ಹಿಟ್ಲರ್ ರಂತೆ ಆಡಳಿತ ನಡೆಸುತ್ತಿರುವ ಮೋದಿ : ಉಗ್ರಪ್ಪ

ಹರಪನಹಳ್ಳಿ:

         ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವದ ಅಂಶಗಳನ್ನು ಗಾಳಿಗೆ ತೂರಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ ಎಂದು ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

        ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಭಾನುವಾರ ಅಖಿಲ ಭಾರತ ಕಿಸಾನ್ ಸಭಾ ಹಾಘೂ ಪ್ರಗತಿಪರ ಸಾಮೂಹಿಕ ಸಂಘಟನೆಗಳ ಆಶ್ರಯದಲ್ಲಿ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಸ್ಮರಣಾರ್ಥ ಆಯೋಜಿಸಲಾಗಿದ್ದ `ವಿಚಾರ ಸಂಕಿರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      `ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಪ್ರಧಾನಿ ಮೋದಿ ಬರಿ ಮಾತಿನ ಮಂಟಪ ಕಟ್ಟುತ್ತಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳಲಾಗದೇ ದೇಶದ ಜನತೆ ದ್ರೋಹ ಬಗೆದಿದ್ದಾರೆ. ಆಧುನಿಕ ದುರ್ಯೋಧನ ರೀತಿಯಲ್ಲಿ ನಡುವಳಿಕೆ ತೋರುತ್ತಿರುವ ಮೋದಿಯನ್ನು ಮನೆಗೆ ಕಳಿಸುವುದು ಅತ್ಯಂತ ಅನಿವಾರ್ಯತೆ ಆಗಿದೆ’ ಎಂದು ಹೇಳಿದರು.

       ರೆಫೇಲ್ ಹಗರಣ ಶತಮಾನದ ಅತ್ಯಂತ ಅತೀ ದೊಡ್ಡ ಹಗರಣ. ಸಾವಿರಾರು ಕೋಟಿ ಹಣ ಭ್ರಷ್ಟಾಚಾರ ನಡೆದಿದೆ. ಸುರಕ್ಷ ಕಚೇರಿಯಲ್ಲಿರುವ ದಾಖಲೆಗಳು ಕಳ್ಳತನವಾಗಿವೆ ಎಂದು ಹೇಳಿ ಹಗರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಐದು ವರ್ಷದ ಆಡಳಿತದಲ್ಲಿ ಯಾವುದೇ ಜನಪರ ಯೋಜನೆ ಯಶಸ್ವಿ ಆಗದಿರುವುದರಿಂದ ಈಗ ಚುನಾವಣೆ ಸಂದರ್ಭದಲ್ಲಿ ರಾಮನ ಜಪಕ್ಕೆ ಶರಣಾಗಿದ್ದಾರೆ’ ಎಂದು ಟೀಕಿಸಿದರು.

     ಮುಖ್ಯಮಂತ್ರಿ ಕುಮಾರಸ್ವಾಮಿ `ರಿಮೋಟ್ ಕಂಟ್ರೋಲ್’ ಸಿಎಂ ಎಂದು ಟೀಕಿಸಿರುವ ಮೋದಿ ತಾವೇ ಸ್ವತಃ ಆರೆಸ್ಸೆಸ್ ಕಪಿಮುಷ್ಠಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕಪ್ಪು ಹಣ ವಾಪಾಸ, 2 ಕೋಟಿ ಉದ್ಯೋಗ ಸೇರಿದಂತೆ ಯಾವುದೇ ಭರವಸೆ ಈಡೇರಿಸಿಲ್ಲ. ಯುವಕರು ಪಕೋಟ್ ಮಾರಾಟ, ಬೀದಿ ವ್ಯಾಪಾರ ಮಾಡುತ್ತಿರುವುದರಿಂದ ನಿರುದ್ಯೋಗ ನಿವಾರಣೆ ಆಗಿದೆ ಎಂದು ಹೇಳಿ ವಿದ್ಯಾವಂತರಿಗೆ ದೊಡ್ಡ ಅಪಮಾನ ಮಾಡಿ ಅವರ ಜೀವನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.

       ಮಾತು ಎತ್ತಿದರೆ ರಾಮನ ಜಪ ಮಾಡುವ ಬಿಜೆಪಿಯವರಿಗೆ ವಾಸ್ತವ್ಯವಾಗಿ ರಾಮಾಯಣದ ಮೂಲ ಆಶಯಗಳೇ ಗೊತ್ತಿಲ್ಲ. ಪುಲ್ವಾಮಾ ದಾಳಿ ತಡೆಯಬೇಕಾಗಿದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಘಟನೆ ನಂತರ ನೈತಿಕ ಹೊಣೆಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಿತ್ತು. ಅದು ಸೈನಿಕರ ವಿಷಯವನ್ನೇ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ದೂರಿದರು.

     ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ಪ್ರಪಂಚದ ಶ್ರೇಷ್ಠ ಸಂವಿಧಾನವನ್ನು ಬದಲಿಸುವ ಕುತಂತ್ರಗಳು ನಡೆಯುತ್ತಿರುವುದು ಖೇದಕರ ವಿಷಯ. ದೇಶದ ಗಡಿ ರಕ್ಷಿಸುವ ಹಾಗೆ ದೇಶದ ಆತಂರಿಕವಾಗಿ ನಡೆಯುವು ದುಷ್ಕೃತ್ಯಗಳಿಗೆ ತಡೆವೊಡ್ಡಬೇಕಿದೆ. ನಮ್ಮ ಧರ್ಮವನ್ನು ಪ್ರೀತಿಸುವ ಜತೆಗೆ ಅನ್ಯ ಧರ್ಮವನ್ನು ಗೌರವಿಸುವ ಮನೋಭಾವ ರೂಢಿಸಿಕೊಳ್ಳಬೇಕು’ ಎಂದರು.
ಉಚ್ಛ ನ್ಯಾಯಾಲದ ನ್ಯಾಯವಾದಿ ಎಸ್.ಬಾಲನ್ `ಹಿಂದುತ್ವ ಮತ್ತು ಹಾಗೂ ನಮ್ಮ ಮುಂದಿನ ಸವಾಲಗಳು’ ಹಾಗೂ ಬೆಂಗಳೂರಿನ ಶಿಕ್ಷಣ ತಜ್ಞ ಶ್ರೀಪಾದ ಅವರು `ಬಹುಸಂಖ್ಯಾತವಾದದ ಮತಾಂಧತೆ ಮತ್ತು ಯುವ ಜನತೆ’ ಕುರಿತು ವಿಷಯ ಮಂಡಿಸಿದರು. ಸಿಪಿಐ ಹಿರಿಯ ಮುಖಂಡ ಕೆ.ಬಿ.ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು.

       ಎ.ಐ.ಕೆ.ಎಸ್. ರಾಜ್ಯ ಮಂಡಳಿ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್, ಪ್ರಧ್ಯಾಪಕ ಪ್ರೊ.ಎಂ.ತಿಮ್ಮಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ರಾವ್, ನ್ಯಾಯವಾದಿಗಳಾದ ಎಲ್.ಎಚ್. ಅರುಣಕುಮಾರ, ಹಲಗೇರಿ ಮಂಜಪ್ಪ, ಮುಖಂಡರಾದ ಎಂ.ಪಿ.ಬಸವನಗೌಡ, ಎ.ಎಂ.ವಿಶ್ವನಾಥ್, ಇದ್ಲಿರಾಮಪ್ಪ, ಅರಸನಾಳು ಸಿದ್ದಪ್ಪ, ಎಲ್.ವೀಣಾ, ಕರಡಿದುರ್ಗದ ಚೌಡಪ್ಪ, ಹಾದಿಮನಿ ನಾಗರಾಜ, ಎಲ್.ಪಿ.ಸುಭದ್ರಮ್ಮ ಅಂಜಿನಪ್ಪ ಲೋಕೊಕೆರೆ, ಐರಣಿ ಚಂದ್ರು, ಎ.ಡಿ.ದ್ವಾರಕೀಶ್ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap