆಮಾಡುತ್ತಾರೆ ವಿದ್ಯಾರ್ಥಿನೀಯರು ಹೆಚ್ಚಾಗಿ ಸದ್ಬಳಕೆಮಾಡಿಕೊಂಡು ಉತ್ತಮ ವ್ಯಾಸಂಗದೊಂದಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಇಂತಹ ಕಾರ್ಯಕ್ರಮಗಳ ಆಚರಣೆಗೆ ಅರ್ಥಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

           ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೋಕರಾಜ್ ದೊಡ್ಡಮನಿ ಮಾತನಾಡಿ,ಸ್ವಾತಂತ್ರ ಸಿಕ್ಕು 7 ದಶಕಗಳೆ ಕಳೆದರೂ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಇಲಾಖೆಯ ಒಳಗಡೆ ಕರ್ತವ್ಯನಿರ್ವಹಿಸುವ ಉದ್ಯೋಗಿಗಳಿಗೆ ಕಿರುಕುಳಗಳು ಹೆಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಮರ್ಯಾದೆ ಹತ್ಯೆ,ದೇವದಾಸಿ ಪದ್ದತಿ,ಅತ್ಯಾಚಾರದಂತಹ ಘಟನೆಗಳು ಹಾಗೂ ಅನಿಷ್ಠಪದ್ದತಿಗಳು ಸೇರಿಂದತೆ ಬಲವಂತವಾಗಿ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವಂತಹವುಗಳು ಜೀವಂತವಾಗಿ ಸೂತಕದ ಛಾಯೆಯಂತಿವೆ ಎಂದರು.

          ಸಿಡಿಪಿಓ ಭಾರತಿ ಬಣಕಾರ್ ಮಹೀಳೆಯರ ಸಮಸ್ಯೆಗಳು ಮತ್ತು ಸಬಲೀಕರಣ ವಿಷಯಕುರಿತು ಉಪನ್ಯಾಸ ನಿಡಿದರು.
ಇದೇ ವೇಳೆ ಸಿ ಬಸವರಾಜ್ ನೇತೃತ್ವದ ಕಲಾಸ್ಪಂದನ ತಂಡದವರಿಂದ ಜಾನಪದ ಗೀತೆ ಕಾರ್ಯಕ್ರಮ ಆಯೋಜಿಸಿದ್ದರು.

         ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿ.ಕೆ.ಬಸವರಾಜ್ ಕಾರ್ಯಕ್ರಮದ ಆದ್ಯಕ್ಷತೆವಹಿಸಿದ್ದರು.ಸಹಾಯಕ ಪ್ರಾಧ್ಯಾಪಕರುಗಳಾದ ಲಾಲ್‍ಸಿಂಗ್ ನಾಯ್ಕ ಸಲ್ಮಾತಾಜ್ ವಿದ್ಯಾಶ್ರಿ ಗ್ರಂಥಪಾಲಕ ಮಲ್ಲಿಕಾರ್ಜುನ ಕಪ್ಪಿ ಸೇರಿದಂತೆ ಉಪನ್ಯಾಸಕರಾದ ಗಂಗಾಧರ ವೆಂಕಟೇಶ್ ಸೇರಿದಂತೆ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap