ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆಗಳು ಉಚಿತ

0
118

ಬೆಂಗಳೂರು

        ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಬಗೆಯ 58 ‘ರೋಗಗಳ ಪರೀಕ್ಷೆಯನ್ನು ಉಚಿತವಾಗಿ ಪಡೆಯುವ ಅವಕಾಶ ಸಾರ್ವಜನಿಕರಿಗೆ ಒದಗಿಸಲಾಗಿದೆ

        ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ವಿವಿಧ ಬಗೆಯ 58 ‘ರೋಗಗಳ ಪರೀಕ್ಷೆಯ ಸೌಲಭ್ಯವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೂ ವಿಸ್ತರಿಸಲಾಗಿದೆ.ಇದರಿಂದ ಬಡತನ ರೇಖೆಗಿಂತ ಮೇಲ್ಪಟ್ಟವರು ಸೇರಿ ಎಲ್ಲರೂ ಪರೀಕ್ಷೆಗೆ ಒಳಗಾಗಿ ವರದಿ ಪಡೆದುಕೊಳ್ಳಬಹುದು.

          ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಜನೆಯ ಪಟ್ಟಿಯಲ್ಲಿರುವ 58 ರೋಗಪತ್ತೆ ಪರೀಕ್ಷೆಗಳಲ್ಲಿ ತಮ್ಮಲ್ಲಿ ಲಭ್ಯವಿರುವ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಹುದು

          ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬ ಸದಸ್ಯರಿಗೆ ರೋಗಪತ್ತೆ ಪರೀಕ್ಷೆಗಳು ಉಚಿತವಾಗಿದ್ದು, ಇನ್ನು ಕೆಲವು ಪರೀಕ್ಷೆಗಳಿಗೆ ಶೇಕಡ 50ರಷ್ಟು ಶುಲ್ಕ ಪಾವತಿಸಬೇಕಿತ್ತು. ಆದರೆ,ಅದರ ವ್ಯಾಪ್ತಿಯನ್ನು 2018 19 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ರೋಗಪತ್ತೆ ಪರೀಕ್ಷೆಗಳು ಎಂಬ ಕಾರ್ಯಕ್ರಮದಡಿ ಎಲ್ಲಾ ವರ್ಗದ ಜನರಿಗೂ ಸಂಪೂರ್ಣ ಉಚಿತ ರೋಗ ಪತ್ತೆ ಪರೀಕ್ಷೆ ಸೇವೆ ನೀಡುವ ವಿಸ್ತರಣೆ ಮಾಡಿ ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಉಚಿತ ಪರೀಕ್ಷೆಗಳು ?:

         ಹೆಚ್ಚಿನ ಬೆಲೆಯ ಎಂಆರ್ ಐ, ಸಿಟಿ ಸ್ಕ್ಯಾನ್ ಥೈರಾಯ್ಡ್ , ಹೃದಯ ಸಂಬಂಧಿ, ಇಸಿಜಿ, ಎಕೋ, ಮಲೇರಿಯಾ, ಮೂತ್ರ ಪರೀಕ್ಷೆ, ಡೇಂಘೀ, ಅಲ್ಟಾಸೌಂಡ್, ಕೊಬ್ಬಿನಾಂಶ ಸೇರಿದಂತೆ ಎಲ್ಲಾ 58 ಪರೀಕ್ಷೆಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಈಗಾಗಲೇ ಉಚಿತ ಪರೀಕ್ಷೆ ಸೇವೆಯನ್ನು ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿದೆ.

       ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದೊಂದಿಗೆ ಯೋಜನೆ ಜಾರಿಗೆ ಬಂದಿದ್ದು, ರಾಜ್ಯ ವ್ಯಾಪ್ತಿಯ 48 ಜಿಲ್ಲಾ ಮಟ್ಟದ ಆಸ್ಪತ್ರೆಗಳು 146 ತಾಲೂಕು ಮಟ್ಟದ ಆಸ್ಪತ್ರೆಗಳು 2508, ಪ್ರಾಥಮಿಕ ಆರೋಗ್ಯ ಕೇಂದ್ರಗಳು 204 ಸಮುದಾಯ ಆರೋಗ್ಯ ಕೇಂದ್ರಗಳು ಈ ಕಾರ್ಯಕ್ರಮ ವ್ಯಾಪ್ತಿಗೆ ಬರುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಅಧಿಕಾರಿಗಳು ಮಾಹಿತಿ ನೀಡಿದರು.

         ಈ ವಿಶೇಷ ಕಾರ್ಯಕ್ರಮದಿಂದ ಬಡ ಸಾಮಾನ್ಯ ವರ್ಗದವರಿಗೆ, ಕಾರ್ಮಿಕರಿಗೆ ಸಣ್ಣಪುಟ್ಟ ಸರ್ಕಾರಿ ನೌಕರರಿಗೆ ಈ ಯೋಜನೆ ಉಪಯೋಗವಾಗಲಿದೆ . ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಲಾಭವನ್ನು ಕೇಳಿ ಪಡೆಯುವಂತಾಗಬೇಕು ರಕ್ತಕೋಶದ ಉಪನಿರ್ದೇಶಕ ಸ್ವಾತಂತ್ರ್ಯ ಕುಮಾರ್ ಬಣಕಾರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here