ಮೊಬೈಲ್‍ನಲ್ಲಿ ಮಹಿಳೆಯರ ಚಿತ್ರ ವೀಕ್ಷಸಿದ ಬಿ ಎಸ್ ಪಿ ನಾಯಕ

ಬೆಳಗಾವಿ

         ಮಾಜಿ ಸಚಿವ ಬಿಎಸ್ಪಿ ಶಾಸಕ ಎನ್.ಮಹೇಶ್ ವಿಧಾನ ಸಭೆಯಲ್ಲಿ ಮೊಬೈಲ್‍ನಲ್ಲಿ ಮಹಿಳೆಯರ ಚಿತ್ರ ವೀಕ್ಷಣೆ ಮಾಡುವ ಮೂಲಕ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ. ಬೆಳಗಿನ ಕಲಾಪ ಮುಂದೂಡುವ ಮುನ್ನ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಕ್ರಷರ್, ಕ್ವಾರಿಗಳ ಬಗ್ಗೆ ಗಂಭೀರ ಚೆರ್ಚೆ ನಡೆಯುತ್ತಿದ್ದ ವೇಳೆ ಮಾಜಿ ಸಚಿವ ಎನ್ .ಮಹೇಶ್ ಮೊಬೈಲ್ ನಲ್ಲಿ ಮಹಿಳೆಯ ಚಿತ್ರ ವೀಕ್ಷಣೆ ಮಾಡಿದ್ದಾರೆ.

         ಯುವತಿಯ ಪೋಟೊಗಳನ್ನು ಟ್ರೋಲ್ ಮಾಡಿರುವುದು ಕ್ಯಾಮೆರಾಗಳ ಕಣ್ಣಿಗೆ ಸೆರೆಯಾಗಿದೆ. ಬಿಜೆಪಿ ಶಾಸಕರು ನೀಲಿಚಿತ್ರ ವೀಕ್ಷಣೆ ಪ್ರಕರಣದ ಬಳಿಕ ಸದನಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿತ್ತು. ಅಲ್ಲದೆ ಶಾಸಕರ ಮೊಬೈಲ್ ಇಡಲು ಪ್ರತ್ಯೇಕ ರ್ಯಾಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಸದನದ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗಬೇಕಾದರೆ ಮೊಬೈಲನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿರಬೇಕೆಂಬ ನಿಯಮವಿದೆ.

          ಆದರೆ ಶಾಸಕ ಮಹೇಶ್ ಕಲಾಪದಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಹನೂರು ಶಾಸಕ ನರೇಂದ್ರ, ಯತೀಂದ್ರ ಸಿದ್ದರಾಮಯ್ಯ ಜೊತೆ ಕೆಲ ಶಾಸಕರು ಒಂದೆಡೆ ಸೇರಿದಾಗ ಚಿತ್ರವನ್ನು ವೀಕ್ಷಿಸಿ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap