ವೈದ್ಯರ ನಿರ್ಲಕ್ಷ್ಯದಿಂದ ಶಾಶ್ವತ ವಿಕಲಾಂಗನಾದ ಮಗು

0
11

ಹರಪನಹಳ್ಳಿ:

        ವೈದ್ಯರ ನಿರ್ಲಕ್ಷ್ಯದಿಂದ ಶಾಶ್ವತ ವಿಕಲಾಂಗನಾಗಿದ್ದ ಮಗನನ್ನು ಎತ್ತಿಕೊಂಡು ಬಂದಿದ್ದ ಮಹಿಳೆ ನೇತ್ರಾವತಿ ಎಂಬುವವರು ಪಟ್ಟಣಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಬಳಿ ತೆರಳಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ಅಂಗಲಾಚಿದರು.

      ಎಂಟು ವರ್ಷದ ಪುತ್ರ ಕೀರ್ತಿರಾಜ್ನನ್ನು ಒಂದು ವರ್ಷದ ಹಿಂದೆ ಮಂಗಳೂರಿನ ಎಎಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದೆ. ಏಳು ತಿಂಗಳು ಆಸ್ಪತ್ರೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರೂ 7 ತಿಂಗಳು ಇದ್ದರೂ ಸಹ ಯಾವುದೇ ಚಿಕಿತ್ಸೆ ನೀಡದೇ ನನ್ನ ಮಗನ ದೇಹದಲ್ಲಿದ್ದ ಜೀವಕೋಶಗಳು ನಾಶಪಡಿಸಿದ್ದಾರೆ. ಇದರಿಂದ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಶಾಶ್ವತ ಅಂಗವಿಕಲನಾಗಿದ್ದಾನೆ ಎಂದು ಎತ್ತುಕೊಂಡಿದ್ದ ಮಗನನ್ನು ತೋರಿಸಿ ಗೋಳಿಟ್ಟರು.

      ಮಹಿಳೆಯ ಮನವಿ ಆಲಿಸಿದ ಸಿದ್ದರಾಮಯ್ಯ ಮಹಿಳೆ ಮತ್ತು ಆಸ್ಪತ್ರೆಗೆ ಸಂಬಂಧಪಟ್ಟ ದಾಖಲೆ ಸಂಗ್ರಹಿಸುವಂತೆ ಸೂಚಿಸಿದರು. ಬಳಿಕ ಶೀಘ್ರ ಆರೋಗ್ಯ ಸಚಿವ ಯು.ಟಿ.ಖಾದರ್ ಅವರೊಂದಿಗೆ ಚರ್ಚಿಸಿ ಆಸ್ಪತ್ರೆ ಮತ್ತು ಡಾಕ್ಟರ್ ವಿರುದ್ಧ ಕ್ರಮ ಜರುಗಿಸುವುದಾಗಿ ಸೂಚಿಸುವುದಾಗಿ ಹೇಳಿ ಮಹಿಳೆಯನ್ನು ಸಮಾಧಾನಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here